ನಿಮ್ಮ ಆಫಿಸ್‌ನಲ್ಲಿ ಕಾಲು ಎಳೆಯೋರು ಜಾಸ್ತಿ ಇದ್ದಾರಾ? ಡೋಂಟ್ ವರಿ, ಹಿಂಗೆ ಮಾಡಿ!
ನಮ್ಮ ಜನ ಉದ್ಧಾರ ಆಗೋದಿಲ್ಲ, ಉದ್ಧಾರ ಆಗೋರನ್ನು ಮುಂದೆ ಹೋಗಲು ಬಿಡೋದು ಇಲ್ಲ.. ಹಿಂಗೆ ಆಗಾಗ ಮಂದಿ ಮಾತಾಡೋದನ್ನು ನಾವು ಮತ್ತು ನೀವೆಲ್ಲ ಕೇಳೆ ಕೇಳಿರ್ತೀವಿ. ಮನುಷ್ಯನ ಹುಟ್ಟು ಗುಣ ಅಸೂಯೆ, ಯಾಕಂದ್ರೆ ಅವನು ಕಷ್ಟ ಪಡೋದಿಲ್ಲ. ಯಾರಾದ್ರು ಕಷ್ಟಪಡುತ್ತಿದ್ದರೆ ಸಹಿಸಿಕೊಳ್ಳಲ್ಲ. ಹೇಗಾದರೂ ಮಾಡಿ ಅವರನ್ನು ಕೆಡಿಸಬೇಕು ಅಂತಾನೇ ಪ್ರಯತ್ನ ಮಾಡೋ 'ಸೆಡೆ'ಗಳೇ ಜಾಸ್ತಿ. ಅದ್ರಲ್ಲೂ ನಿಮ್ಮ ಕಚೇರಿ ಅಂದ್ರೆ ಆಫಿಸ್‌ನಲ್ಲಿ ಹೀಗೆ ಆಡುವ ಸೆಡೆಗಳನ್ನು ಫೇಸ್ ಮಾಡೋದು ಹೇಗೆ? ಬನ್ನಿ ತಿಳಿಯೋಣ.
ಹೌದು, ಬಹುತೇಕರು ಮೈಗಳ್ಳರು. ಸರಿಯಾಗಿ ಕೆಲಸ ಮಾಡದೆ ಕಚೇರಿಯಲ್ಲಿ ಬರೀ ಹರಟೆ ಹೊಡೆದು ತಾವು ಏನೋ ಕಿತ್ತು ದಬಾಕಿದ್ದೀವಿ ಅಂತಾ ಹೇಳೋರೆ ಜಾಸ್ತಿ. ಹೀಗಿದ್ದಾಗ ನೀವು ಮೈಬಗ್ಗಿಸಿ, ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ ಅದನ್ನ ಈ ಮೈಗಳ್ಳರು ಸಹಿಸುವುದಿಲ್ಲ. ಈ ಕಾರಣಕ್ಕೆ, ನಿಮಗೆ ಕೆಲಸದ ಜಾಗದಲ್ಲಿ ಅವರು ತುಂಬಾ ಸಮಸ್ಯೆ ಮಾಡುತ್ತಾರೆ. ನಿಮ್ಮನ್ನೇ ಟಾರ್ಗೆಟ್ ಮಾಡಿ ನಿಮ್ಮ ಕೆಲಸ ಕೆಟ್ಟು ಹೋಗುವಂತೆ ಮಾಡುತ್ತಾರೆ. ಆದ್ರೆ ಇಂತಹ ಕಿರಿಕ್ ಸೆಡೆಗಳನ್ನು ನಿಯಂತ್ರಿಸೋದು ಹೇಗೆ ಗೊತ್ತಾ? ಬನ್ನಿ ಒಂದಷ್ಟು ಸಲಹೆಗಳನ್ನ ತಿಳಿಯೋಣ.

1). 'ಬೊಗಳುವ ನಾಯಿ ಕಚ್ಚುವುದಿಲ್ಲ'
ನೀವು ಮೊದಲು ಒಂದು ವಿಚಾರ ಅರ್ಥ ಮಾಡಿಕೊಳ್ಳಿ, ಯಾವತ್ತೇ ಇದ್ರು 'ಬೊಗಳುವ ನಾಯಿ ಕಚ್ಚುವುದಿಲ್ಲ' ಅಂತಾ. ಯಾಕಂದ್ರೆ ಇಂತಹ ಬೊಗಳುವ ನಾಯಿಗಳ ಕೆಲಸ ಬರೀ ಬೊಗಳಿ ಬೊಗಳಿ ಸುಸ್ತಾಗುವುದು ಅಷ್ಟೇ. ಅದನ್ನ ಬಿಟ್ಟು ಅವರು ನಿಮ್ಮನ್ನು ಏನೂ ಮಾಡೋದಕ್ಕೆ ಆಗಲ್ಲ. ಇದೇ ಕಾರಣಕ್ಕೆ ಬೊಗಳುವ ನಾಯಿ ಬೊಗಳಲಿ ಬಿಡು ಅಂತಾ ಸುಮ್ಮನೆ ಆಗಿಬಿಡಿ. ಕಲ್ಲಲ್ಲಿ ಹೊಡೆಯುವ ಶಕ್ತಿ ನಿಮಗೆ ಇರುತ್ತದೆ, ಆದರೂ ಹೊಡೆಯಬೇಡಿ. ಏಕೆಂದರೆ ಕಚೇರಿ ಅಂದ್ರೆ ಆಫಿಸ್‌ನಲ್ಲಿ ನಿಮ್ಮ ಬಗ್ಗೆಯೇ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ನೀವು ಸುಮ್ಮನಿದ್ರೆ ನಾಯಿ ಬೊಗಳುವಷ್ಟು ಬೊಗಳಿ ತೆಪ್ಪಗೆ ಆಗುತ್ತೆ. ಆಗ ಕಚೇರಿಯಲ್ಲಿ ನಿಮಗೆ ಒಳ್ಳೆಯ ಹೆಸರು ಬರುತ್ತೆ. ಇದೇ ಕಾರಣಕ್ಕೆ ಕಚೇರಿಯಲ್ಲಿ ಜಗಳ ಆದಾಗ ಸುಮ್ಮನೆ ಇರಿ.
2). ಕಾಲು ಎಳೆಯೋರು ಕಾಲು ಕೆಳಗೆ ಇರ್ತಾರೆ
ಇನ್ನೂ ಒಂದು ವಿಚಾರ ಏನು ಅಂದ್ರೆ, ಕಚೇರಿಯಲ್ಲಿ ನಿಮಗೆ ಸುಮ್ಮನೆ ತೊಂದರೆ ಕೊಟ್ಟು ಕಾಡುವ ಸೆಡೆಗಳು ಯವಾತ್ತೂ ನಿಮ್ಮ ಕಾಲು ಕೆಳಗೆ ಇರುತ್ತಾರೆ. ಹೀಗಾಗಿ ಅವರನ್ನು ನೀವು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಯಾಕಂದ್ರೆ ನಿಮ್ಮ ಕಾಲಿನ ಕೆಳಗೆ ಯಾರೋ ಬಿದ್ದಿದ್ದಾರೆ ಬಿಡು ಅಂತಾ ಸುಮ್ಮನಾಗಿ. ಆಗ ನೀವೇ ದೊಡ್ಡವರಾಗುತ್ತೀರಿ. ನಿಮ್ಮ ಕೆಲಸದ ಕಡೆ ಗಮನ ಹರಿಸಿ ಸಾಕು.
3). ನಿಮ್ಮ ಬಾಸ್‌ಗೆ ವಿಚಾರ ತಿಳಿಸಿ
ಸಹಜವಾಗಿ ನಾವು ಯಾರ ಬಗ್ಗೆಯಾದರೂ ಏನಾದರೂ ಹೇಳಲು ಹೋದಾಗ, ಬಾಸ್‌ಗಳಿಗೆ ಅದು ತಪ್ಪು ಅರ್ಥ ತರಿಸುತ್ತೆ. ನಾವು ಇನ್ನೊಬ್ಬರ ಬಗ್ಗೆ ಮಾತನಾಡುತ್ತೇವೆ, ನಮ್ಮದು ಬರೀ ಇದೇ ಕೆಲಸ ಎನ್ನುವಂತೆ ಆಗುತ್ತೆ. ಹೀಗಾಗಿ ನೀವು ನಿಮಗೆ ತೊಂದರೆ ಕೊಡುವವರ ಕುರಿತು ಒಂದು ಅಧ್ಯಯನ ಮಾಡಿ, ಅವರ ತಪ್ಪುಗಳನ್ನ ಸೂಕ್ತವಾಗಿ ಮೇಲಿನವರ ಗಮನಕ್ಕೆ ಕೂಡ ತನ್ನಿ. ಸಾಕ್ಷಿ ಸಮೇತ ಇಂತಹ ಅಹಂಕಾರಿಗಳಿಗೆ ಪಾಠ ಕಲಿಸಿ. ಇದರಿಂದ ನಿಮಗೆ ಒಂದಷ್ಟು ರಿಲೀಫ್ ಸಿಗಬಹುದು.
4). 'ಸೆಡೆ'ಗಳಿಗೆ ಸಹಾಯ ಬೇಡ!
ನಿಮ್ಮ ತಂಡದಲ್ಲಿ ನಿಮಗೆ ಕಾಟ ಕೊಡುವವರಿಂದ ಆದಷ್ಟು ದೂರ ಇರಿ. ಹಾಗೇ ಅವರಿಗೆ ಸಹಾಯ ಮಾಡಬೇಕಾದ ಪರಿಸ್ಥಿತಿ ಬಂದಾಗ ಕೂಡ ಸಹಾಯ ಮಾಡಲು ಹೋಗಬೇಡಿ. ಈ ರೀತಿ ನೀವು ಸಹಾಯ ಮಾಡಿದರೆ ಮುಂದೆ ನಿಮಗೆ ಅವರು ತೊಂದರೆ ಕೊಡಲು ಮತ್ತಷ್ಟು ಸಹಾಯ ಮಾಡಿದಂತೆ ಆಗುತ್ತೆ. ಹೀಗಾಗಿ ತಟಸ್ಥವಾಗಿ ಉಳಿದುಬಿಡಿ, ಆ ದೇವರು ಇದ್ದಾನೆ ನಮ್ಮನ್ನು ಕೊನೆಗೆ ಕಾಪಾಡಲು!
5). ದುಷ್ಟರನ್ನು ಕಂಡರೆ ದೂರ...
ಕೊನೆಯದಾಗಿ ಹೇಳಬೇಕಾದ ಮಾತು ಏನು ಅಂದ್ರೆ ದುಷ್ಟರನ್ನು ಕಂಡರೆ ದೂರ ಇರುವುದೆ ಒಳ್ಳೆಯದು. ಯಾಕಂದ್ರೆ ಅವರು ದುಷ್ಟರು, ಅವರಿಗೆ ಹೊಟ್ಟೆಯಲ್ಲಿ ಬೆಂಕಿ ಹಾಕಿಕೊಂಡು ಓಡಾಡುವುದು ಬಿಟ್ಟರೆ, ನೆಮ್ಮದಿಯಾಗಿ ಇರಬೇಕು ಎಂಬುದು ಗೊತ್ತಿರುವುದಿಲ್ಲ. ಮಾತನ್ನ ಆಡಿದರೆ ಸಾಕು ಬರೀ ವಿಷ ಕಾರುತ್ತಾರೆ. ಹೀಗಾಗಿ ಅವರಿಂದ ಸಾಧ್ಯವಾದಷ್ಟು ಅಂತರವನ್ನ ಕಾಪಾಡಿಕೊಳ್ಳಿ. ಹೀಗಾಗಿ ನಿಮಗೂ ಅದರಿಂದ ಲಾಭವೇ ಹೆಚ್ಚು.
ಇಷ್ಟು ಹೇಳಿ ನಮ್ಮ ಸಲಹೆಯನ್ನ ಮುಗಿಸುತ್ತಾ ಇದ್ದೀವಿ, ಮತ್ತೊಮ್ಮೆ ಒಂದು ಮಾತನ್ನು ಹೇಳಬೇಕು ಅಂದ್ರೆ ಕಾಲು ಎಳೆಯೋರು ಕಾಲು ಕೆಳಗೆ ಇರ್ತಾರೆ. ಹೀಗಾಗಿ ಇಂತಹ ದುಷ್ಟರಿಗೆ ತಲೆಕೆಡಿಸಿಕೊಂಡು ನಿಮ್ಮ ಕೆಲಸದ ವಾತಾವರಣ ಹಾಳು ಮಾಡಿಕೊಳ್ಳಬೇಡಿ. ಒಳ್ಳೆಯವರಿಗೆ ನಿಮ್ಮ ಸ್ನೇಹಿತರ ಪಟ್ಟ ನೀಡಿ ಅವರ ಜೊತೆಗೆ ಉತ್ತಮವಾಗಿ ಒಡನಾಟ ಇರಲಿ. ಹೀಗಿದ್ದರೆ ಮಾತ್ರ ನಿಮಗೆ ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗಲು ಸಾಧ್ಯ.
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications