ಭಾನುವಾರ ಬೆಂಗಳೂರಿನಲ್ಲಿ ಸೈಕಲ್ ದಿನಾಚರಣೆ
ಬೆಂಗಳೂರಿನ ಕಿಕ್ಕಿರಿದ ಟ್ರಾಫಿಕ್ಕಿನಲ್ಲಿ ಪದೇ ಪದೇ ಗೇರ್ ಬದಲಿಸುತ್ತಾ, ಬ್ರೇಕ್ ಹಾಕುತ್ತಾ ಕಾರ್ / ಬೈಕ್ ಓಡಿಸಿ ಸುಸ್ತಾಗಿದ್ದೀರಾ?! ಹತ್ತಿರದ ಮಾರ್ಗವಿದ್ದರೂ, ಸುತ್ತಿ ಬಳಸಿ ಹೋಗುವ ಬಿ.ಎಂ.ಟಿ.ಸಿ. ಬಸ್ಸಿನಲ್ಲಿ ಪ್ರಯಾಣಿಸಿ ಟೈಮ್ ವೆಸ್ಟ್ ಆಗಿದೆಯಾ?! ಪ್ರತಿ ಬಾರಿ ಮೀಟರ್ ಮೇಲೆ ಐದು / ಹತ್ತು ರೂಪಾಯಿ ಕೇಳುವ ಆಟೋದವರ ಮೇಲೆ ಸಿಟ್ಟಾಗಿದ್ದೀರಾ? ಹಾಗಾದರೆ, ಈ ಎಲ್ಲಾ ಒತ್ತಡಗಳಿಂದ, ಸಮಸ್ಯೆಗಳಿಂದ ಪಾರಾಗಲು 'ಸೈಕಲ್ ಹತ್ತಿ ಬನ್ನಿ'
ಹೌದು, ಬೆಂಗಳೂರಿನ ಟ್ರಾಫಿಕ್ ಅನ್ನು ಕಡಿಮೆ ಮಾಡಬೇಕಾದರೆ, ಇಲ್ಲಿನ ವಾಯು ಮಾಲಿನ್ಯವನ್ನು ನಿಯಂತ್ರಿಸಬೇಕಾದರೆ, ಸಮಯ ಉಳಿಸಬೇಕಾದರೆ, ಸಮೂಹ ಸಾರಿಗೆಯನ್ನು ಬಳಸುವುದರ ಜೊತೆಗೆ, ಸೈಕಲ್ ಬಳಕೆಯನ್ನು ಹೆಚ್ಚು ಮಾಡಬೇಕು ಎಂಬ ಸಲಹೆಯೊಂದಿಗೆ ನಗರದಲ್ಲಿ ಇದೇ ಭಾನುವಾರ, ಅಂದರೆ 6ನೇ ಜುಲೈ 2014 ರಂದು ಯಲಹಂಕ ಬಳಿಯ ಅಲ್ಲಾಳಸಂದ್ರ ಕೆರೆಯ ಅವರಣದಲ್ಲಿ ಸೈಕಲ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸೈಕಲ್ ಬಳಕೆಯ ಉಪಯೋಗದ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಸುಂದರವಾಗಿದ್ದ, ನಿರ್ಮಲವಾಗಿದ್ದ ಹಳೆಯ ಬೆಂಗಳೂರನ್ನು ನೆನೆಯೋಣ, ಇಂದಿನ ಹುಡುಗರಿಗೆ ಅದರ ಪರಿಚಯ ಮಾಡಿಸಿ, ಬೆಂಗಳೂರಿನ ಬಗ್ಗೆ, ಇಲ್ಲಿನ ವಾತಾವರಣದ ಬಗ್ಗೆ ಅರಿವು ಮೂಡಿಸಿ ಅರ್ಥಪೂರ್ಣವಾಗಿ ಭಾನುವಾರದ ಬೆಳಿಗ್ಗೆಯೊಂದನ್ನು ನಮ್ಮದಾಗಿಸಿಕೊಳ್ಳೋಣ
ಬನ್ನಿ, Directorate of Urban Land Transport (DULT) 'ಯಲಹಂಕ ಯುನೈಟೆಡ್ ಎನ್ವಿರಾನ್ ಮೆಂಟ್ ಅಸೋಸಿಯೇಶನ್' ನ (YUVA) ಸಹಯೋಗದೊಂದಿಗೆ ಆಯೋಜಿಸುತ್ತಿರುವ, ಮತ್ತೊಮ್ಮೆ ಸೈಕಲ್ ಅನ್ನು ಮುಖ್ಯವಾಹಿನಿಗೆ ಕರೆತರುವ ಈ ಪ್ರಯತ್ನಕ್ಕೆ ಕೈ ಜೋಡಿಸಿ, 'ಸೈಕಲ್ ದಿನ' ದಲ್ಲಿ ಪಾಲ್ಗೊಳ್ಳಿ.
ಹೆಚ್ಚಿನ ಮಾಹಿತಿಗೆ:yuvayelahanka.com













Click it and Unblock the Notifications