Panipuri Kiosk Viral: ಈ ಅಂಗಡಿಯಲ್ಲಿದೆ ಪಾನಿಪುರಿ ವಿತರಣೆಗೆ 'ಯೂನಿಕ್ ಮಷಿನ್': ಗ್ರಾಹಕರು ಫಿದಾ
ಬೆಂಗಳೂರು, ಜುಲೈ 16: ಸಿಲಿಕಾನ್ ಸಿಟಿ ಬೆಂಗಳೂರು ಒಂದಲ್ಲಾ ಒಂದು ವಿಷಯಗಳಿಗೆ ಸುದ್ದಿಯಲ್ಲಿರುತ್ತದೆ. ಇದೀಗ ಹೆಣ್ಣುಮಕ್ಕಳು, ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಪಾನಿಪುರಿ ವಿಚಾರವಾಗಿ ಸುದ್ದಿಯಲ್ಲಿದೆ.
ರಸ್ತೆ ಬದಿಗಳಲ್ಲಿ, ದೊಡ್ಡ ಹೋಟೆಲ್‌ಗಳಲ್ಲಿ, ಫುಡ್ ಸ್ಟ್ರೀಟ್‌ನಲ್ಲಿ ನೀವು ಪಾನಿಪುರಿ ತಿಂದಿರುತ್ತೀರಾ. ಆದರೆ ನಗರದ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಪಾನಿಪುರಿಗಾಗಿ 'ಸ್ವಯಂಚಾಲಿತ ಪಾನಿ ಪುರಿ ವೆಂಡಿಂಗ್ ಮೆಷಿನ್' (Panipuri Kiosk) ಇಡಲಾಗಿದೆ. ಈ ಯಂತ್ರ ನಿಮ್ಮ ಪ್ಲೇಟಿನ ಪೂರಿಗೆ ಪಾನಿ ಸುರಿಯುತ್ತದೆ.

ಈ ಪಾನಿಪುರಿ ಕಿಯೋಸ್ಕ್ ಮೂಲಕ ಬೆಂಗಳೂರಿನ ಎಚ್‌ಎಸ್ಆರ್ ಬಡಾವಣೆ ನಮ್ಮೆಲ್ಲರಿಗಿಂತ ಭವಿಷ್ಯದ 25 ವರ್ಷ ಮುಂದಿದೆಯೇ ಎಂದು ನೆಟ್ಟಿಗರು ಮಾತನಾಡುತ್ತಿದ್ದಾರೆ. ಈ ಕುರಿತು ಪೋಟೋ ಪೋಸ್ಟ್ ಅನ್ನು 'ಪೀಕ್ ಬೆಂಗಳೂರು' ಟ್ವಿಟ್ಟರ್ ಹ್ಯಾಂಡ್ಲ ಹಂಚಿಕೊಂಡಿದೆ.
ಪಾನಿಪುರಿ ಕಿಯೋಸ್ಕ್‌ಗೆ ಸೆನ್ಸಾರ್ ಬಳಕೆ
ಈ ರೀತಿಯ ಕಿಯೋಸ್ಕ್‌ಗಳು ಮತ್ತು ವೆಂಡಿಂಗ್ ಮೆಷಿನ್‌ಗಳು ಬೆಂಗಳೂರಿನಲ್ಲಿ ಒಂದೆರಡು ಕಂಡು ಬರುಬಹುದು, ಈ ಅಂಗಡಿಯ 'ಬುದ್ಧಿವಂತ' ಹೆಸರು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಪಾನಿಪುರಿಗೆ ಪಾನಿ ಹಾಕಲು ಸೆನ್ಸಾರ್ ಬಳಕೆ ಮಾಡಲಾಗಿದೆ. ಈ ವಿಶಿಷ್ಟ ಪಾನಿಪುರಿ ಕಿಯೋಸ್ಕ ಎಚ್‌ಎಸ್‌ಆರ್ ಲೇಔಟ್‌ನಲ್ಲಿದೆ, ನೀವು ಸಾಧ್ಯವಾದರೆ ಬೇಟಿ ನೀಡಿ ಪರಿಶೀಲಿಸಬಹುದು.
ಈ ಕಿಯೋಸ್ಕ್ ಹೇಗೆ ಕೆಲಸ ಮಾಡುತ್ತದೆ
ಇಲ್ಲಿ ಸ್ಟಾಲ್ ಸಿಬ್ಬಂದಿಯು ಗುಣಮಟ್ಟದ ಪದಾರ್ಥಗಳೊಂದಿಗೆ ಉತ್ತಮ ಪೂರಿ ತಯಾರಿಸುತ್ತಾರೆ. ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಎಂದಿನಂತೆ ಸ್ಟಾಲ್ ಬರುವ ಗ್ರಾಹಕರಿಗೆ ಈ ಪೂರಿ ಹಾಕಿ ಪ್ಲೇಟ್ ನೀಡಲಾಗುತ್ತದೆ. ಗ್ರಾಹಕರಿಗೆ ಸಹಿ ಮತ್ತು ಮಸಾಲಾ ಖಾರದ ಪಾನಿಗಾಗಿ ಕಿಯೋಸ್ಕ ಮುಂದೆ ಕೈಯೊಡ್ಡಿದರೆ ಸಾಕು, ಪೂರಿಗೆ ಪಾನಿ ಬೀಳುತ್ತದೆ.
ಕಿಯೋಸ್ಕ್‌ನ ಯಂತ್ರದಲ್ಲಿ ಅಳವಡಿಸಿರುವ ಸೆನ್ಸಾರ್ ಇದು ಪೈಪ್ ಬಳಿ ಪೂರಿ ಒಯ್ದರೆ ಅದನ್ನು ಗುರುತಿಸಿ ಪಾನಿ ಸುರಿಯುತ್ತದೆ. ಎಷ್ಟು ಬೇಕೋ ಅಷ್ಟು ನೀರನ್ನು ಸುರಿಯುವ ಮೂಲಕ ಗ್ರಾಹಕರ ಮನ ಗೆದ್ದಿದೆ.
HSR is living in 2050 @peakbengaluru pic.twitter.com/XzYpxoGWrX
— Benedict (@benedictgershom) July 14, 2024
ನೆಟ್ಟಿಗರು ಹೇಳಿದ್ದೇನು?
ಈ ಪೋಸ್ಟ್ ಅನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದೆಲ್ಲ ನೋಡಿದರೆ ಎಚ್‌ಎಸ್‌ಆರ್ ಬಡಾವಣೆಗೆ 2050ರಲ್ಲಿ ವಾಸಿಸುತ್ತದೆ ಎಂದನಿಸುತ್ತದೆ ಎಂದು ನೆಟ್ಟಿಗರು ಅಭಿಪ್ರಾಯ ಹೊರ ಹಾಕಿದ್ದಾರೆ. ಇಂತದ್ದೊಂದು ಕಿಯೋಸ್ಕ್ ಕೆಲವು ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಪ್ರಾರಂಭವಾಗಿತ್ತು ಎಂದು ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ತಿಳಿಸಿದ್ದಾರೆ.
"ಪೀಕ್ ಬೆಂಗಳೂರು'' ಇದು ಕೆಲವು ಬೆಂಗಳೂರಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತದೆ ಅಂತಲೂ ಕಾಮೆಂಟ್ ಮಾಡಿದ್ದಾರೆ. ಅನೇಕರು ಫೋಟೋ ಪೋಸ್ಟ್ ಅನ್ನು ರೀಪೋಸ್ಟ್ ಮಾಡಿಕೊಂಡಿದ್ದಾರೆ. ವ್ಯಕ್ತಿಗತವಾಗಿ ಪಾನಿಪುರಿ ಕೈಯಿಂದ ನೀಡುವ ಬದಲಾಗಿ, ದೇಶಕ್ಕೆ ಇಂತಹ ಕಿಯೋಸ್ಕ್‌ಗಳ ಅಗತ್ಯವಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಕಿಯೋಸ್ಕ ವಿಡಿಯೋ ವೈರಲ್
ಇನ್ನೂ ಇನ್‌ಸ್ಟಾಗ್ರಾಮ್‌ನಲ್ಲಿ ಇದರ ಕುರಿತು ವಿಡಿಯೋ ವೈರಲ್ ಆಗುತ್ತಿದೆ. ಮಕ್ಕಳು ಪಾನಿಪುರಿ ಹಿಡಿದು ಕಿಯೋಸ್ಕ ಪೈಪ್‌ನಿಂದ ಪಾನಿ ತುಂಬಿಕೊಳ್ಳವದನ್ನು ಈ ವಿಡಿಯೋ ತೋರಿಸುತ್ತಿದೆ. ಪಾನಿಪುರಿ ಪ್ರಿಯರಿಗಂತೂ ಈ ಬಡಾವಣೆಯ ಸ್ಟಾರ್, ಈ ಪಾನಿಪುರಿ ಕಿಯೋಸ್ಕ್ ಹೆಚ್ಚು ಇಷ್ಟವಾಗುತ್ತದೆ.












Click it and Unblock the Notifications