ದರ್ಶನ್‌ಗೆ ಹಿಡಿ ಶಾಪ: ರೇಣುಕಾಸ್ವಾಮಿ ಕಳೆದುಕೊಂಡ ಹೆತ್ತವರ ಆಕ್ರಂದನ
ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿದ ಆರೋಪದಡಿ ನಟ ದರ್ಶನ ಅವರನ್ನು ಬಂಧಿಸಿಲಾಗಿದೆ. ಮಗ ರೇಣುಕಾಸ್ವಾಮಿಯನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತನ್ನ ಮಗನನ್ನು ಕೊಲೆ ಮಾಡಿದ ಆರೋಪದಡಿ ನಟ ದರ್ಶನವನ್ನು ಪೊಲೀಸರು ಬಂಧಿಸಿದ್ದನ್ನು ತಿಳಿದು ರೇಣುಕಾಸ್ವಾಮಿ ತಂದೆ-ತಾಯಿ ಹಿಡಿ ಶಾಪ ಹಾಕುತ್ತಿದ್ದಾರೆ.
ರೇಣುಕಾಸ್ವಾಮಿ, ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಕೆಟ್ಟದಾಗಿ ಮೆಸೆಜ್ ಮಾಡಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಸಿಟ್ಟಾದ ದರ್ಶನ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕರೆಸಿಕೊಂಡು ಬೆಂಗಳೂರಿನಲ್ಲಿ ಕೊಲೆ ಮಾಡಿದ ಆರೋಪ ಎದುರಿಸಿದ್ದಾರೆ. ಅಲ್ಲದೆ ಪೊಲೀಸ ವಿಚಾರಣೆಯ ವೇಳೆ ದರ್ಶನ ಸಹ, ರೇಣುಕಾಸ್ವಾಮಿಗೆ ಹೆದರಿಸಲು ತಿಳಿಸಿದ್ದೇ, ಆದರೆ ಕೊಲೆ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ.

ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು ಎಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದಿದ್ದ ರೇಣುಕಾಸ್ವಾಮಿ ಪೋಷಕರು ತಿಳಿಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕೊಲೆ ಮಾಡಿಸಿದ್ದು ಏಕೆ ಎಂದು ನಟನ ವಿರುದ್ಧ ಪಾಲಕರು ಹಿಡಿ ಶಾಪಾ ಹಾಕುತ್ತಿದ್ದಾರೆ. ತಮ್ಮ ಮಗ ತಪ್ಪು ಮಾಡಿದ್ದರೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿತ್ತು ಎಂದು ಶಿವನಗೌಡ ಮತ್ತು ರತ್ನಪ್ರಭಾ ಕಣ್ಣೀರು ಹಾಕಿದ್ದಾರೆ.
ಆಗಿದ್ದೇನು?
ರೇಣುಕಾಸ್ವಾಮಿ, ದರ್ಶನ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಸಾಮಾಜಿಕ ತಾಣದಲ್ಲಿ ಅಸಭ್ಯ ಮೆಸೇಜ್ ಮಾಡಿದ್ದಾರೆ. ಇದರಿಂದ ಕಂಗೆಟ್ಟ ದರ್ಶನ ತನ್ನ ಅಭಿಮಾನಿಗಳ ಮೂಲಕ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಅಲ್ಲದೆ ಬೆಂಗಳೂರು ಹೊರ ಒಲಯದಲ್ಲಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಈ ಪ್ರಕರಣ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ, ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿಚಾರಣೆ ನಡೆಸುವ ವೇಳೆ ಬಂಧಿತರು ದರ್ಶನ ಹೇಳಿದಕ್ಕೆ ಇದನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಪೊಲೀಸರು ಮೈಸೂರಿನಲ್ಲಿ ನಟ ದರ್ಶನರನ್ನು ಬಂಧಿಸಿದ್ದಾರೆ. ಅಲ್ಲದೆ ವಿಚಾರಣೆ ಸಹ ನಡೆಸಿದ್ದಾರೆ. ಮೈಸೂರಿನಿಂದ ದರ್ಶನರನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ, ಪವಿತ್ರಾ ಗೌಡ ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆದಿದ್ದು, ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎಂಬು ಕುತೂಹಲ ಮನೆ ಮಾಡಿದೆ.












Click it and Unblock the Notifications