ರಾಜ್ಯದಲ್ಲಿ ಪುನಃ ಚುನಾವಣೆ ನಡೆಯುತ್ತಾ? ಡಿಕೆಶಿ ಹೇಳಿದ್ದೇನು?
Recommended Video
ಬೆಂಗಳೂರು, ಜುಲೈ 12: ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ರಾಜಕೀಯ ತಿರುವುಗಳ ಬಗ್ಗೆ ಮಾತನಾಡಿದ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, "ಪುನಃ ಚುನಾವಣೆ ನಡೆಯುವ ಪ್ರಶ್ನೆಯೇ ಇಲ್ಲ. ಸರ್ಕಾರನ್ನು ನಾವು ಉಳಿಸಿಕೊಂಡೇ ಉಳಿಸಿಕೊಳ್ಳುತ್ತೇವೆ" ಎಂದಿದ್ದಾರೆ.
"ಬಿಜೆಪಿ ಯಾಕೆ ಅಷ್ಟೊಂದು ಅವಸರ ಮಾಡುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇಡೀ ದೇಶವೂ ಸದ್ಯಕ್ಕೆ ಅವರ ಕೈಯಲ್ಲಿದೆ. ಕೇವಲ ಮೂರ್ನಾಲ್ಕು ರಾಜ್ಯದಲ್ಲಿ ಮಾತ್ರ ಅವರು ಅಧಿಕಾರದಲ್ಲಿಲ್ಲ. ಆದರೂ ಅವರಿಗೇಕೆ ಕಾಂಗ್ರೆಸ್ ಬಗ್ಗೆ ಭಯ ಎಂಬುದು ನನಗೆ ಅರ್ಥವಾಗುತ್ತಿಲ್ಲ" ಎಂದು ಪತ್ರಿಕೆಯೊಂದಕ್ಕೆ ಅವರು ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅವರು ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮತ್ತು ಅವರ ಮೇಲೆ ಬಿಜೆಪಿಯ ಒತ್ತಡವಿದೆ. ಆದರೂ ನಮ್ಮ ಶಾಸಕರು ನಮ್ಮನ್ನು ಬಿಟ್ತು ಹೋಗುವುದಿಲ್ಲ ಎಂದು ಡಿಕೆ ಶಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಎಂದಾದರೆ ಬಿಜೆಪಿ ಮುಖಂಡರೇಕೆ ಮುಂಬೈಗೆ ಎಡತಾಕುತ್ತಿದ್ದಾರೆ? ಬಿಜೆಪಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಮಾಜಿ ಸ್ಪೀಕರ್ ಗಳು ಶಾಸಕರಿರುವ ಹೊಟೇಲಿಗೆ ತೆರಳಿದ್ದೇಕೆ? ಅವರಿಗೆ ಸಂಬಂಧವಿಲ್ಲ ಎಂಮದಾದರೆ ಅವರೇಕೆ ನಮ್ಮ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.
"ಈ ಜಾತ್ಯತೀತ ಸರ್ಕಾರವನ್ನು ನಾವು ಯಾವುದೇ ಕಾರಣಕ್ಕೂ ಬೀಳಲು ಬಿಡಬಾರದು, ಉಳಿಸಲೇಬೇಕು" ಎಂದು ಡಿಕೆ ಶಿ ಹೇಳಿದರು.











Click it and Unblock the Notifications