Deepavali 2023 Guidelines: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಗೈಡ್‌ಲೈನ್ಸ್ ರಿಲೀಸ್
Deepavali 2023 Guidelines: ಬೆಂಗಳೂರು, ನವೆಂಬರ್, 02: ದೀಪಾವಳಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ದೀಪಾವಳಿ ಅಂದರೆ ದೀಪಗಳ ಹಬ್ಬ, ಬೆಳಕಿನ ಹಬ್ಬದಲ್ಲಿ ದೀಪಗಳು ಎಷ್ಟು ಪ್ರಾಧಾನ್ಯತೆ ವಹಿಸುತ್ತದೆಯೋ ಅಷ್ಟೇ ಜನ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಕೆಲವೊಮ್ಮೆ ಸಾಕಷ್ಟು ಅವಘಡಗಳಿಗೆ ಕೂಡ ಈ ಪಟಾಕಿ ಕಾರಣ ಆಗುತ್ತದೆ. ಅಷ್ಟೇ ಅಲ್ಲ ವಾಯು ಮಾಲಿನ್ಯ ಕಂಟ್ರೋಲ್ ಕೂಡ ಆಗುವುದಿಲ್ಲ. ಆದ್ದರಿಂದ ರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಗೈಡ್ ಲೈನ್ಸ್ ಬಿಡುಗಡೆ ಮಾಡಲಾಗಿದೆ.
ವಾತಾವರಣ ಹಾಳಾಗುತ್ತದೆ, ಮಾಲಿನ್ಯ ಕಾರಣವಾಗುತ್ತದೆ ಅಂತಾ ದೀಪಾವಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಪಟಾಕಿ ಮಾರಾಟ ಹಾಗೂ ಬಳಕೆ ನಿಯಂತ್ರಿಸುವ ಬಗ್ಗೆ ಸುಪ್ರೀಂಕೋರ್ಟ್ ಆದೇಶವನ್ನು ಜಾರಿಗೊಳಿಸುವ ಬಗ್ಗೆ ಕ್ರಮ ವಹಿಸುವಂತೆ ಸೂಚನೆ ಕೊಟ್ಟಿದೆ.

ನವೆಂಬರ್ 11ರಿಂದ 15 ರವರೆಗೆ ದೀಪಾವಳಿ ಹಬ್ಬ ಆಚರಣೆ ಮಾಡಲಾಗುತ್ತಿದ್ದು ಈ ಸಂದರ್ಭದಲ್ಲಿ ಶಬ್ದ ಮಾಲಿನ್ಯ ಹಾಗೂ ವಾಯುಮಾಲಿನ್ಯ ಉಂಟಾಗುವ ಸಾಧ್ಯತೆಯಿರುವ ಹಿನ್ನೆಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೆಲ ಮುಂಜಾಗ್ರತಾ ಕ್ರಮಗಳಿಗೆ ಸೂಚನೆ ಕೊಟ್ಟಿದೆ.
ಪಟಾಕಿ ಸ್ಪೋಟಿಸಲು ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ. ಇದೇ ಅವಧಿಯಲ್ಲಿ ನಿಗದಿತ ಸಮಯಕ್ಕೆ ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಉಳಿದ ಸಮಯದಲ್ಲಿ ಪಟಾಕಿ ಬಳಕೆಗೆ ಅವಕಾಶವಿಲ್ಲ. ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಪಟಾಕಿಗಳ ಮಾರಾಟ ಹಾಗೂ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಜಿಲ್ಲಾ ಪರಿಸರ ಸಂರಕ್ಷಣಾ ಪ್ರಾಧಿಕಾರಕ್ಕೆ ಶಬ್ದ ಮಾಲಿನ್ಯ ನಿಯಂತ್ರಿಸುವ ಜವಾಬ್ದಾರಿ ಕೊಡಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಟಾಧಿಕಾರಿಗಳು, ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯ ಎಲ್ಲಾ ಅಧೀನ ಅಧಿಕಾರಿಗಳ ಗಮನಕ್ಕೆ ತರುವುದು ಹಾಗೂ ಆದೇಶ ಪಾಲನೆಗೆ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸುವುದು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಗ್ನಿಶಾಮಕ ಪಡೆ ಅಧಿಕಾರಿ, ಸ್ಥಳಿಯ ಆರೋಗ್ಯಾಧಿಕಾರಿ, ನಾಗರೀಕರು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ತಂಡ ರಚಿಸಬೇಕು
ಈ ತಂಡದ ನೇತೃತ್ವದಲ್ಲಿ ಎಲ್ಲಾ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಬೇಕು. ಪರಿಶೀಲನೆಯಲ್ಲಿ ನಿಷೇಧಿತ ಪಟಾಕಿ ಮಾರುತ್ತಿದ್ದರೆ, ಗೋದಾಮು ಮುಟ್ಟುಗೋಲು ಹಾಕಬೇಕು. ಹಾಗೂ ಸಂಬಂಧಿಸಿದ ವ್ಯಕ್ತಿ ಮೇಲೆ ಮೊಕ್ಕದ್ದಮೆ ದಾಖಲಿಸಬೇಕು. ಹಸಿರು ಪಟಾಕಿಯ ಮೇಲಿನ ಚಿಹ್ನೆಯನ್ನು ಪರಿಸರ ಅಧಿಕಾರಿಗಳು ಖಚಿತಗೊಳಿಸಬೇಕು.
ಹಸಿರು ಪಟಾಕಿಗಳ ಶಬ್ದಮಾಲಿನ್ಯವನ್ನು ಮಾಪನ ಮಾಡಬೇಕು. ಗುಣಮಟ್ಟ ಇಲ್ಲದಿದ್ದರೆ ಮುಟ್ಟುಗೋಲು ಹಾಕಬೇಕು. ಹಸಿರು ಪಟಾಕಿಗಳನ್ನು ಬಳಸುವಾಗ ಪ್ರಾಣಿ,ಪಕ್ಷಿ,ಮಕ್ಕಳು ಹಾಗೂ ವೃದ್ದರಿಗೆ ತೊಂದರೆಯಾಗಬಾರದುನ್ಯಾಯಾಲಯದ ನಿರ್ದೇಶನವನ್ನು ಜನರಿಗೆ ತಲುಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಾಕಿಕೊಳ್ಳಬೇಕು.
ಸ್ಥಳೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಪಟಾಕಿ ಸ್ಪೋಟಿಸುವಂತಿಲ್ಲ. ಹೊರರಾಜ್ಯಗಳಿಂದ ಅನಧಿಕೃತವಾಗಿ ನಿಷೇಧಿತ ಪಟಾಕಿ ಸಾಗಾಟ ಮಾಡಿದರೆ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅರಣ್ಯ, ಪರಿಸರ ಇಲಾಖೆಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಪರಿಸರ ಸ್ನೇಹ ಹಬ್ಬ ಆಚರಿಸಲು ಕರೆ ಕೊಡಲಾಗಿದೆ.












Click it and Unblock the Notifications