70 ಗಂಟೆ ಕೆಲಸ ಮಾಡಬೇಡಿ ವಾರಕ್ಕೆ 5 ದಿನ ಸಾಕು: ಯೂಟರ್ನ್ ತೆಗೆದುಕೊಂಡ ಇನ್ಫೋಸಿಸ್ "ನಾರಾಯಣ ಮೂರ್ತಿ"! Narayana Murthy
Infosys' Narayana Murthy: ದೇಶ ಉದ್ಧಾರ ಆಗಬೇಕಾದರೆ ಯುವಕರು ವಾರಕ್ಕೆ ಬರೋಬ್ಬರಿ 70 ಗಂಟೆ ಕೆಲಸ ಮಾಡಬೇಕು ಆಗಮಾತ್ರ ಅಭಿವೃದ್ಧಿ ಸಾಧ್ಯ ಅಂತ ಹೇಳಿದ್ದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಕೊನೆಗೂ ತಮ್ಮ ಹೇಳಿಕೆಯಿಂದ ಯೂಟರ್ನ್ ತೆಗೆದುಕೊಂಡಿದ್ದಾರೆ. ಈ ಹೇಳಿಕೆಯಿಂದ ಮಾತ್ರವಲ್ಲ ಕೊನೆಗೂ ಉದ್ಯೋಗಿಗಳಿಗೂ ಪರ್ಸನಲ್ ಲೈಫ್ ಇರುತ್ತೆ ಎನ್ನುವುದನ್ನು ಮನವರಿಕೆ ಮಾಡಿಕೊಂಡಿದ್ದಾರೆ. ನಾನು ಪರ್ಸನಲ್ ಹಾಗೂ ಕೆಲಸದಲ್ಲಿ ವ್ಯತ್ಯಾಸ ನೋಡುವುದಿಲ್ಲ. ಪರ್ಸನಲ್ ಹಾಗೂ ಜಾಬ್‌ನ ನಡುವೆ ವ್ಯತ್ಯಾಸ ಇರಬಾರದು. ನಾನು ಸಾಯುವರೆಗೂ 70 ಗಂಟೆ ಕೆಲಸ ಮಾಡಬೇಕು ಎನ್ನುವ ಮಾತಿನಿಂದ ಹಿಂದೆ ಸರಿಯಲ್ಲ ಎಂದು ಹೇಳಿದ್ದ ನಾರಾಯಣ ಮೂರ್ತಿ ಅವರು ಕೊನೆಗೂ ಯೂಟರ್ನ್ ತೆಗೆದುಕೊಂಡಿದ್ದಾರೆ. ಆದರೆ ಅವರು ಈ ವಿಚಾರವಾಗಿ ಎಲ್ಲೂ ನೇರ ಹೇಳಿಕೆ ಕೊಟ್ಟಿಲ್ಲ. ಕಂಪನಿ ಆ ಕೆಲಸವನ್ನು ಶುರು ಮಾಡಿದೆ!
ಒಂದು ವರ್ಷಗಳ ಕಾಲ ದೇಶದಲ್ಲಿ ಉದ್ಯೋಗಿಗಳು ಎಷ್ಟು ಸಮಯ ಕೆಲಸ ಮಾಡಬೇಕು ಎನ್ನುವ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಿತ್ತು. ನಾರಾಯಣ ಮೂರ್ತಿ ಸೇರಿದಂತೆ ವಿವಿಧ ಉದ್ಯಮಿಗಳು ವಾರಕ್ಕೆ 70 ರಿಂದ 100 ಗಂಟೆ ಕೆಲಸ ಮಾಡಬೇಕು ಅಂತ ಹೇಳಿದ್ದರು. ಈ ಹೇಳಿಕೆಗೆ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಯೊಬ್ಬರಿಗೂ ಮನೆ - ಕುಟುಂಬ ಹಾಗೂ ಮಕ್ಕಳು ಅಂತ ಇರುತ್ತಾರೆ. ಕೆಲಸವೇ ಜೀವನ ಅಲ್ಲ ವೈಯಕ್ತಿಕ ಜೀವನ ಎನ್ನುವುದು ಸಹ ಇರುತ್ತದೆ. ಹೀಗಾಗಿ 70 ಗಂಟೆ ಕೆಲಸ ಎನ್ನುವುದು ರಾಂಗ್ ಕಾನ್ಸೆಪ್ಟ್ ಎಂದು ಹಲವರು ವಾದ ಮಾಡಿದ್ದರು. ಇಷ್ಟೆಲ್ಲಾ ವಾದ - ಚರ್ಚೆಗಳ ಹೊರತಾಗಿಯೂ ನಾರಾಯಣ ಮೂರ್ತಿ ಅವರು, ಬೇರೆ ಅವರ ಬಗ್ಗೆ ಗೊತ್ತಿಲ್ಲ ನಾನು 70 ಗಂಟೆ ಕೆಲಸ ಮಾಡುವುದರಲ್ಲಿ ವಿಶ್ವಾಸ ಇರಿಸಿದ್ದೇನೆ ಎಂದಿದ್ದರು.

ಇದೀಗ ಕೊನೆಗೂ ಸ್ವಲ್ಪ ರೆಸ್ಟ್ ಮಾಡಿ ಎಂದು ನಾರಾಯಣ ಮೂರ್ತಿ ಅವರ ಇನ್ಫೋಸಿಸ್ ಕಂಪನಿ ಹೇಳುತ್ತಿದೆ. ಈ ಹೇಳಿಕೆಯನ್ನು ಉದ್ಯೋಗಿಗಳು ಹಾಗೂ ಜನ ಸ್ವಾಗತಿಸಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು 70 ಗಂಟೆ ಕೆಲಸ ಮಾಡಬೇಕು ಅಂತ ಹೇಳಿದ್ದು ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ತಂತ್ರಜ್ಞಾನ ದೈತ್ಯ ಕಂಪನಿಯ ಬಗ್ಗೆ ವಿಮರ್ಶೆ ಶುರುವಾಗಿತ್ತು. ಇದೀಗ ಇನ್ಫೋಸಿಸ್, ಉದ್ಯೋಗಿಗಳು ತಮ್ಮ ಕೆಲಸ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ & work life balance ಕಂಡುಕೊಳ್ಳಬೇಕು ಎಂದು ಹೇಳಿದೆ. ಈ ರೀತಿ ಇನ್ಫೋಸಿಸ್ ಹೇಳಿರುವುದು ಆಶ್ಚರ್ಯ ಹಾಗೂ ಸಂತೋಷವನ್ನು ಏಕಕಾಲಕ್ಕೆ ಉಂಟು ಮಾಡಿದೆ.
ಉದ್ಯೋಗಿಗಳಿಗೆ ರೆಸ್ಟ್ ಮಾಡುವುದಕ್ಕೆ ಮನವಿ: ಇನ್ನು ಇನ್ಫೋಸಿಸ್ ಐಟಿ ಸಂಸ್ಥೆಯು ಉದ್ಯೋಗಿಗಳು ಎಷ್ಟು ಸಮಯದಿಂದ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಿಕೊಂಡು ಸಲಹೆ ನೀಡುತ್ತಿದೆ ಎಂದು ಹೇಳಲಾಗಿದೆ. ಕಂಪನಿಯ ಉದ್ಯೋಗಿಗಳು ಮಿತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಕೆಲಸ ಮಾಡುತ್ತಿರುವವರಿಗೆ HR ನಿಂದ ಇಮೇಲ್ ಕಳುಹಿಸಲಾಗುತ್ತಿದೆ. ದಿನಕ್ಕೆ 9.15 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಆರೋಗ್ಯ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ದೇಶದ ಎರಡನೇ ಅತಿದೊಡ್ಡ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ ಸಂಸ್ಥೆ ತನ್ನ ಉದ್ಯೋಗಿಗಳು ವಾರಕ್ಕೆ ಸರಾಸರಿ ಐದು ದಿನಗಳು 9.15 ಗಂಟೆಗಳು ಮಾತ್ರ ಕೆಲಸ ಮಾಡಬೇಕೆಂದು ಹೇಳಿದೆ. ಯಾರಾದರೂ ಅಗತ್ಯಕ್ಕಿಂತ ಹೆಚ್ಚು ಸಮಯ ಕೆಲಸ ಮಾಡುತ್ತಿರುವುದು ಕಂಡುಬಂದರೆ, ಆ ಉದ್ಯೋಗಿಗೆ ಕೆಲಸ-ಜೀವನದ ಸಮತೋಲನದ ಮಹತ್ವವನ್ನು ನೆನಪಿಸುವ ಸಂದೇಶವನ್ನು ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಈಗಲಾದರೂ ಬದಲಾದರಲ್ಲ: ಈಗಲಾದರೂ ಇನ್ಫೋಸಿಸ್ ಈ ವಿಚಾರದಲ್ಲಿ ಬದಲಾವಣೆ ಆಗಿದೆಯಲ್ಲ ಎಂದು ಹಲವರು ಸೋಷಿಯಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಹಾಗೂ ಕೆಲಸದ ನಡುವೆ ವ್ಯತ್ಯಾಸವಿರಬೇಕು. ಜೀವನಕ್ಕಾಗಿ ಕೆಲಸ, ಕೆಲಸಕ್ಕಾಗಿಯೇ ಜೀವನ ಅಲ್ಲ ಎಂದು ಹೇಳಿದ್ದಾರೆ.












Click it and Unblock the Notifications