ಜೆಡಿಎಸ್‌ಗೆ 7 ಸೀಟು ಕೊಡಲು ಕಾಂಗ್ರೆಸ್ ತಂತ್ರ? ಸಿದ್ದು-ಗೌಡರ ಸಭೆ
Recommended Video

ಬೆಂಗಳೂರು,
ಫೆಬ್ರವರಿ 19: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ 12 ಸ್ಥಾನ ಕೇಳುತ್ತಿರಬಹುದು ಆದರೆ ಕಾಂಗ್ರೆಸ್ ಮಾತ್ರ ಏಳು ಸ್ಥಾನಕ್ಕೇ ಸೀಮಿತಗೊಳಿಸಲು ತಂತ್ರ ನಡೆಸಿದಂತಿದೆ. id="toptextpromo"> id='are-slot-1' class='oiad oi-axt oiadv'>ಲೋಕಸಭಾ
ಚುನಾವಣೆ ಸೀಟು ಹಂಚಿಕೆ ಕುರಿತು ಜೆಡಿಎಸ್ ನ ಅಧಿಕೃತ ನಿಲುವೇನು ಎಂಬುದನ್ನು ತಿಳಿದುಕೊಳ್ಳಲು ಈ ವಾರಾಂತ್ಯದೊಳಗೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸುವ ಎಲ್ಲಾ ಸಾಧ್ಯತೆಗಳಿವೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ. id='are-slot-2' class='oiad oi-axt oiadv'>
ಜೆಡಿಎಸ್‌ಗೆ 7 ಸ್ಥಾನ ಕೊಡಲು ಕಾಂಗ್ರೆಸ್ ಸಜ್ಜು?
ಲೋಕಸಭಾ ಚುನಾವಣೆಗೆ ಜೆಡಿಎಸ್ 12 ಸ್ಥಾನ ಕೇಳುತ್ತಿದ್ದರೂ ಕೂಡ ಕೇವಲ 7 ಸ್ಥಾನಗಳನ್ನು ಮಾತ್ರ ನೀಡಲು ಕಾಂಗ್ರೆಸ್ ನಿರ್ಧರಿಸಿದಂತೆ ಕಾಣುತ್ತಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಹಾಲಿ ಗೆದ್ದಿರುವ 10 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು, ಸೀಟು ಹಂಚಿಕೆ ಚರ್ಚೆ ಏನಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆಲ್ಲದ ಕ್ಷೇತ್ರಗಳಿಗೆ ಸೀಮಿತವಾಗಬೇಕು ಎಂಬುದು ಸಭೆಯಲ್ಲಿ ಮಾತನಾಡಿದ ಬಹುತೇಕ ನಾಯಕರ ಅಭಿಮತವಾಗಿದೆ.

ಜೆಡಿಎಸ್ ಗೆದ್ದಿರುವ ಕ್ಷೇತ್ರಗಳಾವುವು?
ಈ ಚರ್ಚೆಯ ಪ್ರಕಾರ ಜೆಡಿಎಸ್ ಹಾಲಿ ಗೆದ್ದಿರುವ ಕ್ಷೇತ್ರಗಳಾದ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳು ಜೆಡಿಎಸ್ ಪಾಲಿಗೆ ಇರುತ್ತವೆ. ಶಿವಮೊಗ್ಗ ಕ್ಷೇತ್ರವನ್ನು ಉಪ ಚುನಾವಣೆಯಲ್ಲಿ ಜೆಡಿಎಸ್ ಪಾಲಿಗೆ ಇರುತ್ತವೆ. ಶಿವಮೊಗ್ಗ ಕ್ಷೇತ್ರ ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಬೆಂಗಳೂರು ಉತ್ತರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟು ಕೊಡಲು ಕಾಂಗ್ರೆಸ್ ಮಾನಸಿಕವಾಗಿ ಸಜ್ಜಾಗಿದೆ. ಉಳಿದಂತೆ ಉತ್ತರ ಕರ್ನಾಟಕದಲ್ಲಿ ಎರಡು ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆದಿದೆ.

ಧಾರವಾಡ, ಬೆಳಗಾವಿ ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ
ಧಾರವಾಡ ಹಾಗೂ ಬೆಳಗಾವಿಯನ್ನು ಜೆಡಿಎಸ್‌ಗೆ ಬಿಟ್ಟುಕೊಡಬಹುದು ಎಂಬುದು ಕಾಂಗ್ರೆಸ್ ನಿಲುವು ಎನ್ನಲಾಗಿದೆ. ಜೆಡಿಎಸ್ ಬಹಿರಂಗವಾಗಿ 12 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದರೂ 9 ಕ್ಷೇತ್ರಗಳಿಗೆ ಪಟ್ಟು ಹಿಡಿಯಲು ನಿರ್ಧರಿಸಲಾಗಿದೆ . ಆದರೆ ಕಾಂಗ್ರೆಸ್ ಮಾತ್ರ ಏಳು ಸ್ಥಾನಗಳನ್ನು ಬಿಟ್ಟುಕೊಡಲು ಸಜ್ಜಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಚಾರ ಸಮಿತಿ ಸಭೆ, ಏನೇನು ಚರ್ಚೆಯಾಗಿದೆ?
ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಚಾರ ಸಮಿತಿಯ ಮೊದಲ ಸಭೆ ನಡೆದಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಸೇರಿದಂತೆ ವಿವಿಧ ತಂತ್ರಗಾರಿಕೆ, ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಮೈತ್ರಿ ಸರ್ಕಾರದಲ್ಲಿನ ಕಾಂಗ್ರೆಸ್ ಸಾಧನೆಗಳನ್ನು ಜನರಿಗೆ ತಲುಪಿಸುವ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿಗಳಾದ ವಿಷ್ಣುನಾಧನ್ ಅವರಿಗೆ ಹಳೇ ಮೈಸೂರು ಭಾಗದ ಪ್ರಚಾರ ಸಮಿತಿ ಮತ್ತು ಶಾಕೀರ್ ಶೈಲಜನ್ ಅವರಿಗೆ ಕಲಬುರಗಿ ಭಾಗದ ಪ್ರಚಾರ ಸಮಿತಿ ಉಸ್ತುವಾರಿ ವಹಿಸಲಾಯಿತು.












Click it and Unblock the Notifications