ರೇಷ್ಮೆ ಬೆಳೆ; ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಮಹಿಳೆ

ಬೆಂಗಳೂರು, ಮಾರ್ಚ್ 06: ರೇಷ್ಮೆ ಬೆಳೆಗಾರರು ಅತಿ ಕಡಿಮೆ ಇರುವ ದೊಡ್ಡಬಳ್ಳಾಪುರಕ್ಕೆ 2020-21ನೇ ಸಾಲಿನ ರಾಜ್ಯ ಮಟ್ಟದ ಪ್ರಗತಿ ಪರ ಮಹಿಳಾ ರೇಷ್ಮೆ ಬೆಳೆಗಾರರ ವಿಭಾಗದಿಂದ ನೀಡುವ ಪ್ರಶಸ್ತಿ ಸಿಕ್ಕಿದೆ.

ದೊಡ್ಡಬಳ್ಳಾಪುರದ ತೂಬಗೆರೆ ಹೋಬಳಿ ಸೀಗೆಹಳ್ಳಿ ಗ್ರಾಮದ ರತ್ನಮ್ಮ ರಾಮಯ್ಯಗೆ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿ ಸಂದಿರುವುದು ಹುಬ್ಬೇರಿಸುವಂತೆ ಮಾಡಿದೆ. ಇದರೊಂದಿಗೆ ಕಸಬಾ ಹೋಬಳಿ ಮರಳೇನಹಳ್ಳಿ ಗ್ರಾಮದ ತಿಮ್ಮರಾಜು ಗಂಗಪ್ಪ ಪುರುಷ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ನಂದಿ ಬೆಟ್ಟ, ಚನ್ನರಾಯಸ್ವಾಮಿ ಬೆಟ್ಟದ ಸಾಲಿನಲ್ಲಿ ಬರುವ ಸೀಗೆಹಳ್ಳಿ ಗ್ರಾಮದ ರತ್ಮಮ್ಮ ರಾಮಯ್ಯ ರಾಜ್ಯ ಮಟ್ಟದ ಸಾಧನೆ ಮಾಡಿ ದೊಡ್ಡಬಳ್ಳಾಪುರ ತಾಲೂಕಿಗೆ ಮಾದರಿಯಾಗಿದ್ದಾರೆ. 2020-21ನೇ ಸಾಲಿನಲ್ಲಿ ಕೇವಲ 1 ಎಕರೆ ಪ್ರದೇಶದಲ್ಲಿ ವಾರ್ಷಿಕವಾಗಿ ಉತ್ಪದನಾ ವೆಚ್ಚವನ್ನು ಹೊರತುಪಡಿಸಿ 3.83ಲಕ್ಷ ರೂಪಾಯಿ ಲಾಭ ಪಡೆಯುತ್ತಿದ್ದಾರೆ.

ರೈತರು ಸಾಲ ಮಾಡಿ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಸಾಧಕ ರೈತರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು, ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ನಮ್ಮನ್ನು ನಾವು ಸಮರ್ಥವಾಗಿ ಆರ್ಥಿಕವಾಗಿ ಕಟ್ಟಿಕೊಳ್ಳಬಹುದು ಎಂಬ ಅವರ ಸಾಧನೆ ಎಲ್ಲಾ ರೈತರಿಗೂ ಮಾದರಿಯಾಗಬೇಕಿದೆ.

Doddaballapur Women Bagged State Award For Silk Crop

ಅದೇ ರೀತಿ ದೊಡ್ಡಬಳ್ಳಾಪುರದ ಕಸಬಾ ಹೋಬಳಿ ಮರಳೇನಹಳ್ಳಿ ತಿಮ್ಮರಾಜು ಗಂಗಪ್ಪ 2020-21 ನೇ ಸಾಲಿನಲ್ಲಿ 1 ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಿಕೊಂಡು, ವಾರ್ಷಿಕ ಸುಮಾರು 5 ಬೆಳೆಗಳನ್ನು ಬೆಳೆಯುತ್ತಾ ವಾರ್ಷಿಕವಾಗಿ 3.5ಲಕ್ಷ ರೂಪಾಯಿಗಳಷ್ಟು ಲಾಭ ಗಳಿಸಿದ್ದಾರೆ.

ಕಳೆದ 25 ವರ್ಷದಿಂದ ರೇಷೆ ಕೃಷಿಯನ್ನು ಮಾಡಿಕೊಂಡುಬಂದಿದ್ದೇವೆ. 10 ವರ್ಷಗಳ ಹಿಂದೆ ಪ್ರತಿ ಕೆಜಿಗೂ 150 ರಿಂದ 300 ರೂಪಾಯಿಗಳ ಬೆಲೆ ಇತ್ತು. ಕೆಳೆದ 10 ವರ್ಷಗಳ ನಂತರ ರೇಷ್ಮೆ ಇಲಾಖೆಯ ಸಹಯೋಗದಿಂದ ರೇಷ್ಮೆ ಕೃಷಿ ಲಾಭದಾಯಕವಾಗಿದೆ. ಶೇಕಡ 100ಕ್ಕೂ ಹೆಚ್ಚು ಇಳುವರಿಯನ್ನು ಪ್ರಸ್ತುತ ಪಡೆಯುತ್ತಿದ್ದೇವೆ. 900 ರೂಪಾಯಿಗಳ ವರೆಗೆ ಪ್ರತಿ ಕೆಜಿಗೆ ದಾರಣೆ ಇದೆ.

ಈ ಹಿಂದೆ ರೇಷ್ಮೆ ಇಲಾಖೆ ಬಗ್ಗೆ ನಮಗೆ ತಿಳಿದಿರಲ್ಲಿ ರೇಷ್ಮೆ ಇಲಾಖೆ ಸಹಕಾರ ಸಿಕ್ಕ ನಂತರ ಹಿಪ್ಪು ನೇರಳೆ ಬೆಳೆಯಲು ನರೇಗದಿಂದ ಸಹಾಯದನ, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಹಾಯ ದನ ಇಲಾಖೆಯಿಂದ ದೊರೆತಿದೆ. ಇದರಿಂದ ವರ್ಷಕ್ಕೆ ಸುಮಾರು 11 ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ. ಈ ರೀತಿ ಸರ್ಕಾರದಿಂದ ದೊರೆಯುವ ಸರ್ಕಾರದ ಸಹಾಯ ದನವನ್ನು ಪಡೆಯುವುದು ಮುಖ್ಯವಲ್ಲ, ಇದನ್ನು ಸಮರ್ಪಕವಾಗಿ ಬೆಳೆಸಿಕೊಳ್ಳುವಲ್ಲಿ ಶ್ರಮ, ಶ್ರದ್ದೆಯಿಂದ ಕಾರ್ಯ ನಿರ್ವಹಿಸಿದರೆ ಫಲ ಖಂಡಿತಾ ಸಿಗುತ್ತದೆ.

2006-17 ರಿಂದ ರತ್ನಮ್ಮ ರಾಮಯ್ಯ ಮಹಿಳಾ ರೇಷ್ಮೆ ಪ್ರಗತಿಪರ ರೈತರಾಗಿ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿ ಪಡೆದುಕೊಂಡಿದ್ದಾರೆ. 100 ದ್ವಿತಳಿ ಮೊಟ್ಟೆಗೆ 1000ಸಹಾಯ ದನ ಪಡೆಯುತ್ತಿದ್ದು, 3.10ಎಕರೆ ಭೂಮಿಯ ಪೈಕಿ, 1ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ.

ಹಿಪ್ಪು ನೇರಳೆ ಬೆಳೆಯಲು ನರೇಗಾದಲ್ಲಿ ಸಹಾಯ ದನ, ಹುಳು ಸಾಕಾಣಿಕೆ ಸಲಕರಣೆ, ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೂ ಸಹಾಯ ದನ ಪಡೆದಿದ್ದಾರೆ. ಈ ಮೂಲಕ ವಾರ್ಷಿಕವಾಗಿ 10ಕ್ಕೂ ಹೆಚ್ಚು ಬೆಳೆಗಳನ್ನು ಅವರು ಬೆಳೆಯುವ ಮೂಲಕ ಶೇಕಡ 100ಕ್ಕೂ ಹೆಚ್ಚು ಇಳುವರಿ ಪಡೆಯುವ ಮೂಲಕ ರಾಜ್ಯದಲ್ಲೇ ಪ್ರಥಮ ಪ್ರಶಸ್ತಿ ಪಡೆದ್ದಾರೆ.

ದೊಡ್ಡಬಳ್ಳಾಪುರ ರೇಷ್ಮೆ ಇಲಾಖೆ ಮತ್ತು ಜಿಲ್ಲಾ ರೇಷ್ಮೆ ಇಲಾಖೆ ಹೆಮ್ಮೆ ವ್ಯಕ್ತಪಡಿಸುತ್ತದೆ. ಇಲಾಖೆ ತಾಂತ್ರಿಕ ವರ್ಗ ತಾಲೂಕಿ ರೇಷ್ಮೆ ಬೆಳೆಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. 2020-21ನೇ ಸಾಲಿನಿಂದ ರೇಷ್ಮೆ ಬೆಳೆಗಾರರು ದೊಡ್ಡಬಳ್ಳಾಪುರದಲ್ಲಿ ಹೆಚ್ಚುತ್ತಿದ್ದು, ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕಿನ 35 ಹೆಕ್ಟೇರ್‌ನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ.

ರೇಷ್ಮೆ ಬೆಳೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಶುಕ್ರವಾರ ಸಿಎಂ ಬೊಮ್ಮಾಯಿ ಬಜೆಟ್‌ನಲ್ಲಿ ದ್ವೀತಳಿ ಮೊಟ್ಟೆಗಳ ಶೇಖರಣೆಗೆ ದೇವನಹಳ್ಳಿಯಲ್ಲಿ ರೇಷ್ಮೆ ಶೈತ್ಯಗಾರ ಸ್ಥಾಪನೆಗೆ ಹಣ ಮೀಸಲಿಟ್ಟಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+