ದಿನಗೂಲಿ ನೌಕರರಿಗೆ ಪಿಂಚಣಿ ಸೌಲಭ್ಯ ನೀಡುವಂತೆ ಸಿಎಂಗೆ ಪತ್ರ

ಬೆಂಗಳೂರು, ಮೇ 21: ಕರ್ನಾಟಕ ಸರ್ಕಾರಿ ದಿನಗೂಲಿ ನೌಕರರಿಗೆ ಪಿಂಚಣಿ ಸೌಲಭ್ಯವನ್ನು ನೀಡುವಂತೆ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ಸರ್ಕಾರವನ್ನು ಒತ್ತಾಯಿಸಿದೆ.

Recommended Video

      ಕೇಂದ್ರ ಸರ್ಕಾರ ಬೋಗಸ್‌ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ | Oneindia Kannada

      ಈ ಕುರಿತು ಕರ್ನಾಟಕ ರಾಜ್ಯ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ಕೆ. ಕೋಳಿ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಅವರಿಗೆ ಪತ್ರದ ಮೂಲಕ ಶೀಘ್ರವೇ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ.

      ಪತ್ರದಲ್ಲಿ ""ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ 2012 ರಲ್ಲಿ ಅಧಿಸೂಚಿಸಲ್ಪಟ್ಟ ನಾವುಗಳು, ಸುಮಾರು 30 ವರ್ಷಗಳಿಂದ ಸರ್ಕಾರಿ ನೌಕರರ ಸಮನಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಡಿಮೆ ವೇತನ ಪಡೆದುಕೊಂಡು ಸೇವೆ ಸಲ್ಲಿಸುತ್ತಿದ್ದೇವೆ.

      Daily Wagers Request CM Yediyurappa To Granting Pension Benefits

      ನಿವೃತ್ತಿ ನಂತರ ನೌಕರರಿಗೆ ಯಾವುದೇ ಸೌಲಭ್ಯಗಳು ಇಲ್ಲದೇ ಇರುವುದರಿಂದ ಸಾಕಷ್ಟು ನೌಕರರು ತಮ್ಮ ಕುಟುಂಬ ನಿರ್ವಹಣೆ ಮಾಡಲಾಗದಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಮೃತ ನೌಕರರ ಕುಟುಂಬದ ಗೋಳು ಹೇಳತಿರದಾಗಿದೆ ಎಂದಿದ್ದಾರೆ.

      ಕರ್ನಾಟಕ ನಾಗರಿಕ ಸೇವಾ ಕಾಯ್ದೆ 1978 ಅಥವಾ ಅದರಡಿ ರಚಿಸಲಾದ ಇತರೆ ನಿಯಮಗಳಂತೆ ಜ್ಯೇಷ್ಠತೆ ಹಾಗೂ ಪದೋನ್ನತಿ ಹೊರತುಡಿಸಿ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ನೀಡುವಂತೆ ನಿಯಮಾವಳಿಗಳನ್ನು ರಚಿಸಿದರೂ ಸಹ ನೌಕರರಿಗೆ ಸಾಕಷ್ಟು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

      Daily Wagers Request CM Yediyurappa To Granting Pension Benefits

      ಆದ್ದರಿಂದ ತಾವುಗಳು ದಯಮಾಡಿ ದಿನಾಂಕ: 22-02-2014 ರಂದು ರಚಿಸಲಾದ ಸೇವಾ ನಿಯಮಾವಳಿಗಳಂತೆ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರಿಗೆ ನಿವೃತ್ತ ವೇತನ ಮಂಜೂರು ಮಾಡಲು ಸಂಘದ ಪರವಾಗಿ ವಿನಂತಿಸಲಾಗಿದೆ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ಕೆ. ಕೋಳಿ ಮತ್ತು ಸಂಘದ ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ಸವದತ್ತಿ ಮುಖ್ಯಮಂತ್ರಿ ಹಾಗೂ ಸಿಎಸ್ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+