ಕುಮಾರಸ್ವಾಮಿಗೆ ಕಾಂಗ್ರೆಸ್‌ನವರು ಸ್ಲೋ ಪಾಯ್ಸನ್ ಕೊಡ್ತಿದ್ರಾ?: ಅಶೋಕ್

ಬೆಂಗಳೂರು, ನವೆಂಬರ್ 18: ಕುಮಾರಸ್ವಾಮಿ ದಿನವೂ ತಾವು ವಿಷಕಂಠ ಎಂದು ಹೇಳಿಕೊಳ್ಳುತ್ತಿದ್ದರು ಹಾಗಾದರೆ ಅವರಿಗೆ ಕಾಂಗ್ರೆಸ್‌ ಸ್ಲೋ ಪಾಯ್ಸನ್ ಕೊಡ್ತಿದ್ರಾ ಎಂದು ಸಚಿವ ಆರ್. ಅಶೋಕ್ ಪ್ರಶ್ನಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಗೆಲ್ಲುವ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ.ಸರ್ಕಾರ ಇದ್ದಾಗಲೂ ಸರಿಯಾಗಿ ಅವರು ಕೆಲಸ ಮಾಡಲಿಲ್ಲ,ಕುಮಾರಸ್ವಾಮಿ ದಿನಾಲೂ ವಿಷಕಂಠ ಅಂತ ಹೇಳಿಕೊಳ್ತಿದ್ರು,ಅಂದ್ರೆ ಕಾಂಗ್ರೆಸ್ ನವರು ಅವರಿಗೆ ಸ್ಲೋ ಪಾಯ್ಸನ್ ಕೊಡ್ತಿದ್ರು,ಅದಕ್ಕೆ ಸರ್ಕಾರ ಬಿದ್ದು ಹೋಯ್ತು ಎಂದು ಹೇಳಿದ್ದಾರೆ.

ಬೈರತಿ ಬಸವರಾಜ್, ಮುನಿರತ್ನ, ಎಂಟಿಬಿ, ಗೋಪಾಲಯ್ಯ ಎಲ್ಲರೂ ಅಭಿವೃದ್ಧಿ ಗೋಸ್ಕರ ಪಕ್ಷಕ್ಕೆ ಬಂದಿದ್ದಾರೆ ಎಂದರು.ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರೂ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ.

Congress Given Slow Poisons To HD Kumaraswamy

ತಮ್ಮ ಪರ ಕೆಲಸ ಮಾಡುವುದಕ್ಕೆ ಕಾಂಗ್ರೆಸ್ ಅಭ್ಯರ್ಥಿಗೆ ಕಾರ್ಯಕರ್ತರೇ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಕಾರ್ಯಕರ್ತರನ್ನು ಹುಡುಕಾಡುವ ಪರಿಸ್ಥಿತಿ ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಗೆಲ್ಲುವ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಅನರ್ಹ ಶಾಸಕರು ಬಿಜೆಪಿ ಸೇರಿಯಾಗಿದೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 9ರಂದು ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+