ಕೊರೊನಾ: ಪಾರ್ಕ್‌ಗೆ ಹೋಗುವವರಿಗೆ ಬಿಬಿಎಂಪಿ ಕಮಿಷನರ್ ಮನವಿ
ಬೆಂಗಳೂರು, ಮಾರ್ಚ್ 17: ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹರಡದಂತೆ ಈಗಾಗಲೇ ಬಿಬಿಎಂಪಿ ಅನೇಕ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಇದೀಗ ಬಿಬಿಎಂಪಿ ಕಮಿಷನರ್ ಬಿ ಹೆಚ್ ಅನಿಲ್ ಕುಮಾರ್ ಪಾರ್ಕ್‌ಗೆ ಹೋಗುವವರಿಗೆ ಕೆಲವು ಸೂಚನೆ ನೀಡಿದ್ದಾರೆ.
Recommended Video
ಬೆಂಗಳೂರಿನ ಪಾರ್ಕ್‌ಗಳಲ್ಲಿ ಬೆಳ್ಳಗೆ ಹಾಗೂ ಸಂಜೆ ಜನ ಹೆಚ್ಚು ಇರುತ್ತಾರೆ. ವಾಯುವಿಹಾರ ಮಾಡುವವರು, ವಾಕ್, ಜಾಗ್ ಮಾಡುವವರು, ವ್ಯಾಯಾಮ ಮಾಡುವವರು ಸಾಮಾನ್ಯವಾಗಿ ಪಾರ್ಕ್‌ಗೆ ತೆರಳುತ್ತಾರೆ. ಇದೀಗ ಅಂತಹವರು ಕೊರೊನಾ ವೈರಸ್ ಹರಡದಂತೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಹೀಗಾಗಿ, ಬಿಬಿಎಂಪಿ ಈ ಕೆಳಗಿನ ಕೆಲವು ಸೂಚನೆ ನೀಡಿದೆ.
1. ಜಿಮ್, ಆಟದ ಉಪಕರಣಗಳ ವ್ಯವಸ್ಥೆ ಹೀಗೆ ಕೆಲವೊಂದು ಸೌಲಭ್ಯಗಳು ಇಲ್ಲದೆ ಇದ್ದರೆ, ಆಗುವ ತೊಂದರೆಗಳು ಬಿಬಿಎಂಪಿ ಗಮನದಲ್ಲಿ ಇದೆ. ಆದರೆ, ಕೊರೊನಾ ವೈರಸ್ ತಡೆಗಟ್ಟಲು ತೆಗೆದುಕೊಂಡ ನಿಯಮಗಳನ್ನು ಒಬ್ಬ ನಾಗರಿಕರಾಗಿ ನೀವು ಮೆಚ್ಚುವಂತದಾಗಿದೆ.

2. ಪಾರ್ಕ್‌ನ ಒಳಗಿನ ಜಿಮ್ ಉಪಕರಣಗಳ ಬಳಕೆಯನ್ನು ನಿಷೇಧ ಮಾಡಲಾಗಿದೆ. ಆ ಉಪಕರಣಗಳನ್ನು ಬಳಸುವ ಮೂಲಕ, ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿದೆ.
3. ಪಾರ್ಕ್‌ನಲ್ಲಿ ಹೆಚ್ಚು ಜನ ಸೇರುವುದರಿಂದ ಕೊರೊನಾ ತಡೆಗೆ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳು ಉಪಯೋಗ ಆಗದೆ ಇರಬಹುದು.
4. ಒಬ್ಬ ವ್ಯಕ್ತಿ ಮತ್ತು ಮತ್ತೊಬ್ಬ ವ್ಯಕ್ತಿ ನಡುವೆ ಅಂತರ ಇರಲಿ
5. ಮನೆಯಲ್ಲಿಯೇ ಯೋಗ, ವ್ಯಾಯಾಮ ಮಾಡುವ ಮೂಲಕ ಫಿಟ್ ಆಗಿರಿ
ಬಿಬಿಎಂಪಿ ಈ ನಿಯಮಗಳನ್ನು ನೀಡುವ ಮೂಲಕ ಕೊರೊನಾದಿಂದ ದೂರ ಇರಲು ಕ್ರಮಗಳನ್ನು ಕೈಗೊಂಡಿದೆ. ಈ ನಿಯಮಗಳನ್ನು ಜನರು ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications