• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಎರಡನೇ ಅಲೆ: ರಾಜಧಾನಿ ಬೆಂಗಳೂರಿನಿಂದ ಶುಭಸುದ್ದಿ

|

ಬೆಂಗಳೂರು, ಮೇ 10: ಕೊರೊನಾ ವೈರಸ್‌ನಿಂದ ಅಲ್ಲಿ ಇಷ್ಟು ಜನ ಸತ್ತರು, ಸ್ಮಶಾನ ಹೌಸ್ ಫುಲ್ ಆಗಿ ಅಂಬುಲೆನ್ಸ್‌ಗಳ ಕ್ಯೂ, ರೋಗಿಗಳ ಪರದಾಟ.. ಹೀಗೆ ಪ್ರತಿದಿನ ನೆಗೆಟಿವ್ ಸುದ್ದಿ ಓದುತ್ತಿರುವವರಿಗೆ ಹೀಗೊಂದು ಗುಡ್ ನ್ಯೂಸ್.

ಹೌದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೊಸ ಸೋಂಕಿತರ ಸಂಖ್ಯೆ ಕಳೆದ ಒಂದು ವಾರದಿಂದ ಇಂದಿನವರೆಗೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ನೆಮ್ಮದಿಯ ವಿಚಾರ. ಬೆಂಗಳೂರಿನ ಹೊಸ ಸೋಂಕಿತರ ಸಂಖ್ಯೆಯನ್ನು ನೋಡಿ ಕೇಂದ್ರ ಸರಕಾರವೂ ದಿಗಿಲುಗೊಂಡಿತ್ತು.

ಕೊರೊನಾ ಅಲೆಯ ಮಧ್ಯೆ ಗಮನಿಸಬೇಕಾದ ಪ್ರಮುಖ ಸಮಾಧಾನಕರ ಅಂಶಕೊರೊನಾ ಅಲೆಯ ಮಧ್ಯೆ ಗಮನಿಸಬೇಕಾದ ಪ್ರಮುಖ ಸಮಾಧಾನಕರ ಅಂಶ

ಇದು ಜನತಾ ಕರ್ಫ್ಯೂ ಫಲವೋ ಅಥವಾ ಜನರಿಗೇ ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು, ಸರಕಾರವನ್ನು ನಂಬಿದರೆ ಆಗುವುದಿಲ್ಲ ಎನ್ನುವ ಜ್ಞಾನೋದಯವಾಗಿದೆಯೋ ಗೊತ್ತಿಲ್ಲ. ಆದರೆ, ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶದ ಪ್ರಕಾರ ಹೊಸ ಸೋಂಕಿತರ ಸಂಖ್ಯೆ ಕಮ್ಮಿಯಾಗುತ್ತಿದೆ.

 ರಾಜಗುರು ನುಡಿದ ಕೊರೊನಾ ಭವಿಷ್ಯ: ಕೊಟ್ಟ ಎಚ್ಚರಿಕೆ ಫಲಿಸಲಿಲ್ಲ, ಮೋದಿ ಇತ್ತ ಬರಲಿಲ್ಲ ರಾಜಗುರು ನುಡಿದ ಕೊರೊನಾ ಭವಿಷ್ಯ: ಕೊಟ್ಟ ಎಚ್ಚರಿಕೆ ಫಲಿಸಲಿಲ್ಲ, ಮೋದಿ ಇತ್ತ ಬರಲಿಲ್ಲ

ಇನ್ನು, ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ, ಆದರೆ, ಮೃತ ಪಡುತ್ತಿರುವವರ ಸಂಖ್ಯೆಯಲ್ಲಿ ಇಳಿತ ಕಂಡು ಬರದೇ ಇರುವುದು ನೋವಿನ ವಿಚಾರ. ಕಳೆದ ಒಂದು ವಾರದ ಅಂಕಿ ಅಂಶವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

 ಮೃತ ಪಡುತ್ತಿರುವವರ ಸಂಖ್ಯೆಯಲ್ಲಿ ಇಳಿತ ಕಂಡು ಬರುತ್ತಿಲ್ಲ

ಮೃತ ಪಡುತ್ತಿರುವವರ ಸಂಖ್ಯೆಯಲ್ಲಿ ಇಳಿತ ಕಂಡು ಬರುತ್ತಿಲ್ಲ

ದಿನಾಂಕ: ಮೇ 4
ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ: 13,946
ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ: 5,31,716
ಇಂದಿನ ಹೊಸ ಕೇಸ್: 20,870
ಒಟ್ಟು ಸಕ್ರಿಯ ಪ್ರಕರಣ: 3,01,712

ದಿನಾಂಕ: ಮೇ 5
ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ: 11,343
ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ: 5,43,059
ಇಂದಿನ ಹೊಸ ಕೇಸ್: 23,106
ಒಟ್ಟು ಸಕ್ರಿಯ ಪ್ರಕರಣ: 3,13,314

 ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶದ ಪ್ರಕಾರ ಹೊಸ ಸೋಂಕಿತರ ಸಂಖ್ಯೆ ಕಮ್ಮಿ

ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶದ ಪ್ರಕಾರ ಹೊಸ ಸೋಂಕಿತರ ಸಂಖ್ಯೆ ಕಮ್ಮಿ

ದಿನಾಂಕ: ಮೇ 6
ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ: 4,149
ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ: 5,47,208
ಇಂದಿನ ಹೊಸ ಕೇಸ್: 23,706
ಒಟ್ಟು ಸಕ್ರಿಯ ಪ್ರಕರಣ: 3,32,732

ದಿನಾಂಕ: ಮೇ 7
ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ: 11,784
ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ: 5,58,992
ಇಂದಿನ ಹೊಸ ಕೇಸ್: 21,376
ಒಟ್ಟು ಸಕ್ರಿಯ ಪ್ರಕರಣ: 3,41,978

 ಕೊರೊನಾ ರುದ್ರ ತಾಂಡವ: ರಾಜಧಾನಿ ಬೆಂಗಳೂರಿನಿಂದ ಒಂದು ಶುಭಸುದ್ದಿ

ಕೊರೊನಾ ರುದ್ರ ತಾಂಡವ: ರಾಜಧಾನಿ ಬೆಂಗಳೂರಿನಿಂದ ಒಂದು ಶುಭಸುದ್ದಿ

ದಿನಾಂಕ: ಮೇ 8
ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ: 18,473
ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ: 5,77,465
ಇಂದಿನ ಹೊಸ ಕೇಸ್: 21,534
ಒಟ್ಟು ಸಕ್ರಿಯ ಪ್ರಕರಣ: 3,44,754

ದಿನಾಂಕ: ಮೇ 9
ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ: 15,000
ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ: 5,92,465
ಇಂದಿನ ಹೊಸ ಕೇಸ್: 20,897
ಒಟ್ಟು ಸಕ್ರಿಯ ಪ್ರಕರಣ: 3,50,370

  BS Yediyurappa ಅವರು ರಾಜ್ಯಕ್ಕೆ ಸಿಹಿ ಸುದ್ದಿ ಕೊಟ್ರಾ? | Oneindia Kannada
   ಲಾಕ್ ಡೌನ್ ಮುಗಿಯುವ ವೇಳೆಗೆ, ಕೊರೊನಾ ಚೈನ್ ಬ್ರೇಕ್ ಆಗುವ ಸಾಧ್ಯತೆ

  ಲಾಕ್ ಡೌನ್ ಮುಗಿಯುವ ವೇಳೆಗೆ, ಕೊರೊನಾ ಚೈನ್ ಬ್ರೇಕ್ ಆಗುವ ಸಾಧ್ಯತೆ

  ದಿನಾಂಕ: ಮೇ 10
  ಇಂದು ಡಿಸ್ಚಾರ್ಜ್ ಆದವರ ಸಂಖ್ಯೆ: 14,289
  ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ: 6,06,754
  ಇಂದಿನ ಹೊಸ ಕೇಸ್: 16,747
  ಒಟ್ಟು ಸಕ್ರಿಯ ಪ್ರಕರಣ: 3,52,454

  ಕಳೆದ ಸುಮಾರು ಹತ್ತು ದಿನಗಳಿಂದ ಜಾರಿಯಲ್ಲಿರುವ ಜನತಾ ಕರ್ಪ್ಯೂವಿನ ಡೇಟಾಗಳು ಈಗ ಬರಲಾರಂಭಿಸಿದೆಯೋ ಎನ್ನುವುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಮೇ ಹತ್ತರಿಂದ ಲಾಕ್ ಡೌನ್ ಕೂಡಾ ಜಾರಿಯಲ್ಲಿದೆ. ಒಂದು ವೇಳೆ, ಇದು ಹೌದಾದಲ್ಲಿ, ಎರಡು ವಾರದ ಲಾಕ್ ಡೌನ್ ಮುಗಿಯುವ ವೇಳೆಗೆ, ಕೊರೊನಾ ಚೈನ್ ಬ್ರೇಕ್ ಆಗುವ ಸಾಧ್ಯತೆಯಿದೆ.

  English summary
  Corona Positive News From Bengaluru: New Cases reducing From Last One Week.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X