ದರ್ಶನ್ ಬಿಡುಗಡೆ ಹರಸಾಹಸ: ಕುಟುಂಬಸ್ಥರಿಂದ ನಟನಿಗೆ ಹಾಕಲಾಗಿದೆ ಒಂದು ಷರತ್ತು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ದರ್ಶನ್ ಸದ್ಯ ಪರಪ್ಪನ ಅಗ್ರಾಹರ ಜೈಲಿನಲ್ಲಿದ್ದಾರೆ. ಜುಲೈ 18ರ ವರೆಗೂ ದರ್ಶನ್, ಕಂಬಿಗಳ ಹಿಂದೆ ದಿನವನ್ನು ದೂಡವ ಪರೀಸ್ಥಿತಿ ಬಂದು ಒದಗಿದೆ. ಆ ದಿನ ಸಿಟ್ಟಿನ ಕೈಗೆ ಬುದ್ದಿ ಕೊಟ್ಟ ದರ್ಶನ ಇಂದು ಪಶ್ಚಾತಾಪ ಪಡುತ್ತಿದ್ದಾರೆ. ಅಲ್ಲದೆ ಜಾಮೀನು ಕೊಡಿಸುವಂತೆ ದರ್ಶನ್ ನಿರ್ಮಾಪಕರ ಬಳಿ ಕೇಳಿಕೊಂಡಿದ್ದಾರೆ ಎಂಬ ಮಾತುಗಳ ಸಹ ಕೇಳಿ ಬಂದಿವೆ. ಈ ಮಧ್ಯೆ ದರ್ಶನ್ ಪತ್ನಿ ಜಾಮೀನು ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ ಓ ಒಂದು ಷರತ್ತು ವಿಧಿಸಿದ್ದಾರೆ.
ಆರಂಭದಲ್ಲಿ ದರ್ಶನ್ ಮಾಡಿದ ತಪ್ಪನ್ನು ಅರಿತು ಇದರ ಸಹವಾಸ ಬೇಡಪ್ಪ ಎಂದು ದೂರ ಸರಿದಿದ್ದ ಪತ್ನಿ ವಿಜಯಲಕ್ಷ್ಮಿ, ಮನಸ್ಸು ತಾಳದೇ ಮತ್ತೆ ಪತಿಯ ಬಿಡುಗಡೆಗೆ ಟೊಂಕ ಕಟ್ಟಿ ನಿಂತಿದ್ದಾಳೆ. ಪೊಲೀಸ್ ಕಸ್ಟಡಿಯಲ್ಲಿ ನಟ ದರ್ಶನ್ ಇದ್ದಾಗಲೇ ಖ್ಯಾತ ನಾಮ ವಕೀಲರನ್ನು ಭೇಟಿ ಮಾಡಿ ಬಂದಿದ್ದ ವಿಜಯಲಕ್ಷ್ಮಿ, ಜಾಮೀನಿನ ಹೋರಾಟ ನಡೆಸಿದ್ದರು. ಆದರೆ ಅವರ ಮನಸ್ಸಿನಲ್ಲೂ ಆ ಒಂದು ಅಸಮಾಧಾನ ಇತ್ತು.

ಕುಟುಂಬಸ್ಥರ ಕಂಡೀಷನ್ ಏನು?
ಈಗ ಜಾಮೀನು ಹೋರಾಟಕ್ಕೆಕ ವಿಜಯಲಕ್ಷ್ಮಿ ಮುಂದಾಗಿದ್ದಾರೆ. ಆದರೆ ನಟ ದರ್ಶನ್ ಅವರ ಮುಂದೆ, ನುಂಗಲಾರದ ಷರತ್ತನ್ನು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ. ಕುಟುಂಬಸ್ಥರು ಹಾಗೂ ಆಪ್ತರ ಹಾಕಿದ ಷರತ್ತಿಗೆ ದಾಸ ಓಕೆ ಅಂದಿದ್ದಾರಂತೆ. ಈ ಮೂಲಕ ವಿಜಯಲಕ್ಷ್ಮಿ ಅವರಿಗೆ ಆರಂಭಿಕ ಜಯ ಸಿಕ್ಕಂತೆ ಆಗಿದೆ. ಅಂದರೆ ದರ್ಶನ್, ಪತ್ನಿ ಹಾಕಿರುವ ಕಂಡೀಷನ್‌ಗೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕುಟುಂಬಸ್ಥರ ದರ್ಶನ್‌ರನ್ನು ಜೈಲಿನಿಂದ ಹೊರ ತರಲು ಶಕ್ತಿ ಮೀರಿ ಪ್ರಯತ್ನಿಸುವೆವು ಆದರೆ ಆ ಒಂದು ಕಂಡೀಷನ್‌ಗೆ ದರ್ಶನ್ ಒಪ್ಪಬೇಕು ಎಂದು ಹೇಳಿದ್ದರು. ಕುಟುಂಬಸ್ಥರ ಹಾಗೂ ಆಪ್ತರ ಮನವಿಗೆ ದರ್ಶನ್ ಓಕೆ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ತಿಳಿದು ಬಂದಿದೆ. ಹಾಗಿದ್ದರೆ ಅವರು ಹಾಕಿರುವ ಷರತ್ತು ಏನು ಎಂಬ ಕುತೂಹಲ ಈಗ ಮನೆ ಮಾಡಿದೆ.
ಕುಟುಂಬಸ್ಥರ ಷರತ್ತಿಗೆ ದರ್ಶನ್ ಓಕೆ
ದರ್ಶನ್, ಪವಿತ್ರಾ ಗೌಡ್ ಅವರನ್ನು ಬಿಟ್ಟರೆ ಮಾತ್ರ ಕಾನೂನು ಹೋರಾಟಕ್ಕೆ ಶ್ರಮಿಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ, ಈ ಒಂದು ಕಂಡೀಷನ್‌ಗೆ ದರ್ಶನ್ ಸಹ ಓಕೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ರೇಣುಕಾಸ್ವಾಮಿ ಕೊಲೆ ಮಾಡಿದ ದರ್ಶನ್ ಸಹಸಚರರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರನ್ನು ಕರೆದುಕೊಂಡು ಬಂದು ಪಟ್ಟಣಗೇರೆ ಶೆಡ್ಡನಲ್ಲಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿ ಸುಮನಹಳ್ಳಿ ಮೋರಿಯಲ್ಲಿ ಬೀಸಾಡಿದ್ದರು. ಪೊಲೀಸ್ ಕಸ್ಟಡಿಯ ವೇಳೆ ಪೊಲೀಸರು ಸ್ಥಳ ಮಹಜರನ್ನು ಸಹ ಮಾಡಿದ್ದಾರೆ. ಈ ವೇಳೆ ಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಕರೆದುಕೊಂಡು ಹೋಗಿ ಮಹಜರು ನಡೆಸಿದ್ದಾರೆ. ಈಗಾಗಲೇ ಹಲವು ಸಾಕ್ಷ್ಯಗಳನ್ನು ಕಲೆ ಹಾಕಿರುವ ಪೊಲೀಸರು ತನಿಖೆಯನ್ನು ಚುರುಕು ಗೊಳಿಸಿದ್ದಾರೆ.












Click it and Unblock the Notifications