ಮುತ್ತಪ್ಪ ರೈ ವಿರುದ್ಧ ಆಪ್ತನಿಂದ ಸಿಸಿಬಿಗೆ ಕೊಲೆ ಬೆದರಿಕೆ ದೂರು
ಬೆಂಗಳೂರು, ಫೆಬ್ರವರಿ 27 : ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ವಿರುದ್ಧ ಅವರ ಬೆಂಬಲಿಗನೇ ಸಿಸಿಬಿಗೆ ದೂರು ನೀಡಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಕೆಲವು ದಿನಗಳ ಹಿಂದೆ ಮುತ್ತಪ್ಪ ರೈ ಘೋಷಣೆ ಮಾಡಿದ್ದಾರೆ.
ಮುತ್ತಪ್ಪ ರೈ ಬೆಂಬಲಿಗ ರಾಕೇಶ್ ಮಲ್ಲಿ ಗುರುವಾರ ಸಿಸಿಬಿಗೆ ಮುತ್ತಪ್ಪ ರೈ ವಿರುದ್ಧ ದೂರು ನೀಡಿದ್ದಾರೆ. ಆಸ್ತಿ ಮತ್ತು ಹಣದ ವಿಚಾರದಲ್ಲಿ ಮತ್ತಪ್ಪ ರೈ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೆಂಬಲಿಗನೇ ದೂರು ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಆಸ್ತಿ ಮತ್ತು ಹಣದ ವಿಚಾರದಲ್ಲಿ ಮುತ್ತಪ್ಪ ರೈ ಮೋಸ ಮಾಡಿದ್ದಾರೆ. ಇದನ್ನು ಕೇಳಿದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿಸಿಬಿಗೆ ದೂರು ಕೊಟ್ಟಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಮುತ್ತಪ್ಪ ರೈ ವಿರುದ್ಧ ಬೆಂಬಲಿಗ ಈಗ ದೂರು ಕೊಟ್ಟಿರುವುದು ಏಕೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕಾರ್ಮಿಕ ಸಂಘಟನೆ ಇಂಟೆಕ್‌ನ ರಾಜ್ಯ ಕಾರ್ಯದರ್ಶಿಯಾಗಿ 2ನೇ ಅವಧಿಗೆ ರಾಕೇಶ್ ಮಲ್ಲಿ ಫೆಬ್ರವರಿ 5ರಂದು ಆಯ್ಕೆಯಾಗಿದ್ದಾರೆ. ಮುತ್ತಪ್ಪ ರೈ ಜೊತೆ ಹಲವಾರು ವರ್ಷದಿಂದ ಅವರ ಸ್ನೇಹ ಹೊಂದಿದ್ದಾರೆ. ಆದರೆ, ರೈ ವಿರುದ್ಧ ಅವರೇ ದೂರು ಕೊಟ್ಟಿದ್ದಾರೆ.

ಹಣ, ಆಸ್ತಿಯ ವಿಚಾರಕ್ಕೆ ಗಲಾಟೆ?
ಹಲವಾರು ವರ್ಷಗಳಿಂದ ರಾಕೇಶ್ ಮಲ್ಲಿ ಮುತ್ತಪ್ಪ ರೈ ಜೊತೆಗೆ ಇದ್ದಾರೆ. ಆದರೆ, ಅವರಿಗೆ ಯಾವುದೇ ಆಸ್ತಿ ಕೊಟ್ಟಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರಕ್ಕಾಗಿಯೇ ಜಗಳ ಮಾಡಿಕೊಂಡು ಸಿಸಿಬಿಗೆ ರಾಕೇಶ್ ಮಲ್ಲಿ ದೂರು ನೀಡಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ.

ವಿಲ್ ಮಾಡಿಟ್ಟಿದ್ದಾರೆ
ಮುತ್ತಪ್ಪ ರೈ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಜನವರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಮುತ್ತಪ್ಪ ರೈ, "ಇನ್ನು ಎಷ್ಟು ದಿನ ಬದುಕುವೆ ಎಂದು ತಿಳಿದಿಲ್ಲ" ಎಂದು ಹೇಳಿದ್ದರು. ಆಸ್ತಿಯ ವಿಚಾರದಲ್ಲಿ ವಿಲ್ ಬರೆದಿಟ್ಟಿದ್ದೇನೆ ಎಂದು ಅವರು ಈಗಾಗಲೇ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಹೇಳಿದ್ದಾರೆ.

ವಿಲ್ ಪವರ್‌ನಿಂದ ಬದುಕಿದ್ದೇನೆ
ಕ್ಯಾನ್ಸರ್ ಪೀಡಿತ ಮುತ್ತಪ್ಪ ರೈ ದೆಹಲಿ ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಪರೀಕ್ಷೆ ಮಾಡಿದಾಗ ಕ್ಯಾನ್ಸರ್ ಬ್ರೈನ್ ತನಕ ಹರಡಿರುವುದು ಪತ್ತೆಯಾಗಿದೆ. "ವೈದ್ಯರ ಚಿಕಿತ್ಸೆ ಮತ್ತು ವಿಲ್ ಪವರ್‌ನಿಂದ ನಾನು ಬದುಕಿದ್ದೇನೆ" ಎಂದು ಮುತ್ತಪ್ಪ ರೈ ಹೇಳಿಕೊಂಡಿದ್ದಾರೆ.

ನೋಟಿಸ್ ನೀಡಬಹುದು
ರಾಕೇಶ್ ಮಲ್ಲಿ ಮುತ್ತಪ್ಪ ರೈ ವಿರುದ್ಧ ಸಿಸಿಬಿಗೆ ದೂರು ನೀಡಿದ್ದಾರೆ. ಸಿಸಿಬಿ ಪೊಲೀಸರು ವಿಚಾರಣೆಗೆ ಬರುವಂಮತೆ ಮುತ್ತಪ್ಪ ರೈಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಮುತ್ತಪ್ಪ ರೈ ಈ ದೂರಿನ ಕುರಿತು ಇನ್ನೂ ಯಾವದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications