Bengaluru Weather: ಬೆಂಗಳೂರಿನಲ್ಲಿ ಚಳಿಯೋ ಚಳಿ: 13 ಡಿಗ್ರಿಗೆ ಕುಸಿದ ತಾಪಮಾನ, ಇದು ವಾಡಿಕೆಗಿಂತ ಕಡಿಮೆ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಇನ್ನೂ ಕೆಲವು ದಿನಗಳು ಶೀತ ಅಲೆ, ಹೆಚ್ಚಿನ ಚಳಿಯ ವಾತಾವರಣಕ್ಕೆ ಸಾಕ್ಷಿ ಅಗಲಿದೆ. ಜನವರಿ ಮೊದಲ ವಾರವೇ ಅತ್ಯಧಿಕ ಚಳಿ ದಾಖಲಾಗಿದ್ದು, ಕನಿಷ್ಠ ತಾಪಮಾನವು ಕುಸಿದಿದೆ. ಸಾಮಾನ್ಯ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗಿದೆ. ಅಂದರೆ ಇಂದು ಗುರುವಾರ ಮತ್ತು ಕಳೆದ ಸೋಮವಾರ 13 ಡಿ.ಸೆ. ಮತ್ತು ನೆನ್ನೆ ಬುಧವಾರ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಕಳೆದ ಒಂದೂವರೆ ದಶಕದಲ್ಲಿ ಬಿದ್ದ ಚಳಿಯ ವರ್ಷಗಳಿಗೆ ಸೇರ್ಪಡೆ ಆಗಿದೆ.
ಹಿಂದಿನ ಹದಿನೈದು ವರ್ಷಗಳಲ್ಲಿ ಏಳು ವರ್ಷಗಳ ಪ್ರತಿ ಜನವರಿಯಲ್ಲಿ ಹೆಚ್ಚಿನ ಚಳಿ ದಾಖಲಾಗಿದೆ. ಅದೇ ರೀತಿ 2026ರ ಹೊಸ ವರ್ಚಾಚರಣೆ ಬೆನ್ನಲ್ಲೆ ನಗರದಲ್ಲಿ ಚಳಿ ಆವರಿಸಿದೆ. ನಗರದಲ್ಲಿ ಮುಂದಿನ ಮೂರರಿಂದ ಐದು ದಿನ ತಾಪಮಾನದಲ್ಲಿ ಇಳಿಕೆ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಗುರುವಾರ (ಜನವರಿ 8) ಸಂಜೆ ನಗರದಲ್ಲಿ ದಾಖಲಾದ ತಾಪಮಾನ ವಿವರ ಇಲ್ಲಿದೆ.

ಇಂದು ಸಹ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನಲ್ಲಿ 13.2ಡಿಗ್ರಿ ಸೆಲ್ಸಿಯಸ್, ಬೆಂಗಳೂರು ನಗರದಲ್ಲಿ 14.9, ಬೆಂಗಳೂರು ಎಚ್‌ಎಎಲ್ ನಲ್ಲಿ 14.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದೇ ಪ್ರದೇಶಗಳ ಪೈಕಿ ನೆನ್ನೆ ಬುಧವಾರ ಎಚ್‌ಎಎಲ್ ವಿಮಾನ ನಿಲ್ದಾಣ 14 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿತ್ತು. ಇದು ಸಾಮಾನ್ಯ ಕನಿಷ್ಠ ತಾಪಮಾನಕ್ಕಿಂತ ಕೊಂಚ (0,7) ರಷ್ಟು ಕಡಿಮೆ ಎಂದು ಐಎಂಡಿ ತಿಳಿಸಿದೆ. ಇನ್ನೂ ಗರಿಷ್ಠ ತಾಪಮಾನ ನಗರದಲ್ಲಿ 26.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ನಿರೀಕ್ಷಿತ ವಾಡಿಕೆ ತಾಪಮಾನಕ್ಕಿಂತ (0.5) ಕಡಿಮೆ ಎನ್ನಲಾಗಿದೆ. ಅಂದರೆ ನಗರದಲ್ಲಿ ಒಣಹವೆ ವಾತಾವರಣ ಅಷ್ಟಾಗಿ ಕಂಡು ಬಂದಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.
ಬೆಂಗಳೂರು ಹವಾಮಾನ ಮುನ್ಸೂಚನೆ
ನಾಳೆ ಶುಕ್ರವಾರ ತಾಪಮಾನವು ಕನಿಷ್ಠ 12.5 ಡಿಗ್ರಿ ಸೆಲ್ಸಿಯಸ್ ಗೆ ಕುಸಿಯಲಿದೆ. ಅಷ್ಟು ಮಾತ್ರವಲ್ಲದೇ ಕನಿಷ್ಠ 11.7 ಡಿಗ್ರಿ ಸೆಲ್ಸಿಯಸ್‌ಗೂ ಇಳಿಯುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಡ್ಯಾಶಬೋರ್ಡ್‌ನಲ್ಲಿನ ಅಂಕಿ ಸಂಖ್ಯೆ ತಿಳಿಸಿದೆ.
ಇದರೊಂದಿಗೆ ಮುಂದಿನ ಮೂರು ದಿನ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ, ಚಳಿ ಕಂಡು ಬರಲಿದೆ. ಬೆಳಗ್ಗೆ ರಾತ್ರಿ ಹೆಚ್ಚಿನ ಚಳಿ ಆವರಿಸಲಿದೆ. ಕೆಲವು ಬಡಾವಣೆಗಳಲ್ಲಿ ಬೆಳಗ್ಗೆ ಮಂಜು ಬೀಳುವ ಸಾಧ್ಯತೆ ಇದೆ. ಈ ಮೂರು ದಿನ ಗರಿಷ್ಠ 27ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಿಂದಿನ ವರ್ಷಗಳ ಜನವರಿ ಚಳಿ ದಾಖಲೆ ವಿವರ
ಐಎಂಡಿ ಮಾಹಿತಿ ಪ್ರಕಾರ, ನಗರದಲ್ಲಿ 1884 ರಂದು ಜನವರಿ 13ರಂದು ಕನಿಷ್ಠ 7.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಅತ್ಯಧಿಕ ಚಳಿ ಉಂಟು ಮಾಡಿತ್ತು. ಅಂದು ನಗರ ಚಳಿಗೆ ತತ್ತರಿಸಿತ್ತು. ಇನ್ನೂ ಕಳೆದ 15 ವರ್ಷಗಳಲ್ಲಿ ಜನವರಿಯಲ್ಲಿ ಬೆಂಗಳೂರಿನಲ್ಲಿ ದಾಖಲಾದ ಕನಿಷ್ಠ ತಾಪಮಾನ 2012 ರಲ್ಲಿ (12 ಡಿಸೆ) ದಾಖಲಾಗಿತ್ತು. ನಂತರ 2024 ರಲ್ಲಿ, ಜನವರಿಯಲ್ಲಿ ಸಹ ವಾಡಿಕೆಯಷ್ಟು ಕನಿಷ್ಠ ತಾಪಮಾನ ಕಂಡು ಬಂದಿದ್ದು ಬಿಟ್ಟರೆ ಈ ವರ್ಷ ಮತ್ತೆ ಚಳಿ ಹೆಚ್ಚಾಗಿದೆ ಎಂದು ಅಂಕಿ ಸಂಖ್ಯೆಗಳು ಮಾಹಿತಿ ನೀಡಿವೆ.
ಇನ್ನೂ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಶೀತ ಅಲೆ ಕಂಡು ಬರಲಿದೆ. ದಕ್ಷಿಣ ಜಿಲ್ಲೆಗಳಲ್ಲಿ ತಾಪಮಾನ ಕುಸಿದು, ಒಂದಷ್ಟು ಚಳಿ ವಾತಾವರಣ ನಿರ್ಮಾಣವಾಗಲಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications