ಇದು ಕೆಲವು ದಿನದ ಹೋರಾಟವಲ್ಲ ಬೆಂಗಳೂರು ಬಿಡಬೇಡಿ; ಸಿಎಂ
ಬೆಂಗಳೂರು, ಜುಲೈ 09 : "ಈ ಹೋರಾಟ ಒಂದು ಅಥವ ಎರಡು ದಿನಕ್ಕೆ ಮುಗಿಯುವುದಿಲ್ಲ. ಕೊರೊನಾ ವೈರಸ್ ಸೋಂಕು ಹಳ್ಳಿಗಳಿಗೆ ಹಬ್ಬುವುದು ಬೇಡ. ನಗರ ಬಿಟ್ಟು ಹೋಗಬೇಡಿ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕರೆ ನೀಡಿದರು.
Recommended Video
ಬಿ. ಎಸ್. ಯಡಿಯೂರಪ್ಪ ಬೆಂಗಳೂರು ನಗರದಲ್ಲಿ ನಿರ್ಮಾಣ ಮಾಡಿರುವ ಕೋವಿಡ್ ಆರೈಕೆ ಕೇಂದ್ರವನ್ನು ಗುರುವಾರ ಪರಿಶೀಲಿಸಿದರು. ಹಲವಾರು ಸಚಿವರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು ನಗರದ ಹೊರವಲಯದ ಮಾದಾವರ ಬಳಿಯ ಬಿಐಇಸಿಯಲ್ಲಿ ನಿರ್ಮಾಣ ಮಾಡಿರುವ ಕೋವಿಡ್ ಆರೈಕೆ ಕೇಂದ್ರ 10,100 ಹಾಸಿಗೆಗಳನ್ನು ಹೊಂದಿದೆ. ಪ್ರತಿ 100 ರೋಗಿಗಳಿಗೆ ಒಬ್ಬರು ಡಾಕ್ಟರ್ ಮತ್ತು ಇಬ್ಬರು ನರ್ಸ್‌ಗಳನ್ನು ನಿಯೋಜನೆ ಮಾಡಲಾಗುತ್ತದೆ.

ಕೋವಿಡ್ ಆರೈಕೆ ಕೇಂದ್ರವನ್ನು ಪರಿಶೀಲನೆ ಮಾಡಿದ ಬಳಿಕ ಮಾತನಾಡಿದ ಯಡಿಯೂರಪ್ಪ, "10,100 ಹಾಸಿಗೆಗಳ ಜೊತೆ ಅಗತ್ಯ ಮೂಲ ಸೌಕರ್ಯಗಳನ್ನು ಮಾಡಲಾಗಿದೆ. ವೈದ್ಯರು, ನರ್ಸ್‌ಗಳನ್ನು ಇಲ್ಲಿಗೆ ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.

"ಬೆಂಗಳೂರು ಬಿಟ್ಟು ಊರುಗಳಿಗೆ ಹೋಗಬೇಡಿ. ಗ್ರಾಮೀಣ ಪ್ರದೇಶಕ್ಕೆ ಸೋಂಕು ಹರಡದಂತೆ ನಾವು ಎಚ್ಚರವಹಿಸಬೇಕಿದೆ. ಇದು ಒಂದು ಅಥವ ಎರಡು ದಿನಕ್ಕೆ ಮುಗಿಯುವ ಹೋರಾಟವಲ್ಲ" ಎಂದು ಯಡಿಯೂರಪ್ಪ ಜನರಿಗೆ ಕರೆ ನೀಡಿದರು.












Click it and Unblock the Notifications