ಬೆಂಗಳೂರು: ಫಿನ್ಲೆಂಡ್ ಕಲಾವಿದೆಯಿಂದ ನೃತ್ಯ ಶಿಬಿರ
ಬೆಂಗಳೂರು, ಜೂ.26: ಅಭಿನಯ, ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಯೋಚಿಸುತ್ತಿದ್ದವರಿಗೆ ಒಂದು ಗುಡ್‌ನ್ಯೂಸ್. ನಿಮಗಾಗಿ ನಗರದಲ್ಲೊಂದು ವಿಶೇಷ ನೃತ್ಯ ಶಿಬಿರವೊಂದು ಆಯೋಜನೆ ಗೊಂಡಿದೆ.
ಇನ್ ದಿ ಫ್ಲೋ(In the flow) ಹೆಸರಿನ ಈ ನೃತ್ಯ ಶಿಬಿರ ಜುಲೈ 5ರಂದು ನಹರ್ ಹೆರಿಟೇಜ್ ಹೊಟೆಲ್‌ನಲ್ಲಿ ಆಯೋಜನೆಗೊಂಡಿದ್ದು ಫಿನ್ಲೆಂಡ್‌ನ ನೃತ್ಯ ಮತ್ತು ನಾಟಕದಲ್ಲಿ ವಿಶಿಷ್ಟ ಸಾಧನೆ ಮಾಡಿದ ಅನ್ನಾ ಒಲಿಕಿನೊರಾ(Anna Olkinuora) ಈ ಶಿಬಿರದಲ್ಲಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ.
ಈ ಶಿಬಿರದ ಮತ್ತಷ್ಟು ಮಾಹಿತಿ ಮುಂದಿನ ಸ್ಲೈಡ್‌ನಲ್ಲಿ

ಕಲಾ ಪ್ರಪಂಚದ ಆಸಕ್ತರಿಗಾಗಿ:
ಕಲಾವಿದರು ಮತ್ತು ಕಲಾ ಪ್ರಪಂಚದಲ್ಲಿ ಭವಿಷ್ಯ ರೂಪಿಸಲು ಮುಂದಾಗುತ್ತಿರುವ ಆಸಕ್ತರಿಗಾಗಿ ವಿಶೇಷ ಶಿಬಿರ ಆಯೋಜನೆ ಗೊಂಡಿದೆ. ದೇಹ ಚಲಿಸುವಿಕೆ, ಸೃಜನಶೀಲ ಅಭಿನಯ, ಥಿಯೇಟರ್ ಆಟಗಳು, ಪದಗಳ ಸ್ಪಷ್ಟ ಉಚ್ಚಾರ ಇತ್ಯಾದಿ ಅಂಶಗಳ ಬಗ್ಗೆ ಶಿಬಿರದಲ್ಲಿ ಮಾಹಿತಿ ನೀಡಲಾಗುತ್ತದೆ.

ಅನ್ನಾ ಒಲಿಕಿನೊರಾ
ಹತ್ತನೇ ವಯಸ್ಸಿನಲ್ಲೇ ನಾಟಕ ರಂಗದಲ್ಲಿ ಆಸಕ್ತಿ ಬೆಳೆಸಿದ್ದ ಅನ್ನಾ ಒಲಿಕಿನೊರಾ ವಿವಿಧ ರೀತಿಯ ನೃತ್ಯ ಪ್ರಕಾರಗಳನ್ನು ಅಧ್ಯಯನ ಮಾಡಿದ್ದಾರೆ. ಇಂಗ್ಲೆಂಡ್‌ನಲ್ಲಿ ನೃತ್ಯ ಶಿಬಿರಗಳನ್ನು ಆಯೋಜಿಸಿದ್ದಾರೆ. ಯೋಗದ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಅನ್ನಾ ಪ್ರಸ್ತುತ ಭಾರತದಲ್ಲಿ ಯೋಗದಲ್ಲಿ ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ.

ಶಿಬಿರ ನಡೆಯುವ ಸ್ಥಳ:
ನಹರ್ ಹೆರಿಟೇಜ್ ಹೊಟೇಲ್
ಸೈಂಟ್ ಮಾಕ್ಸ್ ರಸ್ತೆ
ಬೆಂಗಳೂರು
ಅವಧಿ: ಬೆಳಗ್ಗೆ10 ರಿಂದ ಸಂಜೆ 5ರವರೆಗೆ
ಸಂಪರ್ಕಿಸಬೇಕಾದ ಸಂಖ್ಯೆ: 8095753000

ಶುಲ್ಕ ಎಷ್ಟು?
ಒಂದು ದಿನದ ಶಿಬಿರಕ್ಕೆ ವಯಸ್ಕರಿಗೆ 2250 ರೂ.
ವಿದ್ಯಾರ್ಥಿಗಳಿಗೆ 1800 ರೂ.












Click it and Unblock the Notifications