ಆರ್‌ಸಿಬಿ ಚಪ್ರಿ ಅಭಿಮಾನಿಗಳಿಂದಲೇ ಕಾಲ್ತುಳಿತ! ಎಂಐ & ಸಿಎಸ್‌ಕೆ ಫ್ಯಾನ್ಸ್‌ಗಳಿಂದ ಶುರುವಾಯ್ತು ಟ್ರೋಲ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಯ ದುರಂತಕ್ಕೆ ಸಂಬಂಧಿಸಿದಂತೆ ಇದೀಗ ಆರ್‌ಸಿಬಿ ಹಾಗೂ ಆರ್‌ಸಿಬಿ ಅಭಿಮಾನಿಗಳನ್ನು ಟ್ರೋಲ್ ಮಾಡಲಾಗುತ್ತಿದ್ದು. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಆರ್‌ಸಿಬಿಯ ಅಭಿಮಾನಿಗಳು ಚಪ್ರಿಗಳು ಅಂತ ಹೇಳಲಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಐಪಿಎಲ್ ಕಪ್ ಬರದೆ ಇದ್ದಾಗಲೇ ಚೆನ್ನಾಗಿತ್ತು. ಬಂದ ಮೇಲೆ ಇವರ ಚಪ್ರಿ ಶೋಕಿಗಳು ಹೆಚ್ಚಾಗಿದೆ ಎನ್ನುವ ಟ್ರೋಲ್ ಶುರುವಾಗಿದೆ. ಇಷ್ಟಕ್ಕೂ ಸೋಷಿಯಲ್ ಐಪಿಎಲ್ ಹಾಗೂ ಆರ್‌ಸಿಬಿಯ ಬಗ್ಗೆ ಚರ್ಚೆ ಆಗುತ್ತಿರುವುದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಭಾರೀ ಅವಘಡ ಸಂಭವಿಸಿದೆ. ಈ ದುರಂತದಿಂದ ಆಘಾತದಿಂದ ಜನ ಇನ್ನೂ ಹೊರಗೆ ಬಂದಿಲ್ಲ. ಈ ರೀತಿ ಇರುವಾಗಲೇ ಕೆಲವು ನಾರ್ಥಿಗಳು ಹಾಗೂ ಸಿಎಸ್‌ಕೆ ಮತ್ತು ಮುಂಬೈನ್‌ನ ಕೆಲವು ಫ್ಯಾನ್ಸ್‌ಗಳು ಉದ್ದೇಶ ಪೂರ್ವಕವಾಗಿ ಬೆಂಗಳೂರು ಹಾಗೂ ಕರ್ನಾಟಕವನ್ನು ಕೆಣಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ನಗರದಲ್ಲಿ ನಡೆದಿರುವ ದುರಂತಕ್ಕೆ ವಿಶ್ವದಾದ್ಯಂತ ಜನ ಕಂಬನಿ ಮಿಡಿದಿದ್ದಾರೆ. ಹಲವರು ಈ ರೀತಿಯ ದುರಂತವೊಂದು ಸಂಭವಿಸಬಾರದಿತ್ತು. ಅದರಲ್ಲೂ ಬೆಂಗಳೂರು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂತಹದೊಂದು ಕರಾಳ ದಿನಕ್ಕೆ ಸಾಕ್ಷಿಯಾಗಬಾರದಿತ್ತು ಅಂತಲೇ ಅಭಿಪ್ರಾಯಪಡಲಾಗುತ್ತಿದೆ. ಆದರೆ ಕೆಲವು ಹುಚ್ಚು ಆರ್‌ಸಿಬಿ ಅಭಿಮಾನಿಗಳ ಬಗ್ಗೆ ಆಕ್ರೋಶ ಹೆಚ್ಚಾಗುತ್ತಿದೆ.
Indian Cricket Sarcasm ಎನ್ನುವ ಖಾತೆಯಿಂದ ಮುಂಬೈನಲ್ಲಿ ನಡೆದ ಟಿ20 ವಿಶ್ವಕಪ್ ಪರೇಡ್‌ನಲ್ಲಿ ಯಾವುದೇ ಅವಘಡಗಳು ಸಂಭವಿಸಿಲ್ಲ. ಬೆಂಗಳೂರಿನಲ್ಲಿದ್ದ ಜನಸಂದಣಿಗಿಂತ ಐದು ಪಟ್ಟು ಹೆಚ್ಚು ಜನಸಮೂಹ ಇತ್ತು. ಅಲ್ಲಿನ ಆಡಳಿತ ಮಂಡಳಿಗೆ ಹ್ಯಾಟ್ಸ್ ಆಫ್ 🙌 ಎಂದು ಬರೆದುಕೊಳ್ಳಲಾಗಿದೆ. (No mishaps occurred during the T20 World Cup parade in Mumbai. The crowd was easily five times bigger than the one in Bengaluru. Hats off to the management there 🙌) ಅಲ್ಲದೇ ಬೆಂಗಳೂರು ಪೊಲೀಸರು ಜನಸಂದಣೆಯನ್ನು ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಲಾಗುತ್ತಿದೆ. ಈ ರೀತಿಯ ಅರ್ಥವೇ ಇಲ್ಲದ ಹಲವು ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮುಂಬೈ ಪೊಲೀಸ್ & ಜನ ಗ್ರೇಟ್: ಇನ್ನು ಮುಂಬೈನ ಪೊಲೀಸರು ಹಾಗೂ ಅಲ್ಲಿನ ಜನ ಗ್ರೇಟ್ ಎನ್ನುವ ಕಮೆಂಟ್‌ಗಳು ಬರುತ್ತಿವೆ. ಅಲ್ಲಿ ಲಕ್ಷಾಂತರ ಜನ ಸೇರಿದರೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಆದರೆ, ಬೆಂಗಳೂರಿನಲ್ಲಿ ಆ ರೀತಿ ಆಗಿಲ್ಲ. ಆಟವನ್ನು ಕೇವಲ ಆಟವನ್ನಾಗಿ ಮಾತ್ರ ಸ್ವೀಕರಿಸಬೇಕಾಗಿತ್ತು ಅಂತಲೂ ಹೇಳಲಾಗುತ್ತಿದೆ. ಅಲ್ಲದೇ ಆರ್‌ಸಿಬಿಯ ಕೆಲವು ಅತಿರೇಖದ ಅಭಿಮಾನಿಗಳ ನಡವಳಿಕೆ ಸರಿ ಇಲ್ಲ ಎಂದೂ ಹೇಳಲಾಗುತ್ತಿದೆ.












Click it and Unblock the Notifications