ಬೆಂಗಳೂರು: ಕಾಡಾನೆಗಳ ದಾಳಿಗೆ ಇಬ್ಬರು ಸಿಆರ್ ಪಿಎಫ್ ಯೋಧರು ಬಲಿ
ಬೆಂಗಳೂರು, ಮೇ 07 : ಆಹಾರ ಆರಿಸಿ ಬಂದಿದ್ದ ಕಾಡಾನೆ ದಾಳಿಗೆ ಇಬ್ಬರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಭಾನುವಾರ ಬೆಳಗಿನ ಜಾವ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಕಗ್ಗಲೀಪುರ ವಲಯದ ಅರಣ್ಯ ಪ್ರದೇಶದಲ್ಲಿರುವ ಸಿಆರ್ ಪಿಎಫ್ ಸೇನಾ ಶಿಬಿರದ ಬಳಿ ಕಾಡಾನೆಗಳು ಆಹಾರಕ್ಕಾಗಿ ಲಗ್ಗೆಯಿಟ್ಟು ಇಬ್ಬರ ಮೇಲೆ ದಾಳಿ ಮಾಡಿವೆ.

ಈ ವೇಳೆ ಇಬ್ಬರು ಯೋಧರ ಮೇಲೆ ದಾಳಿ ಮಾಡಿದ್ದು ತಮಿಳುನಾಡು ಮೂಲದ ಮೂರ್ತಿ (52) ಎನ್ನುವರು ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಹಾವೇರಿ ಜಿಲ್ಲೆ ಮೂಲದ ಪುಟ್ಟಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ಕಗ್ಗಲೀಪುರ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.












Click it and Unblock the Notifications