• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರವಾಹ ಸಂತ್ರಸ್ತರಿಗೆ ಭಾರಿ ಮೊತ್ತದ ನೆರವು ನೀಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜು

|
   ಅನರ್ಹ ಶಾಸಕ MTB ನಾಗರಾಜ್ ಯಡಿಯೂರಪ್ಪಗೆ ಕೋಟಿ ಕೊಟ್ಟಿದ್ದೇಕೆ..?

   ಹೊಸಕೋಟೆ, ಆಗಸ್ಟ್ 13: ಪ್ರವಾಹ ಸಂತ್ರಸ್ತರ ಕಷ್ಟಕ್ಕೆ ಮರುಗಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜು ಅವರು ಬರೋಬ್ಬರಿ ಒಂದು ಕೋಟಿ ರೂಪಾಯಿ ಹಣವನ್ನು ಸಂತ್ರಸ್ತರ ನೆರವಿಗೆ ನೀಡುವುದಾಗಿ ಹೇಳಿದ್ದಾರೆ.

   ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ಎಂಟಿಬಿ ನಾಗರಾಜು ಅವರು, ಪ್ರಹಾವ ಸಂತ್ರಸ್ತರ ನೆರವಿಗಾಗಿ ಎಂಟಿಬಿ ಸಂಸ್ಥೆಯಿಂದ ಒಂದು ಕೋಟಿ ರೂಪಾಯಿ ಚೆಕ್ ಅನ್ನು ಸಿಎಂ ಯಡಿಯೂರಪ್ಪ ಅವರಿಗೆ ನೀಡುವುದಾಗಿ ಹೇಳಿದ್ದಾರೆ.

   ಕುರುಕ್ಷೇತ್ರ ಸಿನಿಮಾ ಸಂಭಾವನೆಯನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದ ನಿಖಿಲ್ ಕುಮಾರಸ್ವಾಮಿ

   ತಮ್ಮ ಮಗನ ಜೊತೆ ಚೆಕ್ ಹಿಡಿದು ಇಂತು ವಿಡಿಯೋಕ್ಕೆ ಮಾತನಾಡಿರುವ ಎಂಟಿಬಿ ನಾಗರಾಜು, 'ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಪ್ರವಾಹದಿಂದಾಗಿ, ಆಸ್ತಿಹಾನಿ, ಬೆಳೆಹಾನಿ, ಜೀವ ಹಾನಿ, ಜಾನುವಾರು ಹಾನಿ ಇನ್ನೂ ಸಾಕಷ್ಟು ಹಾನಿ ಆಗಿದೆ' ಎಂದಿದ್ದಾರೆ.

   'ಪ್ರವಾಹ ಸಂತ್ರಸ್ತರಿಗೆ ಉದ್ಯಮಿಗಳು, ಸೆಲೆಬ್ರಿಟಿಗಳು ಸೇರಿದಂತೆ ಎಲ್ಲರೂ ಭರಪೂರವಾಗಿ ನೆರವು ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಅವರು ಮಾಡಿರುವ ಮನವಿಗೆ ಓಗೊಟ್ಟು ನಾವು ಈ ನಿರ್ಣಯಕ್ಕೆ ತಳೆದಿದ್ದೇವೆ' ಎಂದು ಎಂಟಿಬಿ ನಾಗರಾಜು ಹೇಳಿದ್ದಾರೆ.

   ಪ್ರವಾಹ ಪರಿಸ್ಥಿತಿಯಲ್ಲೂ ಹೊಲಸು ರಾಜಕೀಯ ಮಾಡಿದ ಬಿಜೆಪಿ ಶಾಸಕ

   ಎಂಟಿಬಿ ನಾಗರಾಜು ಅವರು ಕಾಂಗ್ರೆಸ್ ಪಕ್ಷದಿಂದ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದರು. ಆದರೆ ಆ ನಂತರ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಸರ್ಕಾರ ಉರುಳಲು ಸಹಾಯ ಮಾಡಿದರು. ಸ್ಪೀಕರ್ ಅವರು ಎಂಟಿಬಿ ನಾಗರಾಜು ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಅನರ್ಹರನ್ನಾಗಿಸಿದ್ದಾರೆ.

   ಎಂಟಿಬಿ ನಾಗರಾಜು ಅವರು ಅತ್ಯಂತ ಶ್ರೀಮಂತ ಶಾಸಕರೆಂಬ ಖ್ಯಾತಿ ಹೊಂದಿದ್ದರು. ಅವರು ಚುನಾವಣಾ ಆಯೋಗಕ್ಕೆ ನೀಡಿದ ಆಸ್ತಿ ವಿವರದಲ್ಲಿ 1015 ಕೋಟಿ ಆಸ್ತಿ ಹೊಂದಿರುವುದಾಗಿ ಮಾಹಿತಿ ನೀಡಿದ್ದರು. ವಾರ್ಷಿಕ ಆದಾಯವೇ 100 ಕೋಟಿಗೂ ಹೆಚ್ಚು ಇದೆ.

   English summary
   Disqualified MLA MTB Nagaraju announce that he his giving one crore rupees to flood victims of Karnataka.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X