ಬಿಬಿಎಂಪಿ ಚುನಾವಣೆ : ಕಾಂಗ್ರೆಸ್ ಪಟ್ಟಿಯಲ್ಲಿ ವಯಸ್ಸು, ಜಾತಿ ಲೆಕ್ಕಾಚಾರ

ಬೆಂಗಳೂರು, ಆಗಸ್ಟ್ 11 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿರುವ ಕಾಂಗ್ರೆಸ್ ಪಕ್ಷ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿದೆ. 50 ವರ್ಷಕ್ಕಿಂತ ಕಡಿಮೆ ಇರುವ 162 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಹಿಂದಿನ ಬಾರಿ ಆಯ್ಕೆಯಾಗಿದ್ದ 32 ಅಭ್ಯರ್ಥಿಗಳು ಈ ಬಾರಿಯೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 198 ವಾರ್ಡ್‌ಗಳ ಪೈಕಿ 99 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. [46 ಪದವೀಧರರಿಗೆ ಟಿಕೆಟ್ ಭಾಗ್ಯ]

congress

ಅಭ್ಯರ್ಥಿಗಳ ವಯಸ್ಸು : 60 ವರ್ಷ ಮೀರಿದ ಇಬ್ಬರು ಅಭ್ಯರ್ಥಿಗಳಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಉಳಿದಂತೆ 30 ವರ್ಷಕ್ಕಿಂತ ಕಡಿಮೆ ಇರುವ 13, 31 ರಿಂದ 40 ವರ್ಷದೊಳಗಿನ 31, 41 ರಿಂದ 50 ವರ್ಷದೊಳಗಿನ 88, 50 ರಿಂದ 60 ವರ್ಷದ 34 ಅಭ್ಯರ್ಥಿಗಳಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. [ಬಿಬಿಎಂಪಿ ಚುನಾವಣೆ ಪಕ್ಷಗಳ ಬಲಾಬಲ]

ಜಾತಿ ಲೆಕ್ಕಾಚಾರ : ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಾಗಿದ್ದು 49 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಲಿಂಗಾಯತ ಸಮುದಾಯದ 3, ರೆಡ್ಡಿ 15, ಬ್ರಾಹ್ಮಣ 2, ಮುಸ್ಲಿಂ 23, ಕ್ರಿಶ್ಚಿಯನ್ 3, ಪರಿಶಿಷ್ಟ ಜಾತಿ 31, ಪರಿಶಿಷ್ಟ ಪಂಗಡ 4, ಇತರೆ ವರ್ಗದ 68 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. [ಬಿಬಿಎಂಪಿ ಚುನಾವಣೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲೇನಿದೆ?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+