ಕ್ರೈಂ ರೌಂಡಪ್: ಕೊಲೆ ಮಾಡಿ ಜೈಲು ಸೇರಿದ್ದ ರೌಡಿ ಹತ್ಯೆ!

ಬೆಂಗಳೂರು, ಅ. 25: ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಕಾರು ಅಡ್ಡಗಟ್ಟಿದ ವಾಹನ ನಿಲ್ಲಿಸಿದ ಸಂಚಾರ ಪೇದೆ ಮೇಲೆ ಕಾರು ಹತ್ತಿಸಲು ಯತ್ನ. ಹದಿನೆಂಟು ವರ್ಷ ವಯಸ್ಸಿನಲ್ಲಿ ಕೊಲೆ ಮಾಡಿದ್ದ ರೌಡಿ ಶೀಟರ್ ಬರ್ಬರ ಹತ್ಯೆ, ಟ್ರಸ್ಟ್‌ಗೆ ದೇಣಿಗೆ ನೀಡುವ ಅಸೆ ಹುಟ್ಟಿಸಿ ಎಂಟು ಲಕ್ಷ ರೂ. ಮೋಸ ಮಾಡಿದ ಸೈಬರ್ ವಂಚಕರು. ಇದು ಬೆಂಗಳೂರು ಅಪರಾಧ ಸುದ್ದಿ ಲೋಕದ ಚಿತ್ರಣ.

Recommended Video

      ಬೆಂಗಳೂರು: ಮೂರು ದಿನದ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ರೌಡಿಶಿಟರ್‌ ಕೊಲೆ

      ಪಾತಕ ಲೋಕವೇ ಹಾಗೇ. ಒಂದು ಅಪರಾಧ ಕೃತ್ಯ ಎಸಗಿ ಡಾನ್ ಎನಿಸಿಕೊಂಡು ಮೆರೆದವನು ಒಂದಲ್ಲಾ ಒಂದು ದಿನ ಅದೇ ಪಾತಕ ಲೋಕದ ಕೃತ್ಯದಿಂದಲೇ ಮಸಣ ಸೇರುವುದು ಗ್ಯಾರೆಂಟಿ! ಹದಿನೆಂಟು ವರ್ಷ ವಯಸ್ಸು ಮುಗಿಯುವ ಮುನ್ನವೇ ಕೊಲೆ ಮಾಡಿ ಜೈಲು ಸೇರಿ ರೌಡಿ ಪಟ್ಟ ಧರಿಸಿದ್ದವನನ್ನು ಅಪರಿಚಿತರು ಮಾರಕಾಸ್ತ್ರಗಳಿದ ಕೊಚ್ಚಿ ಕೊಲೆ ಮಾಡಿದ್ದಾರೆ.

      ನೆಲಗೆದರನಹಳ್ಳಿಯ ನಿವಾಸಿ ಶಿವಪುರ ಸಮೀಪ ರೌಡಿ ಶೀಟರ್ ಜೆ.ಸಿ. ಆನಂದ್‌ನನ್ನು ಅಪರಿಚಿತರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಆನಂದ್. ಭಾನುವಾರ ರಾತ್ರಿ ಐವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹದಿನೆಂಟು ವರ್ಷ ತುಂಬಿದ್ದಾಗಲೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆನಂದ್ ಆ ಬಳಿಕ ಜೆಡಿಎಸ್ ಪಕ್ಷದ ನಾಯಕನಾಗಿ ಗುರುತಿಸಿಕೊಂಡಿದ್ದ. ಕೆಲ ದಿನಗಳ ಹಿಂದೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಹಳೇ ದ್ವೇಷದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದು, ಉತ್ತರ ವಿಭಾಗದ ಪೊಳೀಸರು ತನಿಖೆ ನಡೆಸುತ್ತಿದ್ದಾರೆ.

      ಪೊಲೀಸರ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಕುಡುಕ:

      ಕುಡಿದು ವಾಹನ ಚಾಲನೆ ಮಾಡುವ ವಾಹನ ತಪಾಸಣೆ ಮಾಡುತ್ತಿದ್ದ ಎಚ್‌ಎಎಲ್ ಸಂಚಾರ ಮುಖ್ಯ ಪೇದೆ ಮೇಲೆ ಕಾರು ಹತ್ತಿಸಲು ಯತ್ನಿಸಿರುವ ಘಟನೆ ನಡೆದಿದೆ.

      Crime Roundup: Rowdy-sheeter JC Anand killed 3 days after release from jail

      ಎಚ್‌ಎಎಲ್ ಸಂಚಾರ ಠಾಣೆ ಮುಖ್ಯ ಪೇದೆ ಮುಬಾರಕ್ ಆಲಿ ಅವರ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಮುಖ್ಯ ಪೇದೆ ನೀಡಿದ ದೂರಿನ ಮೇರೆಗೆ KA 01 MS 3772 ನೋಂದಣಿಯ ಕ್ರೆಟಾ ಕಾರು ಚಾಲಕನ ವಿರುದ್ಧ ಎಚ್‌ಎಎಲ್ ಠಾಣೆಯಲ್ಲಿ ಎಫ್ಐರ್ ದಾಖಲಾಗಿದೆ.

      ಭಾನುವಾರ ರಾತ್ರಿ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಯಮಲೂರು ಕಡೆಯಿಂದ ಅತಿ ವೇಗವಾಗಿ ಬಂದ ಹುಂಡೈ ಕ್ರೇಟಾ ಕಾರನ್ನು ಮುಬಾರಕ್ ಆಲಿ ನಿಲ್ಲಿಸಲು ಯತ್ನಿಸಿದ್ದಾರೆ. ಈ ವೇಳೆ ನಾನು ಯಾರು ಗೊತ್ತಾ ? ನನ್ನ ಕಾರು ತಡೆಯಲು ಹೇಳಿದವರು ಯಾರು? ಎಂದು ಕಾರು ಮಾಲೀಕ ರಾಮಾಂಜುಲು ಧಮ್ಕಿ ಹಾಕಿದ್ದಾನೆ. ಮುಖ್ಯ ಪೇದೆಯನ್ನು ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಹೆಡ್ ಕಾನ್‌ಸ್ಟೇಬಲ್ ಕಾಲಿನ ಮೇಲೆ ಕಾರು ಹತ್ತಿಸಿದ್ದಾರೆ. ಈ ವೇಳೆ ಮುಬಾರಕ್ ಆಲಿ ಅವರ ಕಾಲಿಗೆ ಗಾಯವಾಗಿದೆ. ಕಾರು ಚಾಲನೆ ಮಾಡುತ್ತಿದ್ದ ರಾಮಾಂಜುಲು ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

      ಟ್ರಸ್ಟ್‌ಗೆ ದೇಣಿಗೆ ಕೊಡುವ ಹೆಸರಿನಲ್ಲಿ ಮೋಸ: ಟ್ರಸ್ಟ್‌ಗೆ ದೇಣಿಗೆ ನೀಡುವ ಅಮಿಷವೊಡ್ಡಿ ಸೈಬರ್ ಕ್ರಿಮಿನಲ್‌ಗಳು ಬೆಂಗಳೂರಿನ ಟ್ರಸ್ಟ್‌ ಮುಖ್ಯಸ್ಥರೊಬ್ಬರಿಗೆ ಎಂಟು ಲಕ್ಷ ರೂ. ವಂಚನೆ ಮಾಡಿದ್ದಾರೆ.

      Crime Roundup: Rowdy-sheeter JC Anand killed 3 days after release from jail

      ಬನಶಂಕರಿ ನಿವಾಸಿ ಸಂತೋಷ್ ಹಣ ಕಳೆದುಕೊಂಡವರು. ಹಿಸ್ ಗ್ರೇಸ್ ಎಂಬ ಟ್ರಸ್ಟ್‌ ನಡೆಸುತ್ತಿರುವ ಸಂತೋಷ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ನಿಮ್ಮ ಟ್ರಸ್ಟ್‌ಗೆ ಲಕ್ಷಾಂತರ ಹಣ ಕೊಡುತ್ತೇವೆ ಎಂದು ಹೇಳಿದ್ದ.ಇದನ್ನು ನಂಬಿದ್ದ ಸಂತೋಷ್ ಅಪರಿಚಿತ ಹೇಳಿದಂತೆ ನಡೆದುಕೊಳ್ಳುತ್ತಿದ್ದ. ನಿಮ್ಮ ಟ್ರಸ್ಟ್‌ಗೆ 24 ತಾಸಿನಲ್ಲಿಹಣ ಬರುತ್ತದೆ. ಆದರೆ ಮೊದಲು ನೀವು 12 ಲಕ್ಷ ರೂ. ನೀಡುವಂತೆ ಸೂಚಿಸಿದ್ದಾನೆ.

      ಇದನ್ನು ನಂಬಿಸಿದ ಸಂತೋಷ್ ತನ್ನ ಬ್ಯಾಂಕ್‌ನಲ್ಲಿದ್ದ ಹನ್ನೆರಡು ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇದಾಗಿ ಎರಡು ದಿನ ಕಳೆದರೂ ಹಣ ಬಂದಿಲ್ಲ. ಹಣ ವರ್ಗಾವಣೆಯಾದ ಕೂಡಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಕೆಲ ದಿನಗಳ ಬಳಿಕ ನಾಲ್ಕು ಲಕ್ಷ ರೂ. ಹಣವನ್ನು ಸಂತೋಷ್ ಬ್ಯಾಂಕ್ ಖಾತೆಗೆ ರವಾನೆ ಮಾಡಿದ್ದ. ಉಳಿದ ಎಂಟು ಲಕ್ಷ ರೂ. ಪಾವತಿಸದೇ ನಾಮ ಹಾಕಿದ್ದಾನೆ. ಮೋಸ ಹೋಗಿರುವ ವಿಚಾರ ಅರಿವಿಗೆ ಬಂದ ಬಳಿಕ ಸಂತೋಷ್ ದಕ್ಷಿಣ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+