ಹುಳಿಮಾವು ಕೆರೆ ದುರಂತ: 50 ಸಾವಿರ ಪರಿಹಾರ ಘೋಷಣೆ
Recommended Video
ಬೆಂಗಳೂರು, ನವೆಂಬರ್ 26: ಹುಳಿಮಾವು ಕೆರೆ ಕಟ್ಟೆ ಒಡೆದು ನೂರಾರು ಕುಟುಂಬಗಳು ಮನೆ ಕಳೆದುಕೊಂಡಿದ್ದು, ದುರಂತದಿಂದ ಸಂತ್ರಸ್ತರಾಗಿರುವವರಿಗೆ ಸರ್ಕಾರ ನೆರವು ಘೊಷಿಸಿದೆ.
ಕೆರೆ ಕಟ್ಟೆ ಒಡೆದು ಮನೆಗಳಿಗೆ ನೀರು ನುಗ್ಗಿದ್ದರಿಂದ 319 ಕುಟುಂಬಗಳು ಬೀದಿಗೆ ಬಂದಿದ್ದು, ಮನೆ ಕಳೆದುಕೊಂಡ ಎಲ್ಲರ ಖಾತೆಗಳಿಗೆ ಇಂದು ಸಂಜೆ ಒಳಗೆ 50,000 ಹಣ ಜಮೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಸಹ ಮಾಡಿರುವ ಯಡಿಯೂರಪ್ಪ, 'ಹುಳಿಮಾವು ದುರಂತದಿಂದ ಮನೆ ಕಳೆದುಕೊಂಡ 319 ಕಬಡ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಈ ಕೂಡಲೇ 50,000 ಪರಿಹಾರ ಧನ ಜಮೆ ಮಾಡುವಂತೆ ಸೂಚಿಸಲಾಗಿದೆ' ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರು ಇಂದು ಹುಳಿಮಾವು ಕೆರೆ ದುರಂತ ಸಂಭವಿಸಿರುವ ಪ್ರದೇಶಕ್ಕೆ ಸಹ ತೆರಳಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೆ, ರಕ್ಷಣಾ ಕಾರ್ಯಕ್ಕೆ ಸಲಹೆ ಸೂಚನೆಗಳನ್ನು ನೀಡಿದರು.
ಸಂತ್ರಸ್ತರನ್ನು ಸಹ ಭೇಟಿಯಾದ ಯಡಿಯೂರಪ್ಪ ಕೆಲವರಿಗೆ ಸ್ಥಳದಲ್ಲಿಯೇ ಪರಿಹಾರವನ್ನೂ ವಿತರಿಸಿದರು. ಈ ಸಮಯದಲ್ಲಿ ಯಡಿಯೂರಪ್ಪ ಜೊತೆಗೆ ಕೆಲವು ಶಾಸಕರು, ಸಚಿವರು ಹಾಜರಿದ್ದರು.












Click it and Unblock the Notifications