Darshan Thoogudeepa Case: ನಟ ದರ್ಶನ್ ಭೇಟಿಯಾದ ಸಿದ್ಧರೂಢ ಯಾರ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದರು.?ಅವರು ಹೇಳಿದ್ದೇನು?
ಚಿತ್ರದುರ್ಗ, ಜುಲೈ, 26: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ನನ್ನು ಇತ್ತೀಚೆಗಷ್ಟೇ ಸಹ ಖೈದಿಯೊಬ್ಬರು ಭೇಟಿಯಾಗಿ ಅವರ ಬಳಿ ಮಾತುಕತೆ ನಡೆಸಿದ್ದು, ಬಳಿಕ ದರ್ಶನ್ ಅವರು ತುಂಬಾ ಪಶ್ಚತಾಪ ಪಡುತ್ತಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಅವರ ಜೈಲೂಟದ ಬಗ್ಗೆಯೂ ಹೇಳಿದ್ದರು. ಹಾಗಾದರೆ ಸಹ ಖೈದಿಯ ಹಿನ್ನೆಲೆ ಏನು ಅವರು ಯಾರ ಕೇಸ್ ಮೇಲೆ ಜೈಲು ಸೇರಿದ್ದರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕೊಲೆ ಪ್ರಕರಣದಲ್ಲಿ ಚಿತ್ರದುರ್ಗ, ಬಳ್ಳಾರಿ ಹಾಗೂ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಆರೋಪಿ ಸಿದ್ಧರೂಢ ಎಂಬುವವರು ಸನ್ನಡತೆಯ ಆಧಾರದ ಮೇಲೆ ಬಿಡುಗೊಂಡಿದ್ದರು. ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಭೇಟಿ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮಾಧ್ಯಮದೊಂದಿಗೆ ಸಂದರ್ಶನ ವೇಳೆ ಮಾತನಾಡಿರುವ ಚಿತ್ರದುರ್ಗ ಜಿಲ್ಲೆಯ ತುರುವನೂರಿನ ಸಿದ್ದಾರೂಢ ಅವರು ಕೊಲೆ ಮಾಡಿ ಜೈಲು ಸೇರಿದ್ದಾ ಹೇಳಿದ್ದರು.

"ಸರ್ ನನ್ನ ಹೆಸರು ತುರುವನೂರು ಸಿದ್ದಾರೂಢ. ನಾನು ರೈತ ಕುಟುಂಬದಿಂದ ಬಂದಿದ್ದೇನೆ. ನಮ್ಮ ತಂದೆ ಗುತ್ತಿಗೆದಾರರಾಗಿದ್ದರು. ಕಾಮಗಾರಿ ಮಾಡುವ ಸಂದರ್ಭದಲ್ಲಿ ಇಂಜಿನಿಯರ್ ಒಬ್ಬರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಇದರ ಬಗ್ಗೆ ನನ್ನ ತಂದೆ ಹಾಗೂ ಇಂಜಿನಿಯರ್ ನಡುವೆ ಜಗಳವಾಗುತ್ತದೆ. ಈ ಗಲಾಟೆ ಯಾಕೆ ಆಯ್ತು ಅಂತ ಇದುವರೆಗೂ ಗೊತ್ತಿಲ್ಲ. ಇಂಜಿನಿಯರ್ ಅವರು ನನ್ನ ತಂದೆಗೆ ಹೊಡೆಯುತ್ತಾರೆ. ತಂದೆಗೆ ಹೊಡೆದಾಗ ಮಕ್ಕಳಿಗೆ ಸಾಮಾನ್ಯವಾಗಿದೆ ಕೋಪ ಬರುತ್ತದೆ. ಆದ್ದರಿಂದ ದುಡುಕಿ ನಿರ್ಧಾರ ತೆಗೆದುಕೊಂಡುಬಿಟ್ಟೆ," ಎಂದರು.
"ಆದರೆ ನಾನು ಅಷ್ಟು ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳಬಾರದಿತ್ತು. ಸಾಯಿಸುವ ಹಕ್ಕು ಯಾರಿಗೂ ಇಲ್ಲ. ಇಂತಹ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಆದರೆ ಯಾವುದೇ ದಾರಿಯಿಲ್ಲದೆ, ಕಾನೂನು ಕೈಗೆ ತೆಗೆದುಕೊಂಡು ಜೈಲಿಗೆ ಹೋಗುತ್ತೇನೆ. ಸುಮಾರು 21 ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಸನ್ನಡತೆಯ ಆಧಾರದ ಮೇಲೆ ಹೊರಗಡೆ ಬಂದಿದ್ದೇನೆ," ಎಂದು ತಿಳಿಸಿದರು.
ಇನ್ನು ಬಿಡುಗಡೆಗೂ ಮುನ್ನ ನಟ ದರ್ಶನ್ ಅವರನ್ನು ನಾನು ಭೇಟಿ ಮಾಡಿದ್ದೇನೆ. ಅವರಲ್ಲಿ ಪಶ್ಚಾತ್ತಾಪ ಕಂಡು ಬಂತು ಎಂದು ಸಿದ್ಧಾರೂಢ ತಿಳಿಸಿದ್ದರು.
"ನಾನು ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರನ್ನು ಒಂದು ಬಾರಿಯಾದ್ರೂ ಭೇಟಿ ಮಾಬೇಕು ಎಂದು ಮನವಿ ಮಾಡಿಕೊಂಡಿದ್ದರಂತೆ. ಬಳಿಕ ಅವರ ಒತ್ತಾಯಕ್ಕೆ ಮಣಿದ ಜೈಲಾಧಿಕಾರಿಗಳು ದರ್ಶನ್ ಭೇಟಿಗೆ ಅವಕಾಶ ನೀಡಿದ್ದು, ಒಟ್ಟು 12 ನಿಮಿಷಗಳ ಕಾಲ ದರ್ಶನ್ ಅವರನ್ನು ಭೇಟಿಯಾಗಿ ಸಿದ್ಧಾರೂಢ ಅವರು ಮಾತುಕತೆ ನಡೆಸಿದ್ದೇನೆ. ದರ್ಶನ್ ಕಣ್ಣಲ್ಲಿ ಪಶ್ಚಾತ್ತಾಪ ನೋಡಿದೆ," ಎಂದಿದ್ದರು.
ನಾನು ದರ್ಶನ್ ಅವರ ಅಭಿಮಾನಿ ಅಂತಾ ಇದನ್ನು ಹೇಳುತ್ತಿಲ್ಲ. ನಿಜವಾಗಲೂ ದರ್ಶನ್ ಅವರು ಜೈಲಿನಲ್ಲಿ ಪ್ರತಿಕ್ಷಣವೂ ಪಶ್ಚಾತ್ತಾಪ ಪಡುತ್ತಿದ್ದಾರೆ. ದರ್ಶನ್ ಅವರ ಮುಖ, ಕಣ್ಣಲ್ಲಿ ಪಶ್ಚಾತ್ತಾಪವೇ ಕಾಣುತ್ತಿದೆ. ಪ್ರತಿ ಕ್ಷಣವೂ ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್ ಕ್ಷಮೆಯಾಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ದರ್ಶನ್ ಅವರು ದೇವರು ಅವಕಾಶ ಕೊಟ್ಟರೆ, ರೇಣುಕಾಸ್ವಾಮಿ ಸ್ವಾಮಿ ಕುಟುಂಬದವರ ಎಲ್ಲರ ಕಾಲಿಗೆ ಬೀಳುತ್ತೇನೆ ಅಂತಾ ಹೇಳಿದ್ದಾರೆ ಎಂದು ಸಿದ್ಧರೂಢ ಹೇಳಿದ್ದರು.
ಇದಲ್ಲದೆ ದರ್ಶನ್ ಅವರಿಗೆ ನೀಡಿರುವ ಕೊಠಡಿ ಬಗ್ಗೆ ಏನೇನು ಸೌಲಭ್ಯ ಕಲ್ಪಿಸಿದ್ದಾರೆ ಎನ್ನುವುದರ ಬಗ್ಗೆ ತಿಳಿಸಿದ್ದಾರೆ. ದರ್ಶನ್ ಅವರಿಗೆ ಏನಾದರೂ ಸೌಲಭ್ಯ ಬೇಕೆಂದಲ್ಲಿ ಅಲ್ಲಿನ ಅಧಿಕಾರಿಗಳಿಗೆ ತಿಳಿಸಿ, ತರಿಸಿಕೊಳ್ಳುತ್ತಿದ್ದರು. ಯಾವುದೇ ರೀತಿಯ ವಿಐಪಿ ವ್ಯವಸ್ಥೆ ಕಲ್ಪಿಸಿಲ್ಲ ಎಂದರು. ನಾನು ಹನುಮಂತ ಸರ್, ಪುರುಷೋತ್ತಮ ಹಾಗೂ ರಮೇಶ್ ಗುರುಗಳಿಂದ ಕಲಿತ ಹಾಲಪಾನ ಧ್ಯಾನವನ್ನು ಅವರಿಗೆ ಹತ್ತು ನಿಮಿಷ ಧ್ಯಾನ ಕಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೆ, ನಾನು ಜೈಲಿನಲ್ಲಿ ಇದ್ದುಕೊಂಡು ಪುಸ್ತಕ ಕೂಡ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.












Click it and Unblock the Notifications