ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲರ್ಟ್!
ಲೋಕಸಭೆ ಚುನಾವಣೆ 2024ರ ಮತದಾನದ ದಿನಾಂಕ ಘೋಷಣೆ ಆಗಿದೆ. ಮತ್ತೊಂದು ಕಡೆ ಬಿಜೆಪಿ ಪಕ್ಷದ ಕೇಂದ್ರ ನಾಯಕರು ಗೆದ್ದೇ ಗೆಲ್ಲಬೇಕು ಅಂತಾ ತೀರ್ಮಾನ ಮಾಡಿದ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಕೂಡ ಸೇರಿದೆ. ಇದೇ ಕಾರಣಕ್ಕೆ ಬಿಜೆಪಿ & ಜೆಡಿಎಸ್ ಪಕ್ಷದಿಂದ ಮೈತ್ರಿ ಅಭ್ಯರ್ಥಿಯಾಗಿ ಇದೀಗ ಡಾ. ಮಂಜುನಾಥ್ ಅವರು ನಿಂತಿದ್ದಾರೆ. ಹಾಗೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ನಿಂತಿದ್ದಾರೆ. ಹೀಗಿದ್ದಾಗ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಇದೇ ಕಾರಣಕ್ಕೆ ಬಿಜೆಪಿಯ ನಾಯಕರು ಇದೀಗ ದಳಪತಿಗಳ ಬೆಂಬಲ ಪಡೆದು, ಹಾಲಿ ಸಂಸದ ಡಿ.ಕೆ. ಸುರೇಶ್ ಅವರ ಸೋಲಿಗೆ ರಣತಂತ್ರ ಹೆಣೆಯುತ್ತಿದ್ದಾರೆ. ಆದ್ರೆ ಇನ್ನೊಂದು ಕಡೆ ಇದೇ ಸಮಯವನ್ನು ತಮ್ಮ ಬಲ ಪ್ರದರ್ಶನಕ್ಕೆ ಕಾಂಗ್ರೆಸ್ ಬಳಸಿಕೊಳ್ಳಲು ಸಜ್ಜಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ ಈಗ ಗ್ರೌಂಡ್‌ವರ್ಕ್ ಶುರು ಮಾಡಿದೆ. ತಳಮಟ್ಟದ ನಾಯಕರಿಂದ ಹಿಡಿದು, ಜಿಲ್ಲಾ ಮತ್ತು ತಾಲೂಕು ಮಟ್ಟದ ನಾಯಕರನ್ನು ಕಾಂಗ್ರೆಸ್ ನಾಯಕರು ಈಗ ಸಂಪರ್ಕಿಸುತ್ತಿದ್ದಾರೆ. ಇದೇ ಸಮಯದಲ್ಲಿ ಸ್ಥಳೀಯ ಶಾಸಕರು ಕೂಡ ಒಗ್ಗಟ್ಟಿನಿಂದ ಅಖಾಡಕ್ಕೆ ಇಳಿದಿದ್ದಾರೆ.

ಸೋಲು & ಗೆಲುವಿನ ಲೆಕ್ಕಾಚಾರ!
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹುಟ್ಟಿ ಬೆಳೆದಿರುವ ಡಿ.ಕೆ. ಸುರೇಶ್ ಅವರನ್ನ ಇದೀಗ ಅವರದ್ದೇ ಜಾಗದಲ್ಲಿ ಸೋಲಿಸುವುದು ಬಿಜೆಪಿ & ಜೆಡಿಎಸ್ ನಾಯಕರಿಗೆ ಕಷ್ಟ. ಹೀಗಾಗಿಯೆ ಬೇರೆ ಬೇರೆ ರೀತಿಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ ಮೈತ್ರಿ ಪಕ್ಷಗಳ ನಾಯಕರು. ಆದರೆ, ಹೀಗೆ ಮೈತ್ರಿ ನಾಯಕರ ತಂತ್ರಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ಕೂಡ ದೊಡ್ಡ ಮಟ್ಟದ ತಂತ್ರ ರೂಪಿಸುತ್ತಿದೆ. ಅದರಲ್ಲೂ ಡಿ.ಕೆ. ಸುರೇಶ್ ಅವರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಳಮಟ್ಟದ ನಾಯಕರಿಂದ ಹಿಡಿದು, ದೊಡ್ಡ ದೊಡ್ಡ ನಾಯಕರ ತನಕ ಎಲ್ಲರೂ ಸಂಪರ್ಕಕ್ಕೆ ಸಿಗುತ್ತಾರೆ. ಹೀಗೆ ಇದನ್ನೇ ದಾಳವಾಗಿ ಬಳಸಲು ಕಾಂಗ್ರೆಸ್ ಈಗ ಮುಂದಾಗಿದೆ.
ಡಾ. ಮಂಜುನಾಥ್ ಗೆಲ್ಲುತ್ತಾರಾ?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಕುತೂಹಲದ ಕೇಂದ್ರವಾಗಿದೆ ಇಲ್ಲಿ ಇದೀಗ ಜಯ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಬೇಕು, ಅನ್ನೋದು ಕಾಂಗ್ರೆಸ್ & ಬಿಜೆಪಿ ನಾಯಕರ ಗುರಿ. ಸತತ 3 ಬಾರಿ ಗೆದ್ದಿರುವ ಡಿ.ಕೆ. ಸುರೇಶ್ ಅವರು ಮತ್ತೆ ಬೆಂಗಳೂರು ಗ್ರಾಮಾಂತ ಕ್ಷೇತ್ರದಿಂದ ಗೆದ್ದು ಬೀಗಿದರೆ 4ನೇ ಬಾರಿಗೆ ಗೆದ್ದಂತೆ ಆಗುತ್ತದೆ. ಇದೇ ಸಮಯದಲ್ಲಿ ಡಾ. ಮಂಜುನಾಥ್‌ರ ಎಂಟ್ರಿ ಈ ಗೆಲುವನ್ನು ಒಂದಷ್ಟು ಕಷ್ಟಗೊಳಿಸಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ಸಾಲು, ಸಾಲು ಸಭೆಗಳನ್ನ ನಡೆಸಿ ಡಿ.ಕೆ. ಸುರೇಶ್ ಅವರ ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ. ಆದ್ರೆ ಇದೇ ಸಮಯದಲ್ಲಿ ಜೆಡಿಎಸ್ & ಬಿಜೆಪಿ ನಾಯಕರು ಕೂಡ ಅಲರ್ಟ್ ಆಗಿದ್ದಾರೆ.
ಒಟ್ನಲ್ಲಿ ಇದೇಲ್ಲಾ ಏನೇ ಇರಲಿ, ಇದೀಗ ಚುನಾವಣೆ ದಿನಾಂಕವೂ ಘೋಷಣೆ ಆಗಿದೆ. ಇನ್ನು ಕೆಲವೇ ದಿನದಲ್ಲಿ ಕರ್ನಾಟಕದಲ್ಲಿ ಮತದಾನ ಕೂಡ ನಡೆಯಲಿದೆ. ಜೂನ್ 4ಕ್ಕೆ ಫಲಿತಾಂಶ ಕೂಡ ಬರಲಿದೆ. ಅದೇ ದಿನ ಮತದಾರ ಪ್ರಭು ಯಾರ ಪರ ಇದ್ದಾನೆ ಅನ್ನೋ ಸತ್ಯ ಕೂಡ ಇಡೀ ಜಗತ್ತಿಗೆ ಗೊತ್ತಾಗಲಿದೆ.












Click it and Unblock the Notifications