ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಎರಡು ದಿನ ಮಳೆ
ಬೆಂಗಳೂರು, ಏಪ್ರಿಲ್ 02: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಹಲವಾರು ಕಡೆ ಮಳೆ ಮುಂದುವರೆದಿದೆ.
ಟ್ರಫ್ ನಿಂದ ಸುರಿದ ಮಳೆ ಮಾರ್ಚ್ ತಿಂಗಳಲ್ಲಿ ದಾಖಲೆಯಾಗಲು ಕಾರಣವಾಗಿತ್ತು. ಏಪ್ರಿಲ್ ಮೊದಲ ದಿನದಿಂದ ಮಳೆ ಕಡಿಮೆಯಾಗಿದ್ದು, ದೊಡ್ಡ ಜಾಲ, ಹೆಸರಘಟ್ಟ, ಬಾಗಲೂರು, ಕಣ್ಣೂರಿನಲ್ಲಿ ಭಾನುವಾರ ಸಂಜೆ ತುಂತುರು ಮಳೆಯಾಗಿದೆ.
ಇನ್ನು ಸೋಮವಾರ ಸಂಜೆ ಶಿವಾನಂದ ವೃತ್ತ, ಜಯನಗರ, ಮಲ್ಲೇಶ್ವರ, ವಿಧಾನಸೌಧ, ವಿಲ್ಸನ್ ಗಾರ್ಡನ್, ಶಾಂತಿನಗರ, ಎಂಜಿ ರಸ್ತೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಪ್ರಾರಂಭವಾಗಿದೆ. ಇನ್ನೂ ಎರಡು ದಿನ ಸಂಜೆ ಮತ್ತು ರಾತ್ರಿ ಮೋಡ ಕವಿದ ವಾತಾವರಣ ಕಂಡುಬರಲಿದೆ.

ವರುಣನ ಆರ್ಭಟ ಹಿನ್ನೆಲೆ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನುಮುಂದೆ ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 33.5 ಡಿಗ್ರಿ ಸೆಲ್ಸಿಯಸ್ ಹಾಗೂ 21.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇದೆ.
2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ | ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ 33.5 ಡಿಗ್ರಿ ಗರಿಷ್ಠ ಉಷ್ಣಾಂಶ ಹಾಗೂ 19.4ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನು ಎಚ್‌ಎಎಲ್ ನಲ್ಲಿ 33ಡಿಗ್ರಿ ಸೆಲ್ಸಿಯಸ್ ಗರಿಚ್ಠ ಹಾಗೂ 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.











Click it and Unblock the Notifications