ದಿನೇಶ್ ಗುಂಡೂರಾವ್ ವಿರುದ್ಧ ಎಸ್‌.ಟಿ.ಸೋಮಶೇಖರ್ ಏಕವಚನ ವಾಗ್ದಾಳಿ

ಬೆಂಗಳೂರು, ಸೆಪ್ಟೆಂಬರ್ 27: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅವರು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

Recommended Video

      ಮನೆ ಮುಂದೆ ರಸ್ತೆಯಲ್ಲಿ ಕಾರ್ ಪಾರ್ಕ್ ಮಾಡಿದರೆ ಬೀಳುತ್ತೆ ಫೈನ್ | Oneindia Kannada

      'ಅವನೊಬ್ಬ ಅಯೋಗ್ಯ, ಸಿದ್ದರಾಮಯ್ಯನ ಚೇಲಾ' ಎಂದು ಏಕವಚನದಲ್ಲಿಯೇ ಸಂಭೋದಿಸಿರುವ ಎಸ್‌.ಟಿ.ಸೋಮಶೇಖರ್ 'ಅವನಿಗೆ ಏನು ಯೋಗ್ಯತೆ ಇದೆ' ಎಂದು ಪ್ರಶ್ನೆ ಮಾಡಿದ್ದಾರೆ.

      'ಅವರಪ್ಪನ ಕಾರಣದಿಂದ ಅವನು ಕೆಪಿಸಿಸಿ ಅಧ್ಯಕ್ಷನಾಗಿದ್ದಾನೆ, ಇಲ್ಲದಿದ್ದಾರೆ ಅವನಿಗೆ ಬೇರೆ ಏನು ಅರ್ಹತೆ ಇದೆ' ಎಂದು ಪ್ರಶ್ನೆ ಮಾಡಿದ್ದಾರೆ.

       Disqualified MLA ST Somashekhar Lambasted On Dinesh Gundu Rao

      'ಅವನ ಬಗ್ಗೆ ನಾನು ಏಕೆ ಮಾತನಾಡಬೇಕು, ನಾನು ಮಾಡಿದ್ದು ದೇಶದ್ರೋಹವೆಂದು ಹೇಳಲು ಅವನು ಯಾರು, ನಾವೇನು ದೇಶದ್ರೋಹದ ಕೆಲಸ ಏನು ಮಾಡಿದ್ದೇವೆ' ಎಂದು ಸೋಮಶೇಖರ್ ಪ್ರಶ್ನೆ ಮಾಡಿದ್ದಾರೆ.

      'ಎಲ್ಲ ವಿಷಯ ಸಿದ್ದರಾಮಯ್ಯ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷದ್ ಸೇರಿ ನಿರ್ಣಯಿಸುತ್ತಾರಾ' ಇದೇನು ಸಿದ್ದರಾಮಯ್ಯ ಕಾಂಗ್ರೆಸ್ಸಾ? ಎಂದು ಖಾರವಾಗಿಯೇ ಪ್ರಶ್ನೆ ಮಾಡಿದರು.

      'ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣರಾದವರಿಗೆ ಏಕೆ ನೊಟೀಸ್ ನೀಡಲಿಲ್ಲ ಎಂದು ಪ್ರಶ್ನಿಸಿದ ಸೋಮಶೇಖರ್, ಮೈತ್ರಿ ಸರ್ಕಾರ ಸರಿ ಇಲ್ಲವೆಂದು ಎಲ್ಲಿರಗೂ ಗೊತ್ತಿತ್ತು, ಅದೇ ಕಾರಣದಿಂದ ನಾವು ರಾಜೀನಾಮೆ ನೀಡಿದ್ದೇವೆ' ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+