ಖರ್ಗೆ ಬಳಿ 50,000 ಕೋಟಿ ಅಕ್ರಮ ಆಸ್ತಿ, ದೂರು
ಬೆಂಗಳೂರು, ಡಿ. 19: ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಕ್ರಮವಾಗಿ 50 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿದೆ.
ಸಮಾಜ ಪರಿವರ್ತನ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ರತ್ನಾಕರ್ ಅವರು ಭ್ರಷ್ಟಾಚಾರ ತಡೆ ಕಾಯಿದೆ ಅಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಚಿವರಾಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ಈ ಹಣ ಸಂಪಾದಿಸಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ. [ದಿನೇಶ್ ಗುಂಡೂರಾವ್ ವಿರುದ್ಧ ಭೂ ಅಕ್ರಮ ಆರೋಪ]
ಪ್ರಸ್ತುತ ಲೋಕಾಯುಕ್ತ ರಾಯಚೂರು ಘಟಕವು ಈ ದೂರನ್ನು ಪರಿಶೀಲಿಸುತ್ತಿದೆ. ಈ ಕುರಿತು ಕನ್ನಡ ಒನ್ಇಂಡಿಯಾ ಜೊತೆ ಮಾತನಾಡಿದ ಅಧಿಕಾರಿಗಳು, "ದೂರಿನಲ್ಲಿರುವ ಆರೋಪ ಕುರಿತು ತನಿಖೆ ನಡೆಸುತ್ತಿದ್ದೇವೆ. ಆರೋಪ ನಿಜವಾಗಿದ್ದರೆ ಎಫ್ಐಆರ್ ದಾಖಲಿಸಿ, ಪ್ರಕರಣ ನೋಂದಾಯಿಸಲಾಗುವುದು" ಎಂದು ತಿಳಿಸಿದ್ದಾರೆ. [ಶೆಟ್ಟರ್ ವಿರುದ್ಧದ ತನಿಖೆಗೆ ತಡೆಯಾಜ್ಞೆ]

ದೂರಿನಲ್ಲಿರುವ ಆರೋಪಗಳೇನು?
ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಹಣ ಸಂಪಾದಿಸಿದ್ದಾರೆ. ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲು 1,427 ಸಹಾಯಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್‌ಗಳನ್ನು ಅಕ್ರಮವಾಗಿ ನೇಮಕಾತಿ ಮಾಡಿದ್ದಾರೆ. 1980ರಿಂದ ಕಂದಾಯ ಸಚಿವರಾಗಿದ್ದ ಖರ್ಗೆ ಭಾರೀ ಪ್ರಮಾಣದ ಸಂಪತ್ತು ಗಳಿಸಿದ್ದು, ಅದರ ಮೊತ್ತ 50,000 ಕೋಟಿ ರೂ.ಗಳಷ್ಟಾಗುತ್ತದೆ. [ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಕಂಪ್ಲೀಟ್ ಡೀಟೇಲ್ಸ್]
ಎಷ್ಟು ಆಸ್ತಿಗಳಿವೆ?
ಬನ್ನೇರುಘಟ್ಟದಲ್ಲಿ 500 ಕೋಟಿ ರೂ. ಮೌಲ್ಯದ ಬೃಹತ್ ಸಂಕೀರ್ಣ, ಚಿಕ್ಕಮಗಳೂರಿನಲ್ಲಿ 1,000 ಕೋಟಿ ರೂ. ಮೌಲ್ಯದ 300 ಎಕರೆ ವಿಸ್ತೀರ್ಣದ ಕಾಫಿ ತೋಟ, 50 ಕೋಟಿ ರೂ. ಮೌಲ್ಯದ ಒಂದು ಮನೆ, ಕೆಂಗೇರಿಯಲ್ಲಿ 40 ಎಕರೆ ವಿಸ್ತೀರ್ಣದ ತೋಟದ ಮನೆ, ಬೆಂಗಳೂರಿನಲ್ಲಿ ಎಂ.ಎಸ್. ರಾಮಯ್ಯ ಮಹಾವಿದ್ಯಾಲಯದ ಸಮೀಪ 25 ಕೋಟಿ ರೂ. ಮೌಲ್ಯದ ಒಂದು ಕಟ್ಟಡ, ಆರ್.ಟಿ. ನಗರದಲ್ಲಿ ಒಂದು ಮನೆ, ಬಳ್ಳಾರಿ ರಸ್ತೆಯಲ್ಲಿ 17 ಎಕರೆ ವಿಸ್ತೀರ್ಣದ ಭೂಮಿ, ಇಂದಿರಾನಗರದಲ್ಲಿ ಮೂರು ಅಂತಸ್ತುಗಳ ಒಂದು ಕಟ್ಟಡ, ಸದಾಶಿವನಗರದಲ್ಲಿ ಎರಡು ಮನೆಗಳು ಮತ್ತು ಇತರ ಆಸ್ತಿಗಳು. [ಭೂ ಹಗರಣ : ಖಮರುಲ್ಲಾ ಇಸ್ಲಾಂ ವಿರುದ್ಧ ತನಿಖೆ]
ಇಷ್ಟಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರು ಮೈಸೂರು, ಕಲಬುರಗಿ, ಚೆನ್ನೈ, ಗೋವಾ, ಪುಣೆ, ನಾಗಪುರ, ಮುಂಬಯಿ ಮತ್ತು ನವದೆಹಲಿಯಲ್ಲಿ ಆಸ್ತಿ ಹೊಂದಿದ್ದಾರೆ. ಕೆಲವು ಆಸ್ತಿಗಳು ಗಂಡುಮಕ್ಕಳು, ಹೆಣ್ಣುಮಕ್ಕಳು, ಅಳಿಯ ಮತ್ತು ಪತ್ನಿಯ ಹೆಸರಿನಲ್ಲಿದೆ ಎಂದು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ.












Click it and Unblock the Notifications