ಬಿಜೆಪಿಯಲ್ಲಿ ಮತ ಬರುವ ಮುಖಗಳಿಲ್ಲ: ಹೀಗಾಗೇ ಚಿತ್ರನಟರ ಮುಂದೆ ಬಿಜೆಪಿ ಶರಣಾಗಿದೆ: ಕಾಂಗ್ರೆಸ್ ಹೀಗೆ ಹೇಳಿದ್ದೇಕೆ?
ಬೆಂಗಳೂರು, ಏಪ್ರಿಲ್ 05: ಬಿಜೆಪಿಗೆ ಚಿತ್ರನಟರು ಸೇರುತ್ತಾರೆ ಎಂಬ ಮಾತುಗಳ ಚರ್ಚೆ ಜೋರಾದ ಬೆನ್ನಲ್ಲೆ ನಟರು ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇತ್ತ ಕರ್ನಾಟಕ ಕಾಂಗ್ರೆಸ್ ಮಾತ್ರ ಅದೇ ವಿಚಾರವನ್ನು ಇಟ್ಟುಕೊಂಡು ರಾಜ್ಯ ಬಿಜೆಪಿಗೆ ಲೇವಡಿ ಮಾಡಿದೆ.
ಬುಧವಾರ ಬಿಜೆಪಿ ವಿರುದ್ಧ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಬಿಜೆಪಿ ಪಕ್ಷದಲ್ಲಿ ರಾಜ್ಯದಲ್ಲಿ ನಾಯಕರೇ ಇಲ್ಲ ಎಂದು ಕಾಂಗ್ರೆಸ್ ಜರಿದಿದೆ.
'ಪ್ರಧಾನಮಂತ್ರಿ ನರೇಂದ್ರ ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ. ನನ್ನ (ಸಿಎಂ ಬಸವರಾಜ ಬೊಮ್ಮಾಯಿ) ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡ ಮುಖ್ಯಮಂತ್ರಿಗಳು ಚಿತ್ರನಟರ ಮುಂದೆ ಶರಣಾಗಿದ್ದಾರೆ' ಎಂದು ಕಾಂಗ್ರೆಸ್ ಟೀಕಿಸಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ 2023 ಸಮೀಪಸುತ್ತಿದೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ನಟ್ ಚಿತ್ರ ಕಿಚ್ಚ ಸುದೀತ್ ಬಿಜೆಪಿ ಸೇರುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಅವರ ಜೊತೆಗೆ ನಟ ದರ್ಶನ್ ಅವರು ಸಹ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ.
ಹಲವರು ಇದೆಲ್ಲವು ರಾಜಕೀಯ ಗಿಮಿಕ್ ಎಂದು ಸಹ ಹೇಳುತ್ತಿದ್ದರು. ಈ ಕುರಿತು ವಿಚಾರಗಳು, ಫೋಟೊಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ, ನನ್ನ ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡ @BSBommai ಅವರು ಚಿತ್ರನಟರ ಮುಂದೆ ಶರಣಾಗಿದ್ದಾರೆ.
— Karnataka Congress (@INCKarnataka) April 5, 2023
ಬಿಜೆಪಿಗೆ ತೋರಿಸಲು ರಾಜಕೀಯ ನಾಯಕರಿಲ್ಲದ ಕಾರಣ ಸಿನೆಮಾ ನಾಯಕರ ಮೊರೆ ಹೋಗಿದೆ!
BSY ಮುಖವನ್ನು ಮರೆಮಾಚಲು ಮುಂದಾದ ಬಿಜೆಪಿಗೆ ಈಗ ವರ್ಚಸ್ವಿ ನಾಯಕರಿಲ್ಲದಿರುವುದು ದುರಂತ!
ಬಿಜೆಪಿಯಲ್ಲಿ ವರ್ಚಸ್ವಿ ನಾಯಕರು ಇಲ್ಲ
ಈ ಕುರಿತು ಬಿಜೆಪಿ ವಿರುದ್ಧ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ಪಕ್ಷಕ್ಕೆ ತೋರಿಸಲು ರಾಜಕೀಯ ನಾಯಕರಿಲ್ಲದ ಕಾರಣ ಸಿನೆಮಾ ನಾಯಕರ ಮೊರೆ ಹೋಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮರೆಮಾಚಲು ಬಿಜೆಪಿಗೆ ಮುಂದಾಗಿದೆ. ಹೀಗಾಗಿ ಈಗ ಬಿಜೆಪಿಗೆ ವರ್ಚಸ್ವಿ ನಾಯಕರು ಇಲ್ಲದಾಗಿದೆ, ಇದೊಂದು ದುರಂತ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಈ ನಟರು ಬಿಜೆಪಿ ಸೇರ್ಪಡೆ
ಸಾಕಷ್ಟು ಅಭಿಮಾನಿಗಳು ಹೊಂದಿರುವ ಸ್ಟಾರ್ ನಟರಾದ ಕಿಚ್ಚ ಸುದೀಪ್ ಮತ್ತು ನಟ ದರ್ಶನ್ ಅವರು ಬಿಜೆಪಿ ಪಕ್ಷ ಸೇರ್ಪಡೆ ಆಗುತ್ತಾರೆ. ಈ ಮೂಲಕ ಡಬಲ್ ಇಂಜಿನ್ ಬಿಜೆಪಿ ಸರ್ಕಾರಕ್ಕೆ ಜಂಟಿ ನಟರ ಬಲ ಬರಲಿದೆ ಎಂದೆಲ್ಲ ಹೇಳಲಾಗಿತ್ತು.
ತಮ್ಮ ನಟರು ಆಡಳಿತಾರೂಢ ಬಿಜೆಪಿ ಪಕ್ಷ ಸೇರುತ್ತಾರೆಯೇ ಎಂದು ಅವರವ ಅಭಿಮಾನಿಗಳು ಖಾತರತೆಯಿಂದ ಕಾಯುತ್ತಿದ್ದಾರೆ. ಹಿಂದಿನಿಂದಲೂ ಈ ಇಬ್ಬರು ನಟರು ಪ್ರಮುಖ ರಾಜಕೀಯ ನಾಯಕ ಜೊತೆ ಸ್ನೇಹದಿಂದ ಇದ್ದವರು. ಎಲ್ಲ ಪಕ್ಷಗಳಲ್ಲಿ ಅವರಿಗೆ ಸ್ನೇಹಿತರು ಇದ್ದಾರೆ. ಆದರೆ ಪಕ್ಷ ಸೇರುವ ಬಗ್ಗೆ ಅವರು ಮಾತನಾಡಿರಲಿಲ್ಲ.

ಇದೀಗ ಬುಧವಾರ ಮಧ್ಯಾಹ್ನ ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಖುದ್ದು ನಟ ಸುದೀಪ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಈ ವೇಳೆ ಮಾತನಾಡಿದ ಕಿಚ್ಚ ಸುದೀಪ್, ನಾನು ಯಾವ ಪಕ್ಷದ ಪರವಾಗಿಯು ಇಲ್ಲ, ನಾನು ಯಾವ ಪಕ್ಷವನ್ನು ಸೇರುತ್ತಿಲ್ಲ. ನನಗೆ ಎಲ್ಲ ಪಕ್ಷಗಳಲ್ಲಿ ಸಾಕಷ್ಟು ಜನ ಗೆಳೆಯಲಿದ್ದಾರೆ. ನನ್ನ ಮ್ಯಾನೇಜರ್ ಜಾಕ್ ಮಂಜು ಅವರಿಗೆ ನಾನು ಟಿಕೆಟ್ ಕೇಳುವಷ್ಟು ದೊಡ್ಡವನು ಅಲ್ಲ ಎನ್ನುವ ಮೂಲಕ ಪಕ್ಷ ಸೇರ್ಪಡೆ ವದಂತಿಗಳಿಗೆ ತೆರೆ ಎಳೆದಿದ್ದಾರೆ. ನಾನು ಯಾವ ಪಕ್ಷದ ಪರವಾಗಿಯು ಇಲ್ಲ. ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪರ ಎಂದು ತಿಳಿಸಿದ್ದಾರೆ.
ನಟರ ಪಕ್ಷ ಸೇರ್ಪಡೆಗೆ HDK ಏನಂದ್ರು?
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ಈ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯು ಸಿನಿಮಾ ಸ್ಟಾರ್ಗಳನ್ನು ಕರೆಸಿ ಪ್ರಚಾರ ಮಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ತಮಗೆ ಗೆಲುವು ಕಷ್ಟ ಎಂಬ ಸತ್ಯ ಗೊತ್ತಾದಂತಿದೆ. ಹೀಗಾಗಿಯೇ ನಟರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಮುಂದಾಗಿದೆ. ಜೆಡಿಎಸ್‌ಗೆ ನಮ್ಮ ಕಾರ್ಯಕರ್ತರೇ ನನ್ನ ಜನರೇ ಸ್ಟಾರ್ ಪ್ರಚಾರಕರು. ಸಿನಿಮಾ ನಟರ ಬಗ್ಗೆ ನಾನು ಲಘುವಾಗಿ ಮಾತನಾಡಲು ಇಷ್ಟಪಡಲ್ಲ ಎಂದು ತಿಳಿಸಿದ್ದಾರೆ.
sudeep cm press meet 1 dp.jpg












Click it and Unblock the Notifications