ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ದೂರು ದಾಖಲು
ಹುಲಿ ಉಗುರು ಧರಿಸಿದ್ದ ಆರೋಪದ ಅಡಿಯಲ್ಲಿ ಬಿಗ್ ಬಾಸ್ 10ನೇ ಆವೃತ್ತಿಯ ಅಭ್ಯರ್ಥಿ ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಕೂಡ ಹುಲಿ ಉಗುರು ಧರಿಸಿದ ಆರೋಪ ಮಾಡಿ ದೂರು ನೀಡಲಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಲಿ ಉಗುರು ಲಾಕೆಟ್ ಧರಿಸಿದ್ದಾರೆ ಎಂದು ಆರೋಪ ಮಾಡಿ ದೂರು ನೀಡಿದ್ದು, ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎಂದು ಆರೋಪಿಸಿದ್ದು ಇಬ್ಬರ ಮೇಲೆ ಅರಣ್ಯಾಧಿಕಾರಿಗೆ ದೂರು ನೀಡಲಾಗಿದೆ.

ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಎನ್ನುವವರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದು, ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದರಿಂದ ನಟ ದರ್ಶನ್ ಮತ್ತು ವಿನಯ್ ಗುರೂಜಿಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ದರ್ಶನ್ ಮೇಲೆ ಶಿವಕುಮಾರ್ ಆರೋಪ
ನಟ ದರ್ಶನ್ ಹಾಕಿರುವ ಬಂಗಾರದ ಚೈನ್‌ನಲ್ಲಿ ಹುಲಿಯ ಉಗುರು ಇದೆ. ಅವರು ಕಾನೂನು ಉಲ್ಲಂಘಿಸಿದ್ದಾರೆ. ಅವಧೂತ ಎನಿಸಿಕೊಂಡಿರುವ ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ, ಹುಲಿ ಉಗುರು ಧರಿಸಿದ್ದಕ್ಕೆ ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದಾರೆ, ಅದೇ ರೀತಿ ದರ್ಶನ್ ಮತ್ತು ವಿನಯ್ ಗುರೂಜಿಯನ್ನು ಕರೆದು ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.
ದರ್ಶನ್ ಧರಿಸಿರುವು ಹುಲಿ ಉಗುರು ಅಸಲಿಯೋ ನಕಲಿಯೋ ಎಂದು ಅಧಿಕಾರಿಗಳು ಪರಿಶೀಲನೆ ಮಾಡಬೇಕು. ದರ್ಶನ್ ಅವರು ಅರಣ್ಯ ಇಲಾಖೆಯ ರಾಯಭಾರಿ ಆಗಿದ್ದಾರೆ, ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ, ಅವರು ಧರಿಸಿದ್ದ ಹುಲಿ ಉಗುರು ಅಸಲಿಯಾ ಅಥವಾ ನಕಲಿಯಾ ಎಂದು ಪರಿಶೀಲನೆ ಮಾಡುವುದು ಅರಣ್ಯಾಧಿಕಾರಿಗಳ ಜವಾಬ್ದಾರಿ ಎಂದರು.
ನಟ ದರ್ಶನ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹುಲಿ ಉಗುರು ಧರಿಸಿದ್ದ ಫೋಟೊ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಇನ್ನು ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೊ ಕೂಡ ವೈರಲ್ ಆಗಿದ್ದು, ಇವರ ಮೇಲೆ ಕ್ರಮ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.
ಸಂತೋಷ್ ನ್ಯಾಯಾಂಗ ಬಂಧನಕ್ಕೆ
'ಬಿಗ್ ಬಾಸ್ ಕನ್ನಡ ಸೀಸನ್ 10'ರಲ್ಲಿ ಸ್ಪರ್ಧಿ ಆಗಿದ್ದ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿದ್ದು, ಸೋಮವಾರವೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications