Dengue Audit: ರಾಜ್ಯದಲ್ಲಿ ಡೆಂಗ್ಯೂ ಕೇಸ್ ಏರಿಕೆ, 'ಡೆತ್ ಆಡಿಟ್' ನಡೆಸಲಿದೆ ಸರ್ಕಾರ
ಬೆಂಗಳೂರು, ಜುಲೈ 02: ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಳೆದ ಒಂದೇ ತಿಂಗಳಲ್ಲಿ 2300 ಕೇಸಗಳು ವರದಿ ಆಗಿದ್ದು, ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ರಾಜ್ಯದಲ್ಲಿ ಈವರೆಗೆ ಒಟ್ಟು 06 ಮಂದಿ ಮೃತಪಟ್ಟಿದ್ದಾರೆ. ಇದೀಗ ಆರೋಗ್ಯ ಇಲಾಖೆಯು ರೋಗದ ನಿಖರ ಕಾರಣ ಪತ್ತೆಗೆ ಡೆತ್ ಆಡಿಟ್ ನಡೆಸಲು ನಿರ್ಧರಿಸಿದೆ.
ಡೆಂಗ್ಯೂ ಹರಡುವಿಕೆ ಹಾಗೂ ರೋಗದ ನಿಯಂತ್ರಣಕ್ಕಾಗಿ ಸರ್ಕಾರ ಆಗಿರುವ ಡೆಂಗ್ಯೂ ಸಾವಿಗೆ ನಿಖರವಾದ ಕಾರಣಗಳನ್ನು ತಿಳಿಯಲು ಮುಂದಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಎರಡು ಸಾವುಗಳು ಸಂಭವಿಸಿದ ಬಳಿಕ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಆಡಿಟ್ ನಡೆಸುದಾಗಿ ತಿಳಿಸಿದೆ.

ರಾಜ್ಯ ಸರ್ಕಾರದ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 93,012 ಶಂಕಿತ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 5,878 ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಕಂಡು ಬಂದಿವೆ. ಇನ್ನೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 310 ಹಾಗೂ ಬೆಂಗಳೂರು ಗ್ರಾಮಾಂತರ 467 ಡೆಂಗ್ಯೂ ಕೇಸಗುಳು ವರದಿ ಆಗಿವೆ. ಇವೆಲ್ಲವು 2014ರಲ್ಲಿ ಇದುವರೆಗೆ ಕಂಡು ಬಂದ ಪ್ರಕರಣಗಳು.
ಇತ್ತೀಚಿನ ಸಾವುಗಳ ಬಗ್ಗೆ ಖಚಿತಪಡಿಸಬೇಕಿದೆ
ಜೂನ್ 28 ರಂದು ಇಬ್ಬರು ಮೃತಪಟ್ಟಿದ್ದರು. ಇದು ಡೆಂಗ್ಯೂ ನಿಂದ ಉಂಟಾದ ಸಾವುಗಳು, ಡೆಂಗ್ಯೂ ಹೆಚ್ಚಳ ಬಗ್ಗೆ ಖಚಿತಪಡಿಸಬೇಕಿದೆ. ಈ ಮಧ್ಯೆ ಸರ್ಕಾರ ಮತ್ತು ವಿಪಕ್ಷ ನಾಯಕರು ಕಾಯಿಲೆ ಕುರಿತು ರಾಜಕೀಯ ಆರೋಪಿ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಸರ್ಕಾರ ಜನರ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿವೆ ಎಂದು ಬಿಜೆಪಿ ಆರೋಪಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆರೋಗ್ಯ ಇಲಾಖೆಯು ಒಳಾಂಗಣ ಮತ್ತು ಹೊರಾಂಗಣದಲ್ಲಿ ಸಂತಾನೋತ್ಪತ್ತಿ ಸ್ಥಳಗಳ ನಿಯಮಿತ ತಪಾಸಣೆ ನಡೆಸುತ್ತಿದೆ. ಸ್ಥಳೀಯ ಆಸ್ಪತ್ರೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಈ ಹಿಂದೆ ಪರಿಶೀಲಿಸಿದ್ದರು. ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ನಗರ ಮತ್ತು ಗ್ರಾಮೀಣ ವ್ಯವಸ್ಥೆಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದಾರೆ. ಜನರಿಗೆ ಅಗತ್ಯ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ (ವಿಬಿಡಿ) ನಿಯಂತ್ರಣ ಅಧಿಕಾರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಪಿಎಚ್‌ಸಿ) ವೈದ್ಯಾಧಿಕಾರಿಗಳು ಈ ಪ್ರಕ್ರಿಯೆಯನ್ನು ನಿಯಮಿತವಾಗಿ ಪರಿಶೀಲಿಸುತ್ತಾರೆ ಎಂದು ಇಲಾಖೆ ಖಚಿತಪಡಿಸಿದೆ. ಸದ್ಯದ ಸ್ಥಿತಿ ನೋಡಿದರೆ, ಮಳೆಗಾದಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಂಡು ಬರುತ್ತವೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.












Click it and Unblock the Notifications