ಶುರುವಾಯ್ತು ಚಳಿಗಾಲ: ಈ ದಿನ ಅತಿ ಹೆಚ್ಚು ಚಳಿಯನ್ನು ಅನುಭವಿಸಿದ ಸಿಲಿಕಾನ್ ಸಿಟಿ: ತಾಪಮಾನದಲ್ಲಿ ಇಳಿಕೆ!
ಬೆಂಗಳೂರು ಅಕ್ಟೋಬರ್ 25: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ (ಅಕ್ಟೋಬರ್ 24) ಅಕ್ಟೋಬರ್ ತಿಂಗಳಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದೆ. ಇದರೊಂದಿಗೆ ಚಳಿಗಾಲದ ಆರಂಭದ ಮುನ್ಸೂಚನೆಯನ್ನು ನೀಡಿದೆ.
ಈ ಬಾರಿ ಹೆಚ್ಚು ಮಳೆಯಾಗದೇ ಇದ್ದರು ಬೆಂಗಳೂರು ಮಂಗಳವಾರದಂದು ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಚಳಿಯನ್ನು ಕಂಡಿದೆ. ಭಾರತ ಹವಾಮಾನ ಇಲಾಖೆ (IMD) ಯ ಅಂಕಿಅಂಶಗಳ ಪ್ರಕಾರ ಸಿಲಿಕಾನ್ ಸಿಟಿ ಮಂಗಳವಾರ ಅಕ್ಟೋಬರ್‌ನ ಅತ್ಯಂತ ಚಳಿಯನ್ನು ಅನುಭವಿಸಿದೆ.

ಬೆಂಗಳೂರು ಸಿಟಿ ನಿಲ್ದಾಣದಲ್ಲಿ ಕಳೆದ ದಿನ ಬೆಳಿಗ್ಗೆ 8.30ರ ಹೊತ್ತಿಗೆ 17.1 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ರೂಢಿಗಿಂತ ಸುಮಾರು ಎರಡು ಡಿಗ್ರಿ ಕಡಿಮೆವಾಗಿದೆ. ಇನ್ನೂ ಕೆಐಎಎಲ್ ಮತ್ತು ಎಚ್ಎಎಲ್ ವಿಮಾನ ನಿಲ್ದಾಣಗಳಲ್ಲಿ ಕ್ರಮವಾಗಿ 17.2 ಮತ್ತು 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಅಕ್ಟೋಬರ್ 18 ಅನ್ನು ಹೊರತುಪಡಿಸಿ ಅಕ್ಟೋಬರ್‌ನಲ್ಲಿ ಉಳಿದ ದಿನಗಳಲ್ಲಿ ಬೆಳಿಗ್ಗೆ ತಾಪಮಾನ 18.6 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕ್ರಮೇಣ 19 ಮತ್ತು 21 ಡಿಗ್ರಿ ಸೆಲ್ಸಿಯಸ್ ನಡುವೆ ತಾಪಮಾನ ಇರುತ್ತದೆ. ಹೀಗಾಗಿ ನಗರದಲ್ಲಿ 17.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದು ಆಶ್ಚರ್ಯಕರವಾಗಿದೆ. ಈ ಕುಸಿತಕ್ಕೆ ನಿಖರವಾದ ಕಾರಣವನ್ನು ಪ್ರಸ್ತುತಪಡಿಸಲು ಸಾಧ್ಯವಾಗಿಲ್ಲ. ಈ ದಿನದ ಕಡಿಮೆ ತಾಪಮಾನ ಚಳಿಯನ್ನು ಸೂಚಿಸುತ್ತದೆ. ಗರಿಷ್ಠ ತಾಪಮಾನ ಅತ್ಯಂತ ಬಿಸಿಯನ್ನು ಸೂಚಿಸುತ್ತದೆ.
ಅಕ್ಟೋಬರ್ ತಿಂಗಳಲ್ಲಿ ಇದು ಕನಿಷ್ಠ ತಾಪಮಾನವಾಗಿದೆ ಎಂದು ಬೆಂಗಳೂರಿನ IMD ಯ ಹವಾಮಾನ ಕೇಂದ್ರದ ಮುಖ್ಯಸ್ಥ ಎ ಪ್ರಸಾದ್ ಡಿಹೆಚ್‌ಗೆ ತಿಳಿಸಿದರು. ಈ ಹಿಂದೆ ಅಂದರೆ 2022 ಅಕ್ಟೋಬರ್ 25ರಂದು ಬೆಂಗಳೂರಿನಲ್ಲಿ 15.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ತಾಪಮಾನ ಹೆಚ್ಚಾಗಿದ್ದರೂ ಈ ವರ್ಷದ ಅಕ್ಟೋಬರ್ ತಿಂಗಳ ಅತ್ಯಂತ ಕಡಿಮೆ ತಾಪಮಾನವಾಗಿದೆ.

ಈ ಬಾರಿ ಹೆಚ್ಚು ಚಳಿ ಇರುವುದಿಲ್ಲ
ನವೆಂಬರ್ ಕೊನೆಯ ವಾರದಿಂದ ನಗರವು ಚಳಿಗಾಲದ ಪರಿಣಾಮವನ್ನು ಕಾಣುವ ಸಾಧ್ಯತೆಯಿದೆ. ಎಲ್ ನಿನೋ ಪ್ರಭಾವದಿಂದಾಗಿ ಕಳೆದ ವರ್ಷದಂತೆ ಕಠಿಣ ಚಳಿಗಾಲದ ಸಂಭವನೀಯತೆ ಈ ವರ್ಷ ತುಂಬಾ ಕಡಿಮೆಯಾಗಿದೆ. ನವೆಂಬರ್‌ನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು IMD ಯ ಪ್ರಸಾದ್ ಹೇಳಿದ್ದಾರೆ.
ಬೆಂಗಳೂರು ಹವಾಮಾನ ಹ್ಯಾಂಡಲ್ ಅನ್ನು ನಡೆಸುತ್ತಿರುವ ಹವಾಮಾನ ಉತ್ಸಾಹಿಗಳ ಗುಂಪಿನ ಭಾಗವಾಗಿರುವ ಸುಬ್ರಮಣಿಯನ್ ಅವರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹೀಗೆ ಬರೆದಿದ್ದಾರೆ: "ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಕಾರಣ ರಾತ್ರಿಯ ವೇಳೆ ಕೆಲವು ದಿನಗಳವರೆಗೆ ತಂಪಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಚಂಡಮಾರುತ ಬಾಂಗ್ಲಾದೇಶದ ಕಡೆಗೆ ಚಲಿಸುತ್ತಿದೆ. ಇದು ಉತ್ತರದಿಂದ ಸ್ವಲ್ಪ ಒಣ ಗಾಳಿಯನ್ನು ತರುತ್ತದೆ ಮತ್ತು ಈಶಾನ್ಯ ಮಾನ್ಸೂನ್ ಅನ್ನು ಅಡ್ಡಿಪಡಿಸುತ್ತದೆ. ಇದು ಶುಷ್ಕ ಗಾಳಿಯಾಗಿರುತ್ತದೆ ಮತ್ತು ಕನಿಷ್ಠ ತಾಪಮಾನವು ಮುಂದಿನ ಎರಡು-ಮೂರು ದಿನಗಳಲ್ಲಿ ಕಡಿಮೆಯಾಗಬಹುದು. ಆದರೆ ತಾಪಮಾನ ಅಧಿಕವಾಗಬಹುದು. ಇದು ಸಣ್ಣ ಆರಂಭಿಕ ಚಳಿಗಾಲದಂತೆ ಇರುತ್ತದೆ. ಶುಷ್ಕತೆಯಿಂದಾಗಿ ಈ ದಿನಗಳು ಬೆಚ್ಚಗಿರುತ್ತದೆ. ಆದರೆ ಮುಂಜಾನೆ ತಂಪಾಗಿರುತ್ತದೆ'' ಎಂದಿದ್ದಾರೆ.












Click it and Unblock the Notifications