ಬೆಂಗಳೂರು; ಕೋವಿಡ್‌ನಿಂದ ತಂದೆ ಸಾವು; ಮಗಳಿಂದ ಅಂತ್ಯ ಸಂಸ್ಕಾರ

ಬೆಂಗಳೂರು, ಜುಲೈ 08 : ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ತಂದೆ ಅಂತ್ಯ ಸಂಸ್ಕಾರವನ್ನು ಮಗಳು ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಿಪಿಇ ಕಿಟ್ ಧರಿಸಿ ಮಾರ್ಗಸೂಚಿಯಂತೆಯೇ ಮಗಳು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಳು.

ಬೆಂಗಳೂರು ನಗರದ ಶಕ್ತಿಗಣಪತಿನಗರ ವಾರ್ಡ್ ನಿವಾಸಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಜಯದೇವ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಆಟೋ ಚಾಲಕರಾಗಿದ್ದ ಅವರ ಅಂತ್ಯ ಸಂಸ್ಕಾರದ ಅಂತಿಮ ವಿಧಿವಿಧಾನವನ್ನು ಮಗಳು ಮಾಡಿದ್ದಾಳೆ.

ಆಟೋ ಚಾಲಕನ ಕುಟುಂಬದವರು ಹೋಂ ಕ್ವಾರಂಟೈನ್‌ನಲ್ಲಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗು ಚಿಕ್ಕವನು. ಮಗಳು ತಂದೆಯ ಸಾವಿನ ಕುರಿತು ಉದ್ಯಮಿ, ಕಾಂಗ್ರೆಸ್ ನಾಯಕ ಚಿರಂಜೀವಿ ಜೆಟ್ಟಿಗೆ ಮಾಹಿತಿ ನೀಡಿದ್ದಳು.

Daughter Performs Last Rites Of Father Who Dies Due To COVID 19

ಯುವತಿಗೆ ಆತ್ಮಸ್ಥೈರ್ಯ ತುಂಬಿದ ಅವರು ಜಯದೇವ ಆಸ್ಪತ್ರೆಯಿಂದ ಸುಮನಹಳ್ಳಿ ಚಿತಗಾರಕ್ಕೆ ಶವವನ್ನು ತಂದು ಅಂತ್ಯ ಸಂಸ್ಕಾರ ಮಾಡಲು ನೆರವು ನೀಡಿದರು. ಬಳಿಕ ಮಗಳು ಅಂತ್ಯ ಸಂಸ್ಕಾರದ ವಿಧಿವಿಧಾನ ನೆರವೇರಿಸಿದಳು.

ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಮಾರ್ಗಸೂಚಿಗಳಿವೆ. ಪುತ್ರಿ ಪಿಪಿಇ ಕಿಟ್ ಧರಿಸಿ, ಸಿಬ್ಭಂದಿಗಳ ನೆರವಿನಿಂದ ಅಂತ್ಯ ಸಂಸ್ಕಾರವನ್ನು ನೆರವೇರಿಸಿದಳು.

Daughter Performs Last Rites Of Father Who Dies Due To COVID 19

ಬೆಂಗಳೂರು ನಗರದಲ್ಲಿ ಮಂಗಳವಾರ 800 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,361. ಇದುವರೆಗೂ ಮೃತಪಟ್ಟವರ ಸಂಖ್ಯೆ 155.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+