ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಪರಮೇಶ್ವರ್
ಬೆಂಗಳೂರು, ಡಿಸೆಂಬರ್ 14 : ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ ಆದರೆ ಮತ ಯಂತ್ರಗಳ ದುರುಪಯೋಗ ಸಾದ್ಯತೆ ಹೆಚ್ಚಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಗುಜರಾತ್ ಎಲ್ಲ ಚುನಾವಣೆಯಂತಲ್ಲ. ದೇಶದ ರಾಜಕಾರಣ ನಿರ್ಧರಿಸುವ ಚುನಾವಣೆ ಪ್ರಧಾನಿ ಮೋದಿಯವರ ರಾಜ್ಯದ ಚುನಾವಣೆ ಇದರಿಂದ ಸಾಕಷ್ಟು ಕುತೂಹಲವಿದೆ.

ಪ್ರಧಾನಿ ಕೈಗೊಂಡ ನಿರ್ಧಾರ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ನೋಟ್ ಬ್ಯಾನ್,ಜಿಎಸ್ ಟಿ ತೀರ್ಮಾನ ಪರಿಣಾಮ ಬರಲಿದೆ. ಆದರೆ ಪಟೇಲ್ ಸಮುದಾಯ,ವ್ಯಾಪಾರಿಗಳ ಬೆಂಬಲ ನಮಗಿದೆ, ಈ ಭಾರಿ ಅಧಿಕಾರ ಹಿಡಿಯುವ ವಿಶ್ವಾಸವಿದೆ ಎಂದರು.
ಇವಿಎಂ ಮತಗಳ ದುರ್ಬಳಕೆ ವಿಚಾರ ರ ಕುರಿತು ಮಾತನಾಡಿ ಉತ್ತರ ಪ್ರದೇಶದಲ್ಲೂ ಮತ ಯಂತ್ರಗಳ ದುರ್ಬಳಕೆ ಗೊತ್ತಾಗಿದೆ. ಗುಜರಾತ್ ಚುನಾವಣೆಯಲ್ಲೂ ಈ ರೀತಿ ಆಗುವ ಸಾದ್ಯತೆ ಇದೆ. ಇಲ್ಲೂ ಅದೇ ರೀತಿಯಾದರೆ ಮತಯಂತ್ರಗಳ ದುರಪಯೋಗದ ಬಗ್ಗೆ ಪಕ್ಷದಿಂದ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹೇಳಿದರು.
ಗುಜರಾತಿನಲ್ಲಿ ಪ್ರಧಾನಿ ಮೋದಿ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ. ಆದ್ರೆ, ಧರ್ಮ,ದೇವರು ಇಂತಹ ವಿಚಾರಗಳ ಮಾತ್ರ ಮಾತನಾಡುತ್ತಿದ್ದಾರೆ. ಟಿಕೆಟ್ ಹಂಚಿಕೆ ಹಾಗೂ ಸಂಭಾವ್ಯರ ಪಟ್ಟಿ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಅಧಿಕೃತವಲ್ಲ.
ನಮ್ಮದು ರಾಷ್ಟ್ರೀಯ ಪಕ್ಷ ಇಲ್ಲಿ ಚುನಾವಣಾ ಸಮಿತಿ ಇರುತ್ತೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವೀಕ್ಷಕರು ಸಂಭಾವ್ಯರ ಪಟ್ಟಿ ನೀಡುತ್ತಾರೆ.ಅದೆಲ್ಲರ ಬಗ್ಗೆ ಚರ್ಚಿಸಿ ಪಕ್ಷ ತೀರ್ಮಾನಿಸಲಿದೆ ಎಂದರು.












Click it and Unblock the Notifications