ಒಂದು ಸಮುದಾಯದ ವಿರುದ್ಧ ಪೋಸ್ಟ್: ಆರೋಪಿ ನವೀನ್ ಬಂಧನ

ಬೆಂಗಳೂರು, ಆಗಸ್ಟ್.12: ಒಂದು ಸಮುದಾಯದ ವಿರುದ್ಧ ಹಾಕಿದ್ದ ಒಂದೇ ಒಂದು ಫೇಸ್ ಬುಕ್ ಪೋಸ್ಟ್ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪ್ರದೇಶ ರಾತ್ರೋರಾತ್ರಿ ಹೊತ್ತಿ ಉರಿಯುವಂತೆ ಮಾಡಿತು.

Recommended Video

      Akhanda Srinivas Murthy ಘಟನೆ ನಂತರ ಹೇಳಿದ್ದೇನು | Oneindia Kannada

      ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರಳಿಯ ನವೀನ್, ಒಂದು ಸಮುದಾಯದ ವಿರುದ್ಧ ಪೋಸ್ಟ್ ಹಾಕಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆ ಕೆ.ಜಿ.ಹಳ್ಳಿ ಠಾಣೆಯ ಪೊಲೀಸರು ರಾತ್ರಿ ಆರೋಪಿ ನವೀನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

      ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಫೇಸ್ ಬುಕ್ ನಲ್ಲಿ ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ರಾತ್ರಿ 8 ಗಂಟೆಯ ಹೊತ್ತಿಗೆ ಕಾವಲ್ ಬೈರಸಂದ್ರದಲ್ಲಿ ಇರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಎದುರು ಉದ್ರಕ್ತರ ಗುಂಪು ಗಲಾಟೆ ಶುರು ಮಾಡಿತು.

      Derogatory Post Against The One Community: Accused Naveen Arrested By Police

      ಮೊಬೈಲ್ ಕಳೆದಿರುವ ಬಗ್ಗೆ ನವೀನ್ ಹೇಳಿಕೆ:

      ಒಂದು ಸಮುದಾಯದ ವಿರುದ್ಧ ಫೇಸ್ ಬುಕ್ ನಲ್ಲಿ ಹಾಕಲಾದ ಪೋಸ್ಟ್ ತಮ್ಮದಲ್ಲ ಎಂದು ಕೆಜಿ ಹಳ್ಳಿ ಪೊಲೀಸರ ವಶದಲ್ಲಿರುವ ನವೀನ್ ವಿಚಾರಣೆ ವೇಳೆ ಹೇಳಿದ್ದಾರೆ. ಮಂಗಳವಾರ ಸಂಜೆ 4 ಗಂಟೆ ಹೊತ್ತಿಗೆ ಮೊಬೈಲ್ ಕಳೆದಿದ್ದು, ಅದಾಗಿ ಎರಡು ಗಂಟೆಗೆ ತಮ್ಮ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಲಾಗಿದೆ ಎಂದು ಪೊಲೀಸರ ಎದುರು ನವೀನ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+