Darshan Fans: ರಕ್ತ ಬರುವಂತೆ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಕೊಲೆ ಆರೋಪಿ ದರ್ಶನ್ ಅಭಿಮಾನಿಗಳು!
ಬೆಂಗಳೂರು, ಜೂನ್ 16: ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೂನ್ 20ವರೆಗೆ ಎಲ್ಲಾ ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಿದೆ. ಇದಾದ ನಂತರ ಮತ್ತೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದು ದರ್ಶನ್ ಮತ್ತು ಇತರ ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ. ಇದರ ಬೆನ್ನಲ್ಲೆ ಮತ್ತೊಂದು ಪ್ರಕರಣದಲ್ಲಿ ದರ್ಶನ್ ವಿರುದ್ಧ ಆರೋಪ ಕೇಳಿಬಂದಿದೆ.
ನಟ ದರ್ಶನ್ ರೀತಿಯಲ್ಲಿಯೇ ಅವರ ಅಭಿಮಾನಿಗಳು ಸಹ ಒರಟು ಸ್ವಭಾವದವರು ಎಂಬುದು ಈಗೀನ ಪರಿಸ್ಥಿತಿ ನೋಡಿದರೆ ಎಲ್ಲರಿಗೂ ತಿಳಿಯಲಿದೆ. ಕೊಲೆ ಪ್ರಕರಣದಲ್ಲಿ ಹೆಸರು ಕೇಳಿಬಂದರೂ ಕೂಡ ದರ್ಶನ್ ಅಭಿಮಾನಿಗಳು ಅವರ ಬೆಂಬಲಕ್ಕೆ ಬಂದಿದ್ದಾರೆ. ಅವರ ಪರವಾಗಿ ಕಾಮೆಂಟ್ ಮಾಡುವುದು, ಅವರ ಪರ ಘೋಷಣೆ ಕೂಗುವುದು ನಡೆಯುತ್ತಲೇ ಇದೆ. ಇದಲ್ಲದೆ ಪತ್ರಕರ್ತರ ಮೇಲೆ ಅವರ ಅಭಿಮಾನಿಗಳು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ಪತ್ರಕರ್ತರ ಮೇಲೆ ದರ್ಶನ್ ಅಭಿಮಾನಿಗಳ ಹಲ್ಲೆ!
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿನ್ನೆ ದರ್ಶನ್ ಅವರನ್ನು ಹಾಜರು ಮಾಡಲಾಗಿತ್ತು. ಈ ವೇಳೆ ಪ್ರಕರಣದ ವರದಿ ಮಾಡಲು ತೆರಳಿದ್ದ ಪತ್ರಕರ್ತರೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ಮಾಡಿರುವ ಆರೋಪಕ್ಕೆ ಕೆಲ ದರ್ಶನ್ ಅಭಿಮಾನಿಗಳು ಗುರಿಯಾಗಿದ್ದಾರೆ.
'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ 23 ವರ್ಷದ ವರದಿಗಾರ ರಕ್ಷಿತ್ ಗೌಡ ಟಿಟಿ ಅವರ ಮೇಲೆ ನಾಲ್ವರು ಅಪರಿಚಿತ ವ್ಯಕ್ತಿಗಳ ತಂಡವೊಂದು ದಾಳಿ ನಡೆಸಿ ಅವರ ಮೊಬೈಲ್ ದೋಚಿದೆ. ಇದು ಕೂಡ ನ್ಯಾಯಾಲಯದ ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ನ್ಯಾಯಾಲಯದ ಸಭಾಂಗಣದ ಹೊರಗೆ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಈ ಪ್ರಕರಣವನ್ನು ಪತ್ರಕರ್ತ ರಕ್ಷಿತ್ ಗೌಡ ಕವರ್ ಮಾಡುತ್ತಿದ್ದರು. ದರ್ಶನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದ್ದು, ವರದಿಗಾರರನ್ನು ವರದಿ ಮಾಡಲು ಹಾಜರಾಗಿದ್ದರು. ವಿಚಾರಣೆ ಪ್ರಾರಂಭವಾಗುವಗಾ ಅಲ್ಲಿ ನಿಂತಿದ್ದಾಗ, ನಾಲ್ಕು ಅಪರಿಚಿತ ವ್ಯಕ್ತಿಗಳು ಅವನ ಬಳಿಗೆ ಬಂದು ನೀವು ಯಾರು ಎಂದು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.

ತಾನು ಮಾಧ್ಯಮದವರು ಎಂದು ಉತ್ತರಿಸಿದಾಗ, ಅವರು ತಕ್ಷಣ ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿ, ಅವರನ್ನು ಸುಮಾರು 50 ಮೀಟರ್ ದೂರಕ್ಕೆ ಎಳೆಯಲಾಗಿದೆ. ಪತ್ರಕರ್ತರನ್ನು ಬಾಯಿಗೆ ಬಂದಂತೆ ನಿಂದಿಸಿದ ಹಲ್ಲೆಕೋರರು ನ್ಯಾಯಾಲಯದ ಸಂಕೀರ್ಣವನ್ನು ಬಿಟ್ಟು ಹೋಗುವಂತೆ ಹೇಳಿದ್ದಾರೆ. ಮತ್ತೆ ಈ ಕಡೆ ಬಂದರೆ "ಭೀಕರ ಪರಿಣಾಮಗಳನ್ನು" ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಇದರ ಜೊತೆಗೆ ವರದಿಗಾರನ ಮೊಬೈಲ್ ಫೋನ್ ಅನ್ನು ಸಹ ಕಸಿದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಪತ್ರಕರ್ತನ ರಕ್ತ ಬರುವಂತೆ ಹೊಡೆದ ಫ್ಯಾನ್ಸ್!
ವರದಿಗಾರ ರಕ್ಷಿತ್ ಗೌಡ ಅವರಿಗೆ ಮೂಗೇಟುಗಳು ಆಗಿವೆ. ಜೊತೆಗೆ ರಕ್ತಸ್ರಾವವಾಗುವಂತೆ ಹೊಡೆಯಲಾಗಿದೆ. ಆದರೂ ಕೂಡ, ನ್ಯಾಯಾಲಯದ ಸಂಕೀರ್ಣದಿಂದ ಹೊರನಡೆದು ನೇರವಾಗಿ ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಲು ಹೋಗಿದ್ದಾರೆ. ಇತ್ತ, ನ್ಯಾಯಾಲಯದ ವಿಚಾರಣೆಗೆ ನಿಯೋಜನೆಗೊಂಡಿದ್ದ ಕೆಲವು ಪೊಲೀಸರ ಸಹಾಯ ಕೇಳಿದಾಗಲೂ ಎಲ್ಲರೂ ಮೂಕ ಪ್ರೇಕ್ಷಕರಂತೆ ನಿಂತಿದ್ದರು ಎಂದು ವರದಿಯಾಗಿದೆ.
ಹೆಚ್.ಟಿ.ಶೇಖರ್, ಡಿಸಿಪಿ (ಕೇಂದ್ರ), ಪೊಲೀಸ್ ಠಾಣೆಗೆ ಧಾವಿಸಿ ಖುದ್ದಾಗಿ ಪ್ರಕರಣಕ್ಕೆ ಹಾಜರಾಗಿದ್ದರು. ಘಟನೆ ಬಗ್ಗೆ ಕೂಡಲೇ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮಧ್ಯೆ, ರಕ್ಷಿತ್ ಗೌಡ ಅವರ ಫೋನ್ ಅನ್ನು ಡಿಸಿಪಿ ಹಿಂಪಡೆದು ಅವರಿಗೆ ನೀಡಿದ್ದಾರೆ.












Click it and Unblock the Notifications