ಮತದಾನಕ್ಕೆ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ಅನಂತ್‌ಕುಮಾರ್‌

ಬೆಂಗಳೂರು, ಮೇ 06: ಸಿದ್ದರಾಮಯ್ಯ ಅವರು ಮತದಾನಕ್ಕೆ ಮುಂಚೆಯೇ ಸೋಲೊಪ್ಪಿಕೊಂಡಿದ್ದಾರೆ, ಕಾಂಗ್ರೆಸ್‌ನ ಎಲ್ಲಾ ಪ್ರಮುಖ ನಾಯಕರು ತಮ್ಮ ತಮ್ಮ ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೇಳಿದರು.

ಬೊಮ್ಮನಹಳ್ಳಿ ಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಅವರ ಪರವಾಗಿ ಭರ್ಜರಿ ರೋಡ್ ಷೋ ಮಾಡಿದ ಅನಂತ್‌ಕುಮಾರ್, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ, ರಾಜ್ಯದಲ್ಲಿ ಬಿಜೆಪಿ ಮೋದಿ - ಅಮಿತ್ ಷಾ - ಯಡಿಯೂರಪ್ಪ ಅವರ ನೇತೃತ್ವದಲ್ಲಿ ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. 224 ಕ್ಷೇತ್ರಗಳಲ್ಲಿ 500 ಕ್ಕೂ ಹೆಚ್ಚು ಸಭೆಗಳನ್ನು ಮಾಡಿ ಜನರ ಸಂಪರ್ಕ ಮಾಡಿದ್ದೇವೆ ಎಂದರು.

ಬಿಜೆಪಿಯಲ್ಲಿ ತಾರಾ ಪ್ರಚಾರಕರ ದಂಡೆ ಇದೆ, ರಾಜ್ಯದ ಮೂಲೆ-ಮೂಲೆಗಳಲ್ಲಿ ಪ್ರಚಾರ ಕೈಗೊಂಡಿದ್ದೇವೆ. ಸಿದ್ದರಾಮಯ್ಯ ಅವರು ತಮ್ಮ ಪ್ರಚಾರವನ್ನು ಟ್ವಿಟ್ಟರ್‌ಗೆ ಸೀಮಿತಗೊಳಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾರ್ನೆರ್ ಮೀಟಿಂಗ್ ಮಾಡುವ ಪರಿಸ್ಥಿಗೆ ಬಂದಿದೆ ಎಂದು ವ್ಯಂಗ್ಯ ಮಾಡಿದರು.

Congress admitted its defeat before the voting: Ananth kumar

In Pics:ಬೊಮ್ಮನಹಳ್ಳಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಅನಂತ್ ಕುಮಾರ್ ಮತಯಾಚನೆ

ಕಾಂಗ್ರೆಸ್ ಅನ್ನು ಈಗಾಗಲೇ 21 ರಾಜ್ಯದಲ್ಲಿ ತಿರಸ್ಕರಿಸಿದ್ದಾರೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಪ್ರತಿನಿಧಿಸುವ ಅಮೇಥಿ ಮತ್ತು ರಾಯಬರೆಲಿಯಲ್ಲಿ ಒಬ್ಬ ಕಾಂಗ್ರೆಸ್‌ ಶಾಸಕರನ್ನೂ ಗೆಲ್ಲಿಸಿಲ್ಲಾ. ರಾಹುಲ್ ಗಾಂಧಿ ಮತ್ತು ಸೋನಿಯಾ ಅವರದು ಶೂನ್ಯ ಸಾಧನೆ ಎಂದರು.

ಅಮಿತ್ ಶಾ-ಕುಮಾರಸ್ವಾಮಿ ಗುಪ್ತ ಮಾತುಕತೆ ಮಾಡಿಕೊಂಡಿದ್ದಾರೆ ಎಂಬ ವಿಷಯದ ಬಗ್ಗೆ ಮಾತನಾಡಿದ ಅನಂತ್‌ಕುಮಾರ್‌ ಅವರು, ಅಮಿತ್ ಶಾ ಮತ್ತು ಕುಮಾರಸ್ವಾಮಿ ಮಾತುಕತೆ ಯನ್ನು ಮೊದಲು ಸಾಬೀತು ಮಾಡಲಿ ಇಲ್ಲದಿದ್ದಲ್ಲಿ ಸಿದ್ದರಾಮಯ್ಯ ಅವರು ಎರಡೂ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದು ತಮ್ಮ ಸುಳ್ಳನ್ನು ಒಪ್ಪಿಕೊಳ್ಳಬೇಕು ಎಂದು ಸವಾಲು.

Congress admitted its defeat before the voting: Ananth kumar

ಕಾಂಗ್ರೆಸ್ ಕೇವಲ ಟ್ವಿಟ್ಟರ್ ಪಾಲಿಟಿಕ್ಸ್ ಮಾಡುವ ಮೂಲಕ ಗೆಲ್ಲುವ ಕನಸು ಕಾಣುತ್ತಿದ್ದಾರೆ ಬೆಳಿಗ್ಗೆ ಸಿದ್ದರಾಮಯ್ಯ ಮಧ್ಯಾಹ್ನ ರಾಹುಲ್ ಗಾಂಧಿ ಸಂಜೆ ರಮ್ಯಾ ಟ್ವಿಟ್ ಮಾಡುತ್ತಾರೆ ಬಿಜೆಪಿ ವ್ಯಾಪಕ ಪ್ರಚಾರ ಮಾಡುತ್ತಿದ್ದು ಎಲ್ಲ ಕ್ಷೇತ್ರದ ಜನರನ್ನು ತಲುಪಿದ್ದೇವೆ 150 ಸೀಟ್ ಗೆಲ್ಲುವುದು ಗ್ಯಾರೆಂಟಿ ಎಂದು ವಿಶ್ವಾಸವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+