ಎಲ್ಲರ ಕಣ್ಣಿಗೂ ಮಂಕು ಎರೆಚಿದರೂ ಆ ಒಂದು ವಸ್ತುವಿನಿಂದ ಬಚಾವ್ ಆಗಲೇ ಇಲ್ಲ ದರ್ಶನ್‌

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ, ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಈ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸರು ನಡೆಸಿರುವ ರೀತಿ ಶ್ಲಾಘನೆಗೆ ಕಾರಣವಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ರನ್ನು ಕಳೆದ ಮಂಗಳವಾರ ಮೈಸೂರಿನಲ್ಲಿ ಅರೆಸ್ಟ್ ಮಾಡಲಾಗಿದೆ. ಹಾಗಿದ್ದರೆ ದರ್ಶನ್‌ ಬಂಧಿಸುವ ಮುನ್ನ ಪೊಲೀಸರಿಗೆ ಸಿಕ್ಕ ಸಾಕ್ಷಿ ಏನು ಎಂಬ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ.

ರೇಣುಕಾಸ್ವಾಮಿ, ದರ್ಶನ್‌ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್‌ ಕಳಿಸಿದ್ದು, ಇದರಿಂದ ದರ್ಶನ್‌ ತನ್ನ ಅಭಿಮಾನಿಗಳ ಮುಖಾಂತರ ರೇಣುಕಾಸ್ವಾಮಿ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ. ರೇಣುಕಾಸ್ವಾಮಿ ಬೆಂಗಳೂರಿಗೆ ಬರುತ್ತಲೆ ನಗರದ ಪಟ್ಟಣಗೇರೆ ಶೆಡ್ಡನಲ್ಲಿ ಹಲ್ಲೆ ನಡೆಸಲಾಗಿದೆ. ಈ ವೇಳೆ ದರ್ಶನ್‌ಗೆ ಕರೆ ಮಾಡಿ, ರೇಣುಕಾಸ್ವಾಮಿ ಬಂದಿದ್ದಾನೆ ಎಂದು ತಿಳಿಸಿದಾಗ, ದರ್ಶನ್‌ ಹಾಗೂ ಪ್ರೇಯಸಿ ಪವಿತ್ರಾ ಗೌಡ ಸ್ಥಳಕ್ಕೆ ಬಂದಿದ್ದಾರೆ.

Darshan Arrested in Renuka Swamy Murder Case After 30-Minute Assault Video Surfaces

ಸತ್ಯ ಬಯಲಿಗೆ ಶ್ರಮ

ದರ್ಶನ್‌ ಬಂದು ರೇಣುಕಾಸ್ವಾಮಿಗೆ ಬುದ್ಧಿ ಮಾತು ಹೇಳಿ ಊರಿಗೆ ಹೋಗು ಎಂದು ಹೇಳಿದ್ದೇ ಎಂದು ಪೊಲೀಸರ ಮುಂದೆ ಹೇಳುತ್ತಲೆ ಇದ್ದಾರೆ. ಆದರೆ ಸತ್ಯಾ ಸತ್ಯತೆಯನ್ನು ಬಯಲಿಗೆ ಎಳೆಯಲು ಪೊಲೀಸರು ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದರು.

ದರ್ಶನ್‌ ಹಾಗೂ ಪ್ರೇಯಸಿ ಪವಿತ್ರಾ, ರೇಣುಕಾಸ್ವಾಮಿ ಮೇಲೆ ಹಲ್ಲೇ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರೂ ಸೇರಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಆರಂಭದಲ್ಲಿ ಪೊಲೀಸರು ಬಂಧಿತರ ಹೇಳಿಕೆಯಂತೆ ದರ್ಶನ್‌ರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಇದರ ಅಸಲಿಯತ್ತೇ ಬೇರೆಯದ್ದಾಗಿದೆ.

Darshan Arrested in Renuka Swamy Murder Case After 30-Minute Assault Video Surfaces

ಬಂಧನಕ್ಕೆ ಕಾರಣ ಏನು?

ದರ್ಶನ್‌ರನ್ನು ಬಂಧಿತರ ಹೇಳಿಕೆಯ ಮೇಲೆ ಪೊಲೀಸರು ಬಂಧಿಸಿಲ್ಲ ಎಂಬುದು ತಿಳಿದು ಬಂದಿದೆ. ಪೊಲೀಸರು ನಿಖರ ಸಾಕ್ಷಿಯನ್ನು ಇಟ್ಟುಕೊಂಡೇ ಬಂಧನಕ್ಕೆ ಇಳಿದಿದ್ದರು ಎಂಬ ಮಾಹಿತಿ ಸಿಕ್ಕಿದೆ. ದರ್ಶನ್‌ರನ್ನು ಸಿಸಿಟಿವಿಯ ದೃಶ್ಯಾವಳಿಗಳನ್ನು ಆಧರಿಸಿಯೇ ಬಂಧಿಸಲಾಗಿದೆ ಎಂಬ ಮಾಹಿತಿ ಈಗ ಬಯಲಾಗುತ್ತಿದೆ.

ಈ ಪ್ರಕರಣದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು 30 ನಿಮಿಷದ ವಿಡಿಯೋಗಳು ಸಾಕ್ಷಿಯಾಗಲಿದೆ. ಈ ದೃಶ್ಯಗಳಲ್ಲಿ ದರ್ಶನ್‌ ಹಾಗೂ ಪವಿತ್ರಾ ಗೌಡ ಬಂದು ಹಲ್ಲೆ ನಡೆಸುತ್ತಿರುವ ವಿಡಿಯೋಗಳ ಸಹ ಕಾಣಿಸಿಕೊಂಡಿದ್ದು, ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+