ಶಾಲೆಯಲ್ಲಿ ಡ್ಯಾನ್ಸ್‌ಮಾಸ್ಟರ್ ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಬೆಂಗಳೂರು, ಏ.11: ಶಾಲೆಯೊಂದರಲ್ಲಿ ಡ್ಯಾನ್ಸ್ ಮಾಸ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೆದ್ದಲಹಳ್ಳಿ ಬಸ್ ನಿಲ್ದಾಣದ ಹತ್ತಿರ ಎಸ್‌ಕೆ ಡ್ಯಾನ್ಸ್ ಕ್ಲಾಸ್ ನೃತ್ಯ ತರಬೇತುದಾರ ಸಂದೀಪ್ ಆತ್ಮಹತ್ಯೆ ಮಾಡಿಕೊಂಡವರು. ತರಬೇತಿ ಕೇಂದ್ರಕ್ಕೆ ಮಂಗಳವಾರ ಸಂಜೆ ವಿದ್ಯಾರ್ಥಿಗಳು ಬಂದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಮೃತ ಸಂದೀಪ್ ತಮ್ಮದೇ ಊರಿನ ಸೌಮ್ಯ ಎಂಬುವರನ್ನು ಮದುವೆಯಾಗಿದ್ದರು. ಅವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ದಂಪತಿ ಮಧ್ಯೆ ಕೌಟುಂಬಿಕ ಕಲಹ ಉಂಟಾಗಿ, ಬೇಸರಗೊಂಡ ರಮ್ಯ ನಾಲ್ಕು ತಿಂಗಳ ಹಿಂದೆಯೇ ಆತನನ್ನು ತೊರೆದು ಮಗನೊಂದಿಗೆ ತವರು ಮನೆಗೆ ಹೋಗಿದ್ದಳು.

ಸಂದೀಪ್ ನೃತ್ಯ ಶಾಲೆಯಲ್ಲೇ ಉಳಿದುಕೊಳ್ಳುತ್ತಿದ್ದ, ಆತನ ಪೋಷಕರು ರಾಜಾಜಿನಗರ ಸಮೀಪದ ಶಿವನಗರದಲ್ಲಿ ವಾಸವಿದ್ದಾರೆ.
ಆತ ತನ್ನ ಪತ್ನಿಗೆ ಕೊನೆಯ ಬಾರಿ ಕರೆ ಮಾಡಿದ್ದ, ಇದು ನನ್ನ ಕೊನೆಯ ಕರೆ, ಇನ್ನುಮುಂದೆ ಯಾರ ಕೈಗೂ ಸಿಗುವುದಿಲ್ಲ ಎಂದು ಹೇಳಿ ಕಾಲ್ ಕಟ್ ಮಾಡಿದ್ದ ಆದರೆ ಪತ್ನಿ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಹೆದರಿಸಲು ಈ ರೀತಿ ಮಾಡುತ್ತಿದ್ದಾರೆ ಎಂದುಕೊಂಡಿದ್ದೆ ಎಂದು ಸೌಮ್ಯ ತಿಳಿಸಿದ್ದಾರೆ. ಡ್ಯಾನ್ಸ್ ಕ್ಲಾಸ್‌ಗೆ ವಿದ್ಯಾರ್ಥಿಗಳು ಬರುತ್ತಿಲ್ಲವೆಂಬ ಕೊರಗೂ ಕೂಡ ಇತ್ತು ಎಂದು ಸೌಮ್ಯ ಹೇಳಿದ್ದಾರೆ.












Click it and Unblock the Notifications