ಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆ
ಬೆಂಗಳೂರು, ಸೆಪ್ಟೆಂಬರ್ 5: ಬೆಂಗಳೂರಿನಿಂದ ಸಾಯಿಬಾಬಾ ನೆಲೆಸಿರುವ ಮಹಾರಾಷ್ಟ್ರದ ಶಿರಡಿಗೆ ನಿತ್ಯ ವಿಮಾನ ಸೇವೆಯನ್ನು ಆರಂಭವಾಗಲಿದೆ.
ಸ್ಪೈಸ್ ಜೆಟ್ ಸಂಸ್ಥೆಯು ಬೆಂಗಳೂರಿನಿಂದ ಶಿರಡಿಗೆ ವಿಮಾನಯಾನ ಸೇವೆಯನ್ನು ಅ.1ರಿಂದ ಆರಂಭಿಸಲಿದೆ. ಇದರಲ್ಲಿ 78ಯಾತ್ರಿಕರು ಪ್ರಯಾಣಿಸಬಹುದಾಗಿದೆ. ಬೆಂಗಳೂರಿನಿಂದ ಬೆಳಗ್ಗೆ 10.30ಕ್ಕೆ ವಿಮಾನ ಹೊರಡಲಿದ್ದು, ಶಿರಡಿ ತಲುಪಿದ ವಿಮಾನ ಬಳಿಕ 12.50ಕ್ಕೆ ಮುಂಬೈನತ್ತ ಹಾರಾಟ ನಡೆಸಲಿದೆ.
ಸಂಜೆ 3 ಗಂಟೆಗೆ ಮರಳಿ ಶಿರಡಿಗೆ ಬರಲಿದ್ದು ಸಂಜೆ 4ಗಂಟೆಗೆ ಶಿರಡಿಯಿಂದ ಬೆಂಗಳೂರಿನತ್ತ ಹಾರಾಟ ನಡೆಸಲಿದೆ. ಸಾಯಿಬಾಬಾ ಭಕ್ತರು ರೈಲಿನಲ್ಲಿ ಎರಡು ದಿನಗಟ್ಟಲೆ ಪ್ರಯಾಣ ಮಾಡಿ ತೆರಳುವ ಬದಲು ಸುಲಭವಾಗಿ ಒಂದೇ ದಿನದಲ್ಲಿ ದರ್ಶನ ಮುಗಿಸಿ ಬರಬಹುದಾಗಿದೆ.

ಬೆಂಗಳೂರು ಅಷ್ಟೇ ಅಲ್ಲದೆ ಮುಂಬೈ, ಹೈದರಾಬಾದ್ ಇತರೆ ಪ್ರದೇಶಗಳಿಗೂ ವಿಮಾನಯಾನ ಸಂಸ್ಥೆಗಳು ಸೇವೆ ಒದಗಿಸಲು ಮುಂದಾಗಿದೆ. ಹೈದರಾಬಾದ್ ಹಾಗೂ ಮುಂಬೈ ನಿಂದ ಶಿರಡಿಗೆ ತೆರಳುವ ವಿಮಾನಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಸೆ.20ರಿಂದ 189 ಆಸನ ಸಾಮರ್ಥ್ಯ ಗಳನ್ನು ಒಳಗೊಂಡಿರುವ ದೆಹಲಿ-ಶಿರಡಿ ನೇರ ಬೋಯಿಂಗ್ ವಿಮಾನ ಸೇವೆಯನ್ನು ಆರಂಭಿಸಲಾಗುತ್ತಿದೆ.
ಹನ್ನೆರೆಡು ದೇಶೀಯ ವಿಮಾನಯಾನ ಸಂಸ್ಥೆಗಳು ಅನುಮೋದನೆ ಪಡೆದಿದೆ. ಈಗಾಗಲೇ ದೇಶದ ವಿವಿಧ ನಗರಗಳಿಗೆ ಹಾರಾಟ ನಡೆಸಲು ಸ್ಪೈಸ್ ಜೆಟ್, ಜೆಟ್ ಏರ್, ಟ್ರು ಏರ್ ಸಂಸ್ಥೆಗಳು ಸಿದ್ಧವಾಗಿವೆ.











Click it and Unblock the Notifications