ರವಿ ಹೇಡಿಯಂಥ ಕೆಲಸ ಮಾಡಿದ್ದಾರೆ : ಹೆಗ್ಗರವಳ್ಳಿ
Recommended Video

ಬೆಂಗಳೂರು, ಡಿಸೆಂಬರ್ 09 : ರವಿ ಬೆಳಗೆರೆಗೂ ಸುಪಾರಿ ಹಂತಕ ಶಶಿಧರ ಮುಂಡೆವಾಡಿಗೂ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರನ್ನೂ ಕರ್ನಾಟಕ ಪೊಲೀಸರು ಸಮನಾಗಿ ನೋಡುತ್ತಿದ್ದಾರೆ. ಕೊಲೆ ಮಾಡುವ ಹೇಡಿಯಂಥ ಕೆಲಸ ಇಬ್ಬರೂ ಮಾಡಿದ್ದಾರೆ ಎಂದು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ಹದಿನಾರು ವರ್ಷಗಳ ಕಾಲ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ವರದಿಗಾರನಾಗಿ ದುಡಿದ ಸುನೀಲ್ ಹೆಗ್ಗರವಳ್ಳಿಯನ್ನು ಸುಪಾರಿ ಹಂತಕನಿಂದ ಕೊಲೆ ಮಾಡಿಸಲು ಯತ್ನಿಸಿದ ಆರೋಪದ ಮೇಲೆ ರವಿ ಬೆಳಗೆರೆಯನ್ನು ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದು, ರಾಜ್ಯದೆಲ್ಲೆಡೆ ಈ ಪ್ರಕರಣ ಸುದ್ದಿಗೆ ಗ್ರಾಸವಾಗಿದೆ.

ಖಾಸಗಿ ಸುದ್ದಿ ಚಾನಲ್ಲಿಗೆ ನೀಡಿದ ಸಂದರ್ಶನದಲ್ಲಿ, ರವಿ ಬೆಳೆಗೆರೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುನೀಲ್ ಹೆಗ್ಗರವಳ್ಳಿ, ನನ್ನ ಕುಟುಂಬಕ್ಕೆ ಗೊತ್ತಿಲ್ಲದಂತೆ ಹತ್ಯೆಗೆ ಸಂಚು ರೂಪಿಸಿದ್ದರು, ಒಂದು ವೇಳೆ ಹತ್ಯೆ ನಡೆದಿದ್ದರೆ ನನ್ನ ಇಡೀ ಕುಟುಂಬ ಬೀದಿಗೆ ಬೀಳುತ್ತಿತ್ತು. ಅದೃಷ್ಟವಶಾತ್ ಹಾಗಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ರವಿ ಬೆಳಗೆರೆಗೆ ನೂರೆಂಟು ಗೆಳತಿಯರಿದ್ದಾರೆ. ನನಗೂ ಅವರ ಎರಡನೇ ಹೆಂಡತಿಗೂ ಯಾವುದೇ ರೀತಿಯ ಅನೈತಿಕ ಸಂಬಂಧವಿರಲಿಲ್ಲ. ನನ್ನ ಅವರ ನಡುವೆ ಕಚೇರಿಗೆ ಸಂಬಂಧಿಸಿದಂತೆ ವ್ಯಾವಹಾರಿಕ ಸಂಬಂಧ ಮಾತ್ರ ಇತ್ತು. ಅವರ ಗರ್ಲ್ ಫ್ರೆಂಡ್ ಗಳಲ್ಲಿ ನನಗಾಗದವರು ಯಾರೋ ಈ ಅನೈತಿಕ ಸಂಬಂಧದ ಬಗ್ಗೆ ರವಿ ಅವರ ಕಿವಿಯೂದಿದ್ದಾರೆ ಎಂದು ಸುನೀಲ್ ಆರೋಪಿಸಿದರು.
ಜೀವ ಬೆದರಿಕೆ, ರಕ್ಷಣೆಗೆ ಕೋರಿಕೆ : ಸುನೀಲ್ ಹೆಗ್ಗರವಳ್ಳಿ ಅವರ ಜೀವಕ್ಕೆ ಅಪಾಯವಿದ್ದು, ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಸುನೀಲ್ ಅವರ ತಂದೆ ನಂಜೇಗೌಡ ಮತ್ತು ಪತ್ನಿ ಸುಚಿತಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೋರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದವರಾದ ಸುನೀಲ್ ಅವರು, ರವಿ ಬೆಳಗೆರೆಯವರು ಟಿವಿ ಚಾನಲ್ಲಿಗಾಗಿ 'ಕ್ರೈಂ ಡೈರಿ' ಸಂಚಿಕೆಗಳನ್ನು ಮಾಡಿದ್ದಾಗ, ಅವರಿಗೆ ವರದಿಗಳನ್ನು ಮಾಡಿಕೊಟ್ಟಿದ್ದರು. ಇಬ್ಬರ ನಡುವೆ ಹೊಂದಾಣಿಕೆ ಆಗದಿದ್ದಾಗ ಸುನೀಲ್ ಅವರು ಹಾರ್ ಬೆಂಗಳೂರ್ ಪತ್ರಿಕೆಯನ್ನು ತೊರೆದಿದ್ದರು.












Click it and Unblock the Notifications