DK Shivakumar Shoe Theft: ಡಿಸಿಎಂ ಡಿಕೆ ಶಿವಕುಮಾರ್ ಶೂ ಕಳ್ಳತನ- ಯಾರು ತಗೊಂಡಿರಬಹುದು?

ಬೆಂಗಳೂರು ಜುಲೈ 15: ಡಿಸಿಎಂ ಡಿಕೆ ಶಿವಕುಮಾರ್ ಅವರ ಶೂ ಕಳೆದು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇಂದು ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಪೂಜೆಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸದಾಶಿವನಗರದ ಭಾಷ್ಯಂ ಸರ್ಕಲ್ ಬಳಿ ಆಗಮಿಸಿದ್ದರು. ಪೂಜೆಗಾಗಿ ಅವರು ಶೂಗಳನ್ನು ಬಿಟ್ಟು ತೆರಳಿದ್ದರು. ಆದರೆ ಪೂಜೆ ಮುಗಿಸಿ ವಾಪಸ್ ಆಗುವಷ್ಟರಲ್ಲಿ ಶೂ ನಾಪತ್ತೆಯಾಗಿದೆ.

DCM DK Shivakumar shoe theft

ಕೆಲ ನಿಮಿಷಗಳ ಕಾಲ ಶೂಗಾಗಿ ಡಿಕೆ ಶಿವಕುಮಾರ್ ಹಾಗೂ ಸಂಗಡಿಗರು ಹುಡುಕಾಟ ನಡೆಸಿದ್ದಾರೆ. ಆದರೆ ಶೂ ಸಿಗಲಿಲ್ಲ. 'ಎಲ್ಲೋಯ್ತಪ್ಪ ನನ್ನ ಶೂ' ಅಂತ ಜನರಿಗೂ ಡಿಕೆ ಶಿವಕುಮಾರ್ ಈ ಸಂದರ್ಭದಲ್ಲಿ ಕೇಳಿದರು. ಆದರೆ ಶೂ ಬಗ್ಗೆ ಯಾರೂ ಕೂಡ ಮಾತೇ ಆಡಲಿಲ್ಲ. ಕೊನೆಗೆ ಶೂ ಸಿಗದೇ ಇದ್ದಿದ್ದಕ್ಕಾಗಿ ಬೇರೆ ಕಾರ್ಯಕ್ರಮಗಳಿಗೆ ತಡವಾದ್ದರಿಂದ ಕಾರಿನಲ್ಲಿ ಇದ್ದ ಬೇರೆ ಶೂ ಧರಿಸಿ ತೆರಳಿದರು.

ಆದರೆ ಶೂ ಯಾರಾದರು ಕದ್ದರಾ ಅಥವಾ ಬೇರೆಯವರು ತಿಳಿಯದೇ ಧರಿಸಿಕೊಂಡು ಹೋದರಾ ಎನ್ನುವುದು ತಿಳಿದು ಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+