IMD Weather Forecast: ಮತ್ತೆ ಚಂಡಮಾರುತ ಪ್ರಸರಣ ತೀವ್ರತೆ: ಈ ಭಾಗಗಳಲ್ಲಿ ಜು.30ರವರೆಗೆ ಭಾರೀ ಮಳೆ...Rain Alert
ದೆಹಲಿ, ಜುಲೈ 27: ಮುಂಗಾರು ಮಳೆ ಅಬ್ಬರಕ್ಕೆ ಕರ್ನಾಟಕ ಮಾತ್ರವಲ್ಲದೇ ಅನೇಕ ರಾಜ್ಯಗಳು ನಡುಗಿವೆ. ಕಳೆದೊಂದು ತಿಂಗಳಿನಿಂದ ಉತ್ತರ ಭಾರತದ ಅನೇಕ ಹಲವಾರು ರಾಜ್ಯಗಳಲ್ಲಿ ಭೀಕರ ಮಳೆಯಿಂದಾಗಿ ಪ್ರವಾಹ ಉಂಟಾಗಿ ಅಪಾರ ಹಾನಿ ಸಂಭವಿಸಿದೆ. ಪ್ರವಾಹ ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಇದೀಗ ಮತ್ತೆ ಚಂಡಮಾರುತ ಪರಿಚಲನೆ ಮುಂದುವರಿದಿದ್ದು, ಅದು ತೀವ್ರಗೊಳ್ಳಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಭಾರೀ ಮಳೆ ಆಗುವ ರಾಜ್ಯಗಳಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಣೆ ಆದರೂ ಅಚ್ಚರಿ ಇಲ್ಲ. ಯಾವೆಲ್ಲ ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ ಕೊಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಭಾನುವಾರ ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆ ಪ್ರಕಾರ, ವಾಯುವ್ಯ ಮಧ್ಯಪ್ರದೇಶ ಮತ್ತು ನೆರೆಹೊರೆಯಲ್ಲಿ ಇಂದು (ಜುಲೈ 27)ಭಾನುವಾರ ಬೆಳಗ್ಗೆ ಕಡಿಮೆ ಒತ್ತಡದ ಪ್ರದೇಶದ ವಾತಾವರಣ ಮುಂದುವರಿದಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೃಷ್ಟಿಯಾದ ಚಂಡಮಾರುತದ ಪರಿಚಲನೆ ಸರಾಸರಿ ಸಮುದ್ರ ಮಟ್ಟದಿಂದ 7.6 ಕಿಮೀ ವರೆಗೆ ವಿಸ್ತರಣೆಗೊಂಡಿದೆ. ಅದರ ನೈಋತ್ಯ ದಿಕ್ಕಿಗೆ ಓರೆಯಾಗಿದ್ದು, ಅದು ವಾಯುವ್ಯ ಮಧ್ಯಪ್ರದೇಶದಾದಿಂದ ಪಶ್ಚಿಮಕ್ಕೆ ಚಲಿಸುವ ನಿರೀಕ್ಷೆ ಇದೆ. ಮುಂದಿನ 12 ಗಂಟೆಗಳಲ್ಲಿ ಕ್ರಮೇಣ ಅದರ ಪ್ರಭಾವ ಕಡಿಮೆ ಆಗಬಹುದು. ಇಲ್ಲವೇ ಮತ್ತಷ್ಟು ತೀವ್ರಗೊಳ್ಳಬಹುದೆಂದು ಹವಾಮಾನ ತಜ್ಞರು ಊಹಿಸಿದ್ದಾರೆ.

ಇನ್ನು ಸಮುದ್ರ ಮೇಲ್ಮೈನಲ್ಲಿ ಸೃಷ್ಟಿಯಾಗಿದ್ದ ಸ್ಟ್ರಫ್ ಬಿಕಾನೆರ್, ಕೋಟಾ ಮೂಲಕ ಹಾದುಹೋಗುತ್ತದೆ. ವಾಯುವ್ಯ ಮಧ್ಯಪ್ರದೇಶ ಮತ್ತು ನೆರೆಹೊರೆಯ ಡಾಲ್ಟೊಂಗಂಜ್, ದಿಘಾ ಮತ್ತು ಅಲ್ಲಿಂದ ಆಗ್ನೇಯಕ್ಕೆ ಪೂರ್ವ ಮಧ್ಯ ಬಂಗಾಳ ಕೊಲ್ಲಿವರೆಗೆ ಸಾಗಿ ಬರಲಿದೆ. ಈ ವೇಳೆ ವೈಪರೀತ್ಯ ಬಿರುಗಾಳಿ ವೇಗ ಹೆಚ್ಚಾಗಲಿದೆ.
ಇದಷ್ಟೇ ಅಲ್ಲದೇ ಮಹಾರಾಷ್ಟ್ರದ ಒಳನಾಡಿನ ಉತ್ತರ ಭಾಗಗಳ ಭೂಮಿ ಮೇಲ್ಮೈನಲ್ಲಿ ವಾಯು ಚಂಡಮಾರುತದ ಪರಿಚಲನೆಯು ಭಾನುವಾರ ಕಂಡು ಬಂದಿದೆ. ವಾಯುವ್ಯ ಮಧ್ಯಪ್ರದೇಶ ಮತ್ತು ನೆರೆಹೊರೆಯಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ. ಭೂಮಿ ಮೇಲ್ಮೈನ ಕಡಿಮೆ ಒತ್ತಡದ ಪ್ರದೇಶ ಹಾಗೂ ಚಂಡಮಾರುತದ ಪರಿಚಲನೆ ವಿಲೀನಗೊಂಡಿದೆ. ಇನ್ನು ಅರಬ್ಬಿ ಸಮುದ್ರ ಭಾಗದಲ್ಲಿ ಅಂದರೆ ಗುಜರಾತ್ ನಿಂದ ಕೇರಳ ಉತ್ತರ ಕರಾವಳಿಯಲ್ಲಿ ಸಮುದ್ರದಲ್ಲಿ ಸ್ಟ್ರಪ್ ಸೃಷ್ಟಿಯಾಗಿದೆ. ಇದು ಸದ್ಯಕ್ಕೆ ಸಣ್ಣ ಪ್ರಯಾಣದಲ್ಲಿದೆ. ಮುಂದಿನ ವಾರದ ಇದರ ಪ್ರಭಾವ ಹೆಚ್ಚಾಗುವ ನಿರೀಕ್ಷೆ ಇದೆ.
ಎಲ್ಲೆಲ್ಲಿ ಭಾರೀ ಮಳೆ ಎಚ್ಚರಿಕೆ?
ಕೇರಳ ಕರಾವಳಿ ಭಾಗದ ಪ್ರದೇಶಗಳು, ಕರ್ನಾಟಕ ಕರಾವಳಿ, ರಾಜಸ್ಥಾನ್, ಮಧ್ಯಪ್ರದೇಶ, ಗುಜರಾತ್, ಹರಿಯಾಣ, ಆಂಧ್ರ ಪ್ರದೇಶ, ಒಡಿಶಾ, ತೆಲಂಗಾನ, ತಮಿಳುನಾಡು ಹಾಗೂ ಮಣಿಪುರ, ಅಸ್ಸಾಂ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಆಗಲಿದೆ. ಕೆಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಲಿದೆ. ಕೆಲವು ರಾಜ್ಯಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಎರಡು ವಾರಗಳಿಂದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಬಿಸಿಲು ಅಪರೂಪ ಎಂಬಂತಾಗಿದೆ. ಕರ್ನಾಟಕದ ಕರಾವಳಿ, ಮಳೆನಾಡಿನಲ್ಲೂ ಭಾರೀ ಮಳೆ ಆಗುತ್ತಿದೆ.
ಭಾರೀ ಮಳೆಗೆ ಶಾಲೆ ರಜೆ ಮುಂದುವರಿಕೆ?
ಮುಂದಿನ ಮೂರು ದಿನ ಹರಿಯಾಣ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಸೇರಿದಂತೆ ಇತರ ರಾಜ್ಯಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಉತ್ತರ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಮುಂಗಾರು ವಾರಗಳಿಂದ ಸಕ್ರಿಯವಾಗಿದೆ. ಎಲ್ಲಿ ನೋಡಿದರೂ ಬಿಸಿಲಿನ ದರ್ಶನ ಇಳಿಕೆಯಾಗಿದ್ದು, ಚಳಿ ಆವರಿಸಿದೆ. ಇನ್ನೂ ಆಂಧ್ರ ಪ್ರದೇಶ, ಹರಿಯಾಣ, ತೆಲಂಗಾಣ ಸೇರಿ ಕೆಲವು ರಾಜ್ಯಗಳಲ್ಲಿ ಭಾರೀ ಮಳೆಗೆ ಶಾಲೆಗಳಿಗೆ ರಜೆ ನೀಡಲಾಗಿತ್ತು. ಸೋಮವಾರವು ರಜೆ ಮುಂದುವರಿಸುವ ನಿರೀಕ್ಷೆ ಇದೆ.












Click it and Unblock the Notifications