ಚಂದಾಪುರ ಬಳಿ ಭೀಕರ ಅಪಘಾತ, ಬೈಕ್ ಸವಾರಿಬ್ಬರು ಸಾವು

ಆನೇಕಲ್, ಸೆ. 19: ಆನೇಕಲ್ ವಿಧಾನಸಭಾ ಕ್ಷೇತ್ರದ ಚಂದಾಪುರದ ರೈಲ್ವೆ ಸೇತುವೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಂಟೈನರ್‌ ಲಾರಿ ಹರಿದು ಇಬ್ಬರು ಬೈಕ್‌ ಸವಾರರು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಹೊಸೂರು ಮುಖ್ಯರಸ್ತೆಯ ಸಮೀಪವಿರುವ ಚಂದಾಪುರ ರೈಲ್ವೆ ಬ್ರಿಡ್ಜ್‌ ಬಳಿ ಮೃತಪಟ್ಟ ಬೈಕ್ ಸವಾರರಿಬ್ಬರನ್ನು ರಾಮಸಾಗರದ ವೆಂಕಟಪ್ಪ ಮತ್ತು ನಾರಾಯಣಪ್ಪ ಎಂದು ಗುರುತಿಸಲಾಗಿದೆ.

Deadly accident in Anekal claims 2 Lives

ಹೊಸೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಹಿಂಬದಿಯಿಂದ ಕಂಟೈನರ್‌ ಡಿಕ್ಕಿ ಹೊಡೆದಿದೆ. ನಂತರ ಬೈಕ್‌ ಸವಾರರ ಮೇಲೆ ವಾಹನ ಹರಿದಿದ್ದು, ಚಕ್ರಕ್ಕೆ ಇಬ್ಬರ ದೇಹ ಸಿಲುಕಿದೆ.

ಕಂಟೈನರ್‌ ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೂರ್ಯನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+