ಭ್ರಷ್ಟಾಚಾರ: ಸಿಎಂ ಸೇರಿ 28 ಸಚಿವ ವಿರುದ್ಧ ಲೋಕಾಯುಕ್ತಕ್ಕೆ ದೂರು
ಕರ್ನಾಟಕ ಪೊಲೀಸ್ ಮಾಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ ಸಿಎಂ ಮತ್ತು ಸಂಪುಟದ 27 ಕ್ಯಾಬಿನೆಟ್ ಸಚಿವರು ಪೊಲೀಸ್ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು, ಮೇ 4: ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ 27 ಸಚಿವರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಕರ್ನಾಟಕ ಪೊಲೀಸ್ ಮಾಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಈ ದೂರು ಸಲ್ಲಿಸಿದ್ದಾರೆ. ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ ಸಿಎಂ ಮತ್ತು ಸಂಪುಟದ 27 ಕ್ಯಾಬಿನೆಟ್ ಸಚಿವರು ಪೊಲೀಸ್ ವರ್ಗಾವಣೆಯಲ್ಲಿ ದೊಡ್ಡ ಮಟ್ಟಿಗೆ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ಡಿಸೆಂಬರಿನಲ್ಲಿ ನಡೆದ ಪೊಲೀಸ್ ವರ್ಗಾವಣೆಯ ವೇಳೆ 41 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದರಲ್ಲಿ 21 ಪೊಲೀಸ್ ಅಧಿಕಾರಿಗಳು ತಮಗೆ ಬೇಕಾದ ಕಡೆ ವರ್ಗಾವಣೆ ಮಾಡಿಕೊಳ್ಳಲು ಸಚಿವರಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ 21 ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.
ಈ 21 ಅಧಿಕಾರಿಗಳು, ಸಿಎಂ ಹಾಗೂ 27 ಸಚಿವರ ವಿರುದ್ಧ ತನಿಖೆ ನಡೆಸುವಂತೆ ಅವರು ಲೋಕಾಯುಕ್ತರನ್ನು ಕೋರಿಕೊಂಡಿದ್ದಾರೆ.
ಆದರೆ ಶಶಿಧರ್ ವೇಣುಗೋಪಾಲ್ ಆರೋಪವನ್ನು ವರ್ಗಾವಣೆಗೊಂಡಿದ್ದ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಮುಖ್ಯಸ್ಥ ಎನ್ ಎಸ್ ಮೇಘರಿಕ್ ಹಾಗೂ ಎಸಿಬಿ ಮಾಜಿ ಮುಖ್ಯಸ್ಥ ಕೆ ವಿ ಗಗನ್ ದೀಪ್ ತಳ್ಳಿ ಹಾಕಿದ್ದಾರೆ.
ಈ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಕಾದು ನೋಡಬೇಕಾಗಿದೆ.












Click it and Unblock the Notifications