• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ಮೆಟ್ರೋದ 80 ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

|

ಬೆಂಗಳೂರು, ಅಕ್ಟೋಬರ್ 9: ದಿನ ಕಳೆದಂತೆ ಬೆಂಗಳೂರಿನ ನಮ್ಮ ಮೆಟ್ರೋ ಈಗ ಕೊರೊನಾ ಸೋಂಕಿನ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದೆ. ನಮ್ಮ ಮೆಟ್ರೋದ 80 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿದೆ.

ನಮ್ಮ ಮೆಟ್ರೋ ಆಪರೇಷನ್ ವಿಭಾಗದ 28 ಲೋಕೋ ಪೈಲಟ್ ಗಳಿಗೆ ಸೋಂಕು ದೃಢಪಟ್ಟಿದ್ದು, ಕೊರೊನಾ ಸೋಂಕಿತ ಸಿಬ್ಬಂದಿ ಪೈಕಿ ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೂ ಕೆಲವರು ಹೋಂ ಐಸೋಲೇಷನ್ ನಲ್ಲಿದ್ದಾರೆ.

ಹಸಿರು ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ

ಲಾಕ್ ಡೌನ್ ನಿಂದ ಬರೋಬ್ಬರಿ 5 ತಿಂಗಳ ಬಳಿಕ ಮೆಟ್ರೋ ಸಂಚಾರ ಆರಂಭವಾಗಿತ್ತು. ಮೆಟ್ರೋ ಸಂಚಾರ ಆರಂಭವಾಗಿ 1 ತಿಂಗಳು ಕಳೆದರೂ ಜನ ಮಾತ್ರ ಮೆಟ್ರೋದಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ.

ಒಂದು ತಿಂಗಳ ಅವಧಿಯಲ್ಲಿ ಮೆಟ್ರೋದಲ್ಲಿ 10 ಲಕ್ಷ ಮಂದಿ ಸಂಚರಿಸಿದ್ದಾರೆ. ಕೊರೊನಾ ವೈರಸ್ ಪೂರ್ವದಲ್ಲಿ ಎರಡು ದಿನಗಳಲ್ಲಿ 10 ಲಕ್ಷ ಮಂದಿ ಪ್ರಯಾಣಿಕರು ಸೇವೆಯನ್ನು ಬಳಸುತ್ತಿದ್ದರು. ಈ ಮಧ್ಯೆ ಮೆಟ್ರೋ ಸಿಬ್ಬಂದಿಗೂ ಕೊರೊನಾ ಸೋಂಕು ಹರಡುತ್ತಿರುವುದು ಪ್ರಯಾಣಿಕರ ಅತಂಕಕ್ಕೆ ಮತ್ತಷ್ಟು ಕಾರಣವಾಗಿದೆ.

ಕರ್ನಾಟಕದಲ್ಲಿ ಇಂದು 10913 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 9091 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಂದೇ ದಿನದಲ್ಲಿ 114 ಮಂದಿ ಸಾವನ್ನಪ್ಪಿದ್ದಾರೆ.561610 ಮಂದಿ ಇದುವರೆಗೆ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 118851 ಸಕ್ರಿಯ ಪ್ರಕರಣಗಳಿವೆ. 9789 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ.

   GT Devegowda : ರಾಜಕೀಯದಲ್ಲಿ ಯಾರೂ ಶತ್ರು ಅಲ್ಲಾ!! | Oneindia Kannada

   ಬೆಂಗಳೂರು ನಗರದಲ್ಲಿ ಇಂದು ಬರೋಬ್ಬರಿ 5009 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

   English summary
   As the day goes on, our metro in Bangalore is now turning into a hot spot for corona infections. Coronavirus will infect 80 of Namma Metro staff.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X