ಕರ್ನಾಟಕದ ಜಿಲ್ಲಾಸುದ್ದಿಗಳ ತುಣುಕು ನೋಟ

ಬೆಂಗಳೂರು, ಅ,21 : ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಹುಲಿಕರೆ ಗ್ರಾಮದಲ್ಲಿ ಮೂರು ದಿನಗಳಿಂದ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಭಾನುವಾರ ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದಿದ್ದಾರೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಉಂಟಾಗಿದ್ದ ಆತಂಕ ದೂರಾಗಿದೆ.

ಬೆಳಗೊಳ ಮಂಡ್ಯ ನ್ಯಾಷನಲ್ ಪೇಪರ್ ಮಿಲ್ ಆವರಣದಲ್ಲಿ ಭಾನುವಾರ ಸಂಜೆ ಚಿರತೆ ಕಾಣಿಸಿಕೊಂಡಿತ್ತು. ಸ್ಥಳದಲ್ಲಿ ಜನರ ಗಲಾಟೆ ಹೆಚ್ಚಿದ್ದರಿಂದ ಬೆದರಿದ ಚಿರತೆ 50 ಅಡಿ ಉದ್ದದ ಸಿಮೆಂಟ್ ಪೈಪ್ ನೊಳಕ್ಕೆ ಹೆದರಿ ಕುಳಿತಿತ್ತು. ಭಾನುವಾರ ಸಂಜೆಯಿಂದ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ತಡರಾತ್ರಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.

ಸಿಮೆಂಟ್ ಪೈಪ್ ನೊಳಕ್ಕೆ ಚಿರತೆ ಇರುವುದನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು ಅದರ ದ್ವಾರವನ್ನು ಮುಚ್ಚಿದ್ದರು. ಮತ್ತೊಂದು ದ್ವಾರದಲ್ಲಿ ಬೋನು ಅಳವಡಿಸಿದ್ದರು. ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿಗಳು ಚಿರತೆ ಬೋನಿನೊಳಕ್ಕೆ ಬಂದು ಬೀಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರು ದಿನಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ ಚಿರತೆ ಸುಮಾರು 12 ವರ್ಷ ಹಳೆಯದಾದ ಬೆಳಗೊಳ ಮಂಡ್ಯ ನ್ಯಾಷನಲ್ ಪೇಪರ್ ಮಿಲ್ ಆವರಣದ ಗಿಡಗಂಟೆಗಳ ನಡುವೆ ವಾಸ್ತವ್ಯ ಹೂಡಿತ್ತು. ಗ್ರಾಮದ ಎರಡು ಮೇಕೆಗಳನ್ನು ತಿಂದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. (ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ಸಿಕ್ಕಿಬಿದ್ದ ಚಿರತೆ

ಸಿಕ್ಕಿಬಿದ್ದ ಚಿರತೆ

ಶ್ರೀರಂಗಪಟ್ಟಣದ ಹುಲಿಕರೆ ಗ್ರಾಮದಲ್ಲಿ ಮೂರು ದಿನಗಳಿಂದ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ರಾತ್ರಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಉಂಟಾಗಿದ್ದ ಆತಂಕ ದೂರಾಗಿದೆ. ಮೂರು ದಿನಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ ಚಿರತೆ 2 ಮೇಕೆಗಳನ್ನು ತಿಂದು ಹಾಕಿ, ಗ್ರಾಮದಲ್ಲೇ ವಾಸ್ತವ್ಯ ಹೂಡಿತ್ತು.

ಮೈಸೂರು ಪೊಲೀಸರ ನೂತನ ವೆಬ್ ಸೈಟ್

ಮೈಸೂರು ಪೊಲೀಸರ ನೂತನ ವೆಬ್ ಸೈಟ್

ಮೈಸೂರು ಪೊಲೀಸರು ಸಾರ್ವಜನಿಕರ ಅನುಕೂಲಕ್ಕಾಗಿ ನೂತಮ ವೆಬ್‌ಸೈಟ್‌ ಪ್ರಾರಂಭಿಸಿದ್ದಾರೆ. ಸೋಮವಾರ ವೆಬ್ ಸೈಟ್ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಸಲೀಂ, ಠಾಣೆಗೆ ನೇರವಾಗಿ ಬಂದು ದೂರು ನೀಡಲು ಸಾಧ್ಯವಾಗದ ಸಂದರ್ಭಗಳಲ್ಲಿ ಈ ವೆಬ್‌ಸೈಟ್ ಮೂಲಕ ದೂರು ಮತ್ತು ಮಾಹಿತಿ ನೀಡಬಹುದು ಎಂದು ಹೇಳಿದರು. ಆರ್‌ಟಿಐ, ಪಾಸ್‌ಪೋರ್ಟ್ ಅರ್ಜಿ, ಪೊಲೀಸ್ ಪರಿಶೀಲನಾ ಅರ್ಜಿ, ಶಸ್ತ್ರಾಸ್ತ್ರ ಪರವಾನಗಿ ಸೇರಿದಂತೆ ಇತರೆ ಮಾಹಿತಿಗಳನ್ನು ಇದರ ಮೂಲಕ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು. ಅಪರಾಧ ಮತ್ತು ಸಂಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ಭಾವಚಿತ್ರ, ವಿಡಿಯೋ ಕ್ಲಿಪಿಂಗ್‌ಗಳು ವೆಬ್ ಸೈಟ್ ನಲ್ಲಿ ಲಭ್ಯವಿದೆ.

ರಸ್ತೆ ಅಪಘಾತಕ್ಕೆ ಪೇದೆ ಬಲಿ

ರಸ್ತೆ ಅಪಘಾತಕ್ಕೆ ಪೇದೆ ಬಲಿ

ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮುಖ್ಯ ಪೇದೆಯೊಬ್ಬರು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುರುವನೂರು ಪೊಲೀಸ್ ಠಾಣೆಯ ಮುಖ್ಯ ಪೇದೆ ಜಗದೀಶ್ (42) ಮೃತಪಟ್ಟವರು. ಚಿತ್ರದುರ್ಗದ ನಿವಾಸಿಯಾಗಿರುವ ಜಗದೀಶ್ ಭಾನುವಾರ ರಾತ್ರಿ ಮನೆಗೆ ಮರಳುವಾಗ ಈ ಅಪಘಾತ ಸಂಭವಿಸಿದೆ.

ಆರ್.ವಿ.ದೇಶಪಾಂಡೆ ರಾಜೀನಾಮೆಗೆ ಆಗ್ರಹ

ಆರ್.ವಿ.ದೇಶಪಾಂಡೆ ರಾಜೀನಾಮೆಗೆ ಆಗ್ರಹ

ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಬಾಂಡೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ಖಜಾಂಚಿ ಎನ್.ಶ್ರೀನಿವಾಸ್ ಒತ್ತಾಯಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಇತರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ 25 ಸಾವಿರ ವೇತನ ನೀಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ತಿಂಗಳಿಗೆ 8000ದಿಂದ 10,000 ರೂ. ನೀಡಲಾಗುತ್ತಿದೆ. ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿದ ಉನ್ನತ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಸೇವಾ ಭದ್ರತೆ, ಯುಜಿಸಿಯ ನಿಯಮದಂತೆ ತಿಂಗಳಿಗೆ ರೂ. 25,000 ವೇತನ ನಿಗದಿ ಪಡಿಸುವುದು, ಸೇವೆ ಖಾಯಂಗೊಳಿಸುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅ.22ರಂದು ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುವುದಾಗಿ ಹೇಳಿದರು.

ಟೆಕ್ಕಿಗಳಿಂದ ಉತ್ತಮ ಕಾರ್ಯ

ಟೆಕ್ಕಿಗಳಿಂದ ಉತ್ತಮ ಕಾರ್ಯ

ಬೆಂಗಳೂರಿನ ನೂರಾರು ಟೆಕ್ಕಿಗಳು ಒಟ್ಟುಗೂಡಿ ಬುಡಕಟ್ಟು ಜನಾಂಗ ಏಳಿಗೆಗಾಗಿ ಶ್ರಮಿಸಲು ಪಣತೊಟ್ಟಿದ್ದಾರೆ. ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್(KISS) ಸ್ಥಾಪಕ ಡಾ. ಅಚ್ಯುತ ಸಮಂತ ಅವರ ಜತೆ ಟೆಕ್ಕಿಗಳು ಸಮಾಲೋಚನೆ ನಡೆಸಿದ್ದಾರೆ. KISS ಸಂಸ್ಥೆ ಬುಡಕಟ್ಟು ಜನಾಂಗದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ತರಬೇತಿ, ಆರೋಗ್ಯ, ಆಹಾರ, ವಸತಿ ಒದಗಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ : www.kiss.ac.in

ವರ್ಣ ಹಿತ್ತಾಳೆಯ ಮಹಾದ್ವಾರ ಉದ್ಘಾಟನೆ

ವರ್ಣ ಹಿತ್ತಾಳೆಯ ಮಹಾದ್ವಾರ ಉದ್ಘಾಟನೆ

ಮಂಗಳೂರಿನ ಶ್ರೀ ವೀರವಿಟ್ಟಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಸ್ವರ್ಣ ಹಿತ್ತಾಳೆಯ ಮಹಾದ್ವಾರ ವನ್ನು ಶನಿವಾರ ಪರಮಪೂಜ್ಯ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಿದರು. ಈ ಮಹಾದ್ವಾರವನ್ನು ಶ್ರೀಮತಿ ಅನ್ನಪೂರ್ಣ ಆರ್.ಭಂಡಾರ್ ಕಾರ್, ಪಿ. ರಘುವೀರ್ ಭಂಡಾರ್ ಕಾರ್ ದೇವಾಲಯಕ್ಕೆ ಅರ್ಪಿಸಿದ್ದಾರೆ.

ಬೆಳಗಾವಿಯಲ್ಲಿ ನಿಧಿಗಾಗಿ ಶೋಧ

ಬೆಳಗಾವಿಯಲ್ಲಿ ನಿಧಿಗಾಗಿ ಶೋಧ

ಕೇಂದ್ರ ಸರ್ಕಾರ ಉತ್ತರ ಪ್ರದೇಶದ ನಿಧಿ ಶೋಧ ಆರಂಭಿಸಿರುವುದು ಕುತೂಹಲ ಕೆರೆಳಿಸಿದೆ, ಇದರಿಂದ ಐತಿಹಾಸಿಕ ಸ್ಥಳಗಳಲ್ಲಿ ನಿಧಿಗಾಗಿ ಶೋಧನೆ ಪ್ರಾರಂಭವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದ ಹೊರವಲಯದಲ್ಲಿರುವ ಸಂಗೊಳ್ಳಿ ರಾಯಣ್ಣನ ವೀರಗಲ್ಲನ್ನು ಧ್ವಂಸಗೊಳಿಸಿ ದುಷ್ಕರ್ಮಿಗಳು ನಿಧಿಗಾಗಿ ಶೋಧ ನಡೆಸಿರುವ ಸಂಗತಿ ಸೋಮವಾರ ಬೆಳಕಿಗೆ ಬಂದಿದೆ.

ಅಮಟೂರು ಮತ್ತು ಬೈಲಹೊಂಗಲ ನಡುವಿನ ಮುಖ್ಯರಸ್ತೆಯ ಪಕ್ಕದಲ್ಲಿಯೇ ಈ ಜಮೀನಿದ್ದು, ಸ್ಥಳದಲ್ಲಿ ಕಾರು ಬಂದು ಹೋಗಿರುವ ಗುರುತು ಪತ್ತೆಯಾಗಿದೆ. ರಾಯಣ್ಣನ ವೀರುಗಲ್ಲು ಕಿತ್ತು ಎರಡು ಅಡಿ ಆಳ ಅಗೆದ ದುಷ್ಕರ್ಮಿಗಳು ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+