ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ 19: ಬೆಂಗಳೂರಲ್ಲಿ ಮೈಕ್ರೋ ಕಂಟೈನ್ಮೆಂಟ್ ಜೋನ್‌ಗಳ ಸಂಖ್ಯೆ ಹೆಚ್ಚಳ

|
Google Oneindia Kannada News

ಬೆಂಗಳೂರು, ಜುಲೈ 20: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿದೆ. ಹಾಗೆಯೇ ಹಲವು ಕೊರೊನಾ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.

ಕೊರೊನಾ ಸೋಂಕು ಕಡಿಮೆಯಾದರೂ ಬೆಂಗಳೂರಿನಲ್ಲಿ ಮೈಕ್ರೋ ಕಂಟೈನ್ಮೆಂಟ್ ಜೋನ್‌ಗಳ ಸಂಖ್ಯೆ ಅಧಿಕವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ; ಶಾಲೆ ತೆರೆಯುವ ಸಮಯ ಬಂದಿದೆಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ; ಶಾಲೆ ತೆರೆಯುವ ಸಮಯ ಬಂದಿದೆ

ಬೊಮ್ಮನಹಳ್ಳಿ (712), ನಂತರದ ಸ್ಥಾನದಲ್ಲಿ ಮಹಾದೇವಪುರ (664), ಪೂರ್ವ ವಲಯ (547), ದಕ್ಷಿಣ ವಲಯ (430), ಆರ್.ಆರ್.ನಗರ (417), ಯಲಹಂಕ (397) ಮತ್ತು ಪಶ್ಚಿಮ ವಲಯ ( 347) ಗಳಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ದಾಖಲಾಗಿವೆ.

Despite Drop In COVID Cases, Micro-Containment Zones In Bengaluru See A Big Jump

ಜುಲೈ 1 ರ ವೇಳೆಗೆ 44 ಇದ್ದ ಮೈಕ್ರೋ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ ಜುಲೈ 18ರ ವೇಳೆಗೆ 60ಕ್ಕೆ ಏರಿಕೆಯಾಗಿದೆ. ಮಹಾದೇವ ಪುರದ ನಂತರ ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಮೈಕ್ರೋ ಕಂಟೈನ್ ಮೆಂಟ್ ವಲಯವಾಗಿದೆ. ಕೋವಿಡ್ ಎರಡನೇ ಅಲೆ ಪ್ರಾರಂಭವಾದಾಗಿನಿಂದ, 613 ಮೈಕ್ರೋ ಕಂಟೈನ್ ಮೆಂಟ್ ವಲಯಗಳೆಂದು ಘೋಷಿಸಲಾಗಿತು ಮತ್ತು ಅವುಗಳಲ್ಲಿ 555 ನಿಷ್ಕ್ರಿಯಗೊಳಿಸಲಾಗಿದೆ.

ನಾವು ಹೆಚ್ಚಿನ ಪರೀಕ್ಷೆಗಳನ್ನು ಮಾಡುತ್ತಿರುವ ಕಾರಣ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ, ವಲಸಿಗರು ಮತ್ತು ನಿರ್ಮಾಣ ಕಾರ್ಮಿಕರು ಹೊರಾಂಗಣದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರಿಗೆ ಕೋವಿಡ್ ಪಾಸಿಟಿವ್ ಕಂಡು ಬರುತ್ತಿದೆ ಎಂದು ಬೊಮ್ಮನಹಳ್ಳಿ ವಲಯ ಅಧಿಕಾರಿ ಹೇಳಿದ್ದಾರೆ.

ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಅಂದರೆ 1,20,853 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ, ಮಹಾದೇವಪುರ -99,492, ಪಶ್ಚಿಮ ವಲಯ- 90,059, ಪೂರ್ವ ವಲಯ- 85,969, ದಕ್ಷಿಣ ವಲಯ- 77,303, ಯಲಹಂಕ- 59,195 ಮತ್ತು ದಾಸರಹಳ್ಳಿಯಲ್ಲಿ 21,046 ಪರೀಕ್ಷೆಗಳನ್ನು ನಡೆಸಲಾಗಿದೆ.

ಕಂಟೈನ್ಮೆಂಟ್ ಜೋನ್‌ಗಳನ್ನಾಗಿ ಮಾಡುವುದರಿಂದ ಕೊರೊನಾ ಸೋಂಕು ಹರಡುವುದು ತಪ್ಪುತ್ತದೆ, ಹೀಗಾಗಿ ಹೆಚ್ಚೆಚ್ಚು ಕಂಟೈನ್ಮೆಂಟ್‌ ಜೋನ್‌ಗಳನ್ನಾಗಿ ಮಾಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಲಯವಾರು ಮೈಕ್ರೋ ಕಂಟೈನ್ ಮೆಂಟ್ ಜೋನ್ಸ್ ವಿವರ
ಬೊಮ್ಮನಹಳ್ಳಿ- 15
ಮಹಾದೇವಪುರ-12
ಪೂರ್ವ ವಲಯ-9
ದಾಸರಹಳ್ಳಿ-8
ಯಲಹಂಕ-5
ಆರ್ ಆರ್ ನಗರ-4
ಪಶ್ಚಿಮ ವಲಯ-4
ದಕ್ಷಿಣ ವಲಯ-3

English summary
Though Covid cases have dropped in the city, the number of micro-containment zones has increased.The city had 44 micro-containment zones on July 1, which increased to 60 by July 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X