ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ರಾಮೇಶ್ವರಂ ಕೆಫೆ ವಿರುದ್ಧ ರೊಚ್ಚಿಗೆದ್ದ ಗ್ರಾಹಕರು
KIA Rameshwaram Cafe: ಪ್ರಸಿದ್ಧ ಕೆಫೆಗಳಲ್ಲಿ ರಾಮೇಶ್ವರಂ ಒಂದಾಗಿದೆ. ಇದೀಗ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರುವ ಇದೇ ಕೆಫೆ ವಿರುದ್ಧ ಈ ಕಾರಣಕ್ಕೆ ಗ್ರಾಹರು ಕೆಂಡಕಾರುತ್ತಿದ್ದಾರೆ. ಹಾಗಾದ್ರೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಸಣ್ಣಪುಟ್ಟ ಹೋಟೆಲ್‌ಗಳಲ್ಲಿ ಸಣ್ಣ ತಪ್ಪಾದರೂ ಕೂಡ ಗ್ರಾಹಕರು ಆಕ್ರೋಶ ಹೊರಹಾಕಿಬಿಡುತ್ತಾರೆ. ಇನ್ನೂ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಈ ರೀತಿ ಆದ್ರೆ ನಡೆಯುವುದೇ ಬೇರೆ ಆಗಿರುತ್ತದೆ. ಇದೀಗ ಜನಪ್ರಿಯ ರಾಮೇಶ್ವರಂ ಕೆಫೆಯಲ್ಲೂ ಅದೇ ಆಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಖರೀದಿಸಿದ ಪೊಂಗಲ್‌ನಲ್ಲಿ ಜಿರಳೆ ಪತ್ತೆ ಆಗಿದ್ದು, ಇದರಿಂದ ಕೆಫೆ ವಿರುದ್ಧ ಗ್ರಾಹಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಂದು (ಜುಲೈ 24) ಬೆಳಗ್ಗೆ ಲೋಕನಾಥ್ ಎಂಬುವವರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಿಂದ 300 ರೂಪಾಯಿ ಹಣ ನೀಡಿ ಪೊಂಗಲ್ ಮತ್ತು 180 ರೂಪಾಯಿಗೆ ಫಿಲ್ಟರ್ ಕಾಫಿ ಖರೀದಿ ಮಾಡಿದ್ದರು. ಒಟ್ಟು ಬಿಲ್ 504 ರೂಪಾಯಿ ಆಗಿತ್ತು ಎಂದು ವರದಿಯಾಗಿದೆ.
ಯಾವುದಕ್ಕೆ ಎಷ್ಟು ಹಣ?
* ಪೊಂಗಲ್ - 300 ರೂಪಾಯಿ
* ಫಿಲ್ಟರ್ ಕಾಫಿ - 180 ರೂಪಾಯಿ
* ಒಟ್ಟು ಮೊತ್ತ - 504 ರೂಪಾಯಿ
ಅವರು ಅದನ್ನು ತಿನ್ನುವ ವೇಳೆ ಅದರಲ್ಲಿ ಜಿರಳೆ ಪತ್ತೆಯಾಗಿದೆ. ತಕ್ಷಣವೇ ಅವರು ಹೋಟೆಲ್ ಸಿಬ್ಬಂದಿಗೆ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ನಮ್ಮಿಂದ ತಪ್ಪಾಗಿದೆ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಆದರೂ, ಇದೀಗ ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೆಲ್ಲ ಹಣ ಕೊಟ್ಟರೂ ಇಂತಹ ಕಳಪೆ ಮಟ್ಟದ ಆಹಾರ ಕೊಡುತ್ತಿದ್ದಾರೆ ಎಂದು ಗ್ರಾಹಕರು ಆಕ್ರೋಶ ವ್ತಕ್ತಪಡಿಸಿದ್ಧಾರೆ.
2021ರಲ್ಲಿ ಆರಂಭ ಆದ ರಾಮೇಶ್ವರಂ ಕೆಫೆ ಕೆಲವೇ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಜನಪ್ರಿಯ ಹೋಟೆಲ್ ಆಗಿ ಬೆಳೆಯಿತು. ಇಲ್ಲಿನ ದೋಸೆ, ತುಪ್ಪದ ಬಳಕೆ, ಉತ್ತಮ ಗುಣಮಟ್ಟದ ಕಾಫಿಗೆ ಬಹುತೇಕ ಮಂದಿ ಫಿಧಾ ಆಗಿದ್ದಾರೆ. ನಗರಕ್ಕೆ ಆಗಮಿಸುವ ತುಂಬಾ ಮಂದಿ ಈ ಹೋಟೆಲ್‌ಗೆ ತಪ್ಪದೇ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ, ಇದೀಗ ಜಿರಳೆ ಪತ್ತೆಯಿಂದ ಗ್ರಾಹಕರ ವಲಯದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ಇನ್ನು ಇದೇ ರೀತಿ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. ಬೇರೆಡೆಯೂ ನಡೆದ ಉದಾಹರಣೆಗಳಿವೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ರೆಡ್ ಪಕೋರಾದಲ್ಲಿ ಜಿರಳೆ ಕಂಡುಬಂದಿತ್ತು. ಜೊತೆಗೆ, ಚಾಕೊಲೇಟ್ ಸಿರಪ್‌ನಲ್ಲಿ ಸತ್ತ ಇಲಿ ಮತ್ತು ಬರ್ಗರ್ ಕಿಂಗ್‌ನ ಬರ್ಗರ್‌ನಲ್ಲಿ ಕೀಟ ಕಂಡುಬಂದ ಘಟನೆಗಳೂ ವರದಿ ಆಗಿವೆ.












Click it and Unblock the Notifications